ಕೊರೊನಾ ನಿಯಂತ್ರಣ: ಹೊಸ ಮಾರ್ಗಸೂಚಿ ನೀಡಿದ ಕೇಂದ್ರ ಸರ್ಕಾರ
ನವದೆಹಲಿ, ಮಾರ್ಚ್ 30: ಕೊರೊನಾ ವೈರಸ್ ಸೋಂಕು ನಿಯಂತ್ರಿಸಲು ಲಾಕ್ ಡೌನ್ ನಿಯಮಗಳಲ್ಲಿ ಕೆಲವು ಮಾರ್ಗಸೂಚಿಗಳನ್ನು ಬದಲಾಯಿಸಿ ಕೇಂದ್ರ ಸರ್ಕಾರ, ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ರವಾನಿಸಿದೆ.
Recommended Video
ಲಾಕ್ ಡೌನ್ ನಿಯಮಗಳಲ್ಲಿ ಬದಲಾದ ಕೆಲವು ಮಾರ್ಗಸೂಚಿಗಳು ಇಂತಿವೆ:
* ಎಲ್ಲ ರೀತಿಯ ಸರಕು-ಸಾಗಾಣೆ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲು ಸೂಚಿಸಲಾಗಿದೆ.
* ಗೃಹ ಬಳಕೆಯ ಅಗತ್ಯ ವಸ್ತುಗಳಾದ ಸಾಬೂನು, ಬಾಡಿವಾಶ್, ಶ್ಯಾಂಪೂ, ಸರ್ಫೇಸ್ ಕ್ಲೀನರ್ಸ್, ಟಿಶ್ಯು ಪೇಪರ್, ಟೂತ್ ಪೇಸ್ಟ್. ಸ್ಯಾನಿಟರಿ ಪ್ಯಾಡ್ ಸೇರಿದಂತೆ ಅಗತ್ಯ ವಸ್ತುಗಳ ಸಾಗಾಣೆಗೆ ಮುಕ್ತ ಅವಕಾಶ ಕಲ್ಪಿಸುವುದು.

* ರೆಡ್ ಕ್ರಾಸ್ ಸಂಸ್ಥೆಯನ್ನು ಅಗತ್ಯ ಸೇವೆ ವ್ಯಾಪ್ತಿಯಲ್ಲಿ ಸೇರಿಸುವುದು.
* ಹಾಲು ಉತ್ಪಾದನೆ ಹಾಗೂ ಮಾರಾಟಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು. ನ್ಯೂಸ್ ಪತ್ರಿಕೆಗಳ ಹಂಚಿಕೆಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದು.
* ಪ್ರಮುಖವಾಗಿ ಜಿಲ್ಲಾಡಳಿತಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುವವರನ್ನು ತಡೆದು, ಅಗತ್ಯ ಊಟ ವಸತಿ ಕಲ್ಪಿಸುವುದು.
* ವಲಸೆ ಕಾರ್ಮಿಕರಿಗೆ ಎಸ್.ಡಿ.ಆರ್.ಎಫ್ ನಿಧಿ ಹಣ ಬಳಸಿ ತಮ್ಮ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ವಸತಿ ರಹಿತ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರಿಗೆ ಸೂಕ್ತ ಸೌಲಭ್ಯ ಕಲ್ಪಿಸುವಂತೆ ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಇಲಾಖೆ ರಾಜ್ಯಗಳಿಗೆ ನೀಡಿದೆ.












Click it and Unblock the Notifications