ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಎಲ್‌ಎಫ್, ಭಾರತಿ ಕಂಪೆನಿ ಟ್ರಸ್ಟ್ ಬಿಜೆಪಿಗೆ ನೀಡಿದ್ದು 600 ಕೋಟಿ ರೂ. ದೇಣಿಗೆ

|
Google Oneindia Kannada News

ನವದೆಹಲಿ, ಜುಲೈ 15: ರಾಜಕೀಯ ಪಕ್ಷಗಳು ವಿವಿದ ಕಾರ್ಪೊರೇಟ್ ಕಂಪೆನಿಗಳಿಂದ ದೇಣಿಗೆ ಪಡೆದುಕೊಳ್ಳುತ್ತಿರುವುದು ಗೋಪ್ಯ ಸಂಗತಿಯೇನಲ್ಲ. ಆದರೆ, ಅವುಗಳು ನೀಡುವ ದೇಣಿಗೆಯ ಮೊತ್ತವೆಷ್ಟು ಎಂದು ತಿಳಿದರೆ ಕ್ಷಣಕಾಲ ದಂಗಾಗುತ್ತೀರಿ.

ಡಿಎಲ್‌ಎಫ್ ಲಿಮಿಟೆಡ್ ಮತ್ತು ಭಾರ್ತಿ ಎಂಟರ್‌ಪ್ರೈಸಸ್ ಲಿಮಿಟೆಡ್ ಸೇರಿದಂತೆ ಕೆಲವು ಕಂಪೆನಿಗಳು 2017-18ರವರೆಗೆ ಕಳೆದ ಆರು ವರ್ಷಗಳಲ್ಲಿ ಬಿಜೆಪಿಗೆ ನೀಡಿರುವ ದೇಣಿಗೆ ಸುಮಾರು 600 ಕೋಟಿ ರೂಪಾಯಿ. ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ದೇಣಿಗೆಗಳ ಕುರಿತಾಗಿ ನಡೆಸಲಾದ ವಿಶ್ಲೇಷಣಾ ಅಧ್ಯಯನವೊಂದು ಈ ಮಾಹಿತಿ ನೀಡಿದೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) 2004-05 ರಿಂದ 2017-18ರ ಅವಧಿಯಲ್ಲಿ ಹಂಚಿಕೆಯಾದ ದೇಣಿಗೆ ವಿವರಗಳ ಕುರಿತು ಮೂರು ಪ್ರತ್ಯೇಕ ವಿಶ್ಲೇಷಣಾ ಅಧ್ಯಯನಗಳನ್ನು ನಡೆಸಿದೆ. 2014ರ ಈಚೆಗೆ 'ಪ್ರುಡೆಂಟ್ ಎಲೆಕ್ಟೊರಲ್ ಟ್ರಸ್ಟ್' ಎಂದು ಹೆಸರು ಬದಲಿಸಿಕೊಂಡಿರುವ ಸತ್ಯ ಎಲೆಕ್ಟೊರಲ್ ಟ್ರಸ್ಟ್, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದರಲ್ಲಿ ಮುಂಚೂಣಿಯ ಸ್ಥಾನವನ್ನು ಕಾಯ್ದುಕೊಂಡಿದೆ.

ಪಾರ್ಟಿ ಫಂಡ್ ಸಂಗ್ರಹದಲ್ಲಿ ಕಮಲ ಪಕ್ಷವೇ ನಂಬರ್ ಒನ್ಪಾರ್ಟಿ ಫಂಡ್ ಸಂಗ್ರಹದಲ್ಲಿ ಕಮಲ ಪಕ್ಷವೇ ನಂಬರ್ ಒನ್

ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಮೊದಲ ಬಾರಿಗೆ ಅಧಿಕಾರಕ್ಕೆ ಬರುವವರೆಗೂ ನಂಬರ್ 1 ಸ್ಥಾನದಲ್ಲಿದ್ದ ಆದಿತ್ಯ ಬಿರ್ಲಾ ಗ್ರೂಪ್‌ನ 'ಜನರಲ್ ಎಲೆಕ್ಟೊರಲ್ ಟ್ರಸ್ಟ್'ನ ಸ್ಥಾನವನ್ನು ಪ್ರುಡೆಂಟ್ ಎಲೆಕ್ಟೊರಲ್ ಟ್ರಸ್ಟ್ ಕಿತ್ತುಕೊಂಡಿದೆ. ಅಲ್ಲಿಂದ ಈವರೆಗೂ ಮೊದಲ ಸ್ಥಾನದಲ್ಲಿಯೇ ಇದೆ.

ಕಾಂಗ್ರೆಸ್‌ಗೆ ಕಡಿಮೆ ದೇಣಿಗೆ

ಕಾಂಗ್ರೆಸ್‌ಗೆ ಕಡಿಮೆ ದೇಣಿಗೆ

ಅಂದಹಾಗೆ, 2012-13ರಿಂದ 2017-18ರ ಅವಧಿಯಲ್ಲಿ ಕಾಂಗ್ರೆಸ್‌ಗೆ ದೇಣಿಗೆ ನೀಡಿದ ಕಂಪೆನಿಗಳಲ್ಲಿಯೂ ಪ್ರುಡೆಂಟ್ ಎಲೆಕ್ಟೊರಲ್ ಟ್ರಸ್ಟ್ ಮುಂಚೂಣಿಯಲ್ಲಿದೆ. ಆದರೆ, ಇದರ ಮೊತ್ತ ಬಿಜೆಪಿಗೆ ನೀಡಿದ ದೇಣಿಗೆಗೆ ಹೋಲಿಸಿದರೆ ತೀರಾ ಕಡಿಮೆ. ಬಿಜೆಪಿಗೆ ಸುಮಾರು 600 ಕೋಟಿ ನೀಡಿದ್ದರೆ, ಕಾಂಗ್ರೆಸ್‌ಗೆ ನೀಡಿರುವುದು 81.15 ಕೋಟಿ ರೂಪಾಯಿ.

ಎಲ್ಲಾ ಪಕ್ಷಕ್ಕೆ ಸಿಕ್ಕಿರುವ ದೇಣಿಗೆಯಲ್ಲಿ ಬಿಜೆಪಿಗೆ 86% ರಷ್ಟು ಪಾಲುಎಲ್ಲಾ ಪಕ್ಷಕ್ಕೆ ಸಿಕ್ಕಿರುವ ದೇಣಿಗೆಯಲ್ಲಿ ಬಿಜೆಪಿಗೆ 86% ರಷ್ಟು ಪಾಲು

ಟ್ರಸ್ಟ್‌ಗಳಿಂದ ಹಣದ ಹೊಳೆ

ಟ್ರಸ್ಟ್‌ಗಳಿಂದ ಹಣದ ಹೊಳೆ

ಈ ರೀತಿ ಹಣದ ಹೊಳೆ ಹರಿಸುವ ಎಲೆಕ್ಟೊರಲ್ ಟ್ರಸ್ಟ್‌ಗಳು ಲಾಭ ರಹಿತ ಸಂಸ್ಥೆಗಳಾಗಿವೆ. ಇಲ್ಲಿಗೆ ವಿವಿಧ ಕಾರ್ಪೊರೇಟ್ ಮತ್ತು ವ್ಯಾಪಾರ ಉದ್ದಿಮೆಗಳಿಂದ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಧನಸಾಗರ ಹರಿದುಬರುತ್ತದೆ. ಎಲ್ಲ ವ್ಯವಹಾರಗಳನ್ನೂ ದಾಖಲಿಸಿಕೊಳ್ಳಲಾಗುತ್ತದೆ ಮತ್ತು ಲೆಕ್ಕಪರಿಶೋಧನಾ ವರದಿಯನ್ನು ಚುನಾವಣಾ ಆಯೋಗಕ್ಕೆ ವಾರ್ಷಿಕ ಮಾಹಿತಿ ನೀಡಲಾಗುತ್ತದೆ.

ಅಧಿಕ ಪ್ರಮಾಣದ ದೇಣಿಗೆ

ಅಧಿಕ ಪ್ರಮಾಣದ ದೇಣಿಗೆ

ಒಂದು ವಲಯವಾಗಿ ಎಲೆಕ್ಟೊರಲ್ ಟ್ರಸ್ಟ್‌ಗಳು ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೆ ಬೇರೆ ಯಾವ ಮೂಲಗಳಿಗಿಂತಲೂ ಅಧಿಕ ಪ್ರಮಾಣದಲ್ಲಿ ಅಧಿಕೃತ ದೇಣಿಗೆಗಳನ್ನು ನೀಡುತ್ತವೆ ಎಂದು ಎಡಿಆರ್ ಅಧ್ಯಯನ ತಿಳಿಸಿದೆ.

ಇಂತಹ ಟ್ರಸ್ಟ್‌ಗಳ ಮೂಲಕ ರಾಜಕೀಯ ದೇಣಿಗೆ ನೀಡುವ ಮೊತ್ತವು ದೇಶದಲ್ಲಿ ರಾಜಕೀಯ ಪಕ್ಷಗಳು ಒಟ್ಟಾರೆ ಪಡೆದುಕೊಳ್ಳುವ ದೇಣಿಗೆ ಮೊತ್ತಕ್ಕೆ ಹೋಲಿಸಿದರೆ ತೀರಾ ಕಡಿಮೆ. 20 ಸಾವಿರಕ್ಕಿಂತ ಕಡಿಮೆ ದೇಣಿಗೆ ಮೊತ್ತ ಪಡೆದರೆ ರಾಜಕೀಯ ಪಕ್ಷಗಳು ಅದನ್ನು ಬಹಿರಂಗಪಡಿಸುವ ಅಗತ್ಯವಿಲ್ಲ.

ದೇಣಿಗೆ ವಿವರ ಸಲ್ಲಿಸಿ: ರಾಜಕೀಯ ಪಕ್ಷಗಳಿಗೆ ಸುಪ್ರೀಂಕೋರ್ಟ್ ಮಹತ್ವದ ಸೂಚನೆ ದೇಣಿಗೆ ವಿವರ ಸಲ್ಲಿಸಿ: ರಾಜಕೀಯ ಪಕ್ಷಗಳಿಗೆ ಸುಪ್ರೀಂಕೋರ್ಟ್ ಮಹತ್ವದ ಸೂಚನೆ

ಎಲೆಕ್ಟೊರಲ್ ಬಾಂಡ್‌ಗಳಿಂದ ತೊಂದರೆ

ಎಲೆಕ್ಟೊರಲ್ ಬಾಂಡ್‌ಗಳಿಂದ ತೊಂದರೆ

ಆದರೆ, 2019ರ ಲೋಕಸಭೆ ಚುನಾವಣೆಗೂ ಮುನ್ನ ಪರಿಚಯಿಸಲಾದ ಎಲೆಕ್ಟೊರಲ್ ಬಾಂಡ್‌ಗಳನ್ನು ಬಳಸಿಕೊಂಡು ಈ ಸೀಮಿತ ಮಾಹಿತಿ ಪಡೆದುಕೊಳ್ಳುವ ಅವಕಾಶವನ್ನೂ ಅಸಾಧ್ಯವನ್ನಾಗಿಸಲಾಗಿದೆ.

ದೊಡ್ಡಮಟ್ಟದ ದೇಣಿಗೆದಾರರು ಸರಳವಾಗಿ ಈ ಬಾಂಡ್‌ಗಳನ್ನು ಖರೀದಿಸಿ ಅದನ್ನು ರಾಜಕೀಯ ಪಕ್ಷಗಳಿಗೆ ನೀಡುತ್ತವೆ. ಅವರು ಹಣದ ಮೂಲವನ್ನು ಬಹಿರಂಗಪಡಿಸದೆಯೇ ನಿರ್ದಿಷ್ಟ ಅವಧಿಯ ಮಿತಿಯೊಳಗೆ ಆ ಹಣವನ್ನು ನಗದುರೂಪಕ್ಕೆ ಪರಿವರ್ತಿಸುತ್ತಾರೆ. ಹೀಗಾಗಿ ರಾಜಕೀಯಪಕ್ಷಗಳು ದೊಡ್ಡ ಮೊತ್ತದ ಹಣವನ್ನು ಪಡೆದರೂ ಅದರ ಮಾಹಿತಿ ಗೊತ್ತಾಗುವುದಿಲ್ಲ.

English summary
BJP had recieved nearly Rs 600 crore in the six years till 2017-18 as political fund from Satya/Prudent Electoral Trust which included DLF Ltd and Bharti Enterprises Limited.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X