ಲೋಕಸಭಾ ಚುನಾವಣೆಗೆ ಬ್ಯಾಲೆಟ್ ಪೇಪರ್: ಕಾಂಗ್ರೆಸ್ ಆಗ್ರಹ?
Recommended Video

ನವದೆಹಲಿ, ಆಗಸ್ಟ್ 27: 2019 ರ ಲೋಕಸಭಾ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಲು ಕಾಂಗ್ರೆಸ್ ಚಿಂತಿಸುತ್ತಿದೆ.
ಇಂದು ನವದೆಹಲಿಯಲ್ಲಿ ಚುನಾವಣಾ ಆಯೋಗ ಕರೆದಿರುವ ಸರ್ವಪಕ್ಷ ಸಭೆಯಲ್ಲಿ, ಲೋಕಸಭಾ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಸುವಂತೆ ಆಗ್ರಹಿಸಲು ಕಾಂಗ್ರೆಸ್ ನಿರ್ಧರಿಸಿದ್ದು, ಅದಕ್ಕಾಗಿ ಸಕಲ ತಯಾರಿ ನಡೆಸಿಕೊಂಡಿದೆ.
2014 ರ ಲೋಕಸಭಾ ಚುನಾಚಣೆಯ ನಂತರ ಇವಿಎಂ(ಇಲೆಕ್ಟ್ರಾನಿಕ್ ವೋಟಿಂಗ್ ಮಶಿನ್)ಗಳಲ್ಲಿ ದೋಶವಿದೆ ಎಂದು ಹಲವು ದೂರುಗಳು ಬಂದಿದ್ದವು. ಇವಿಎಂ ಗಳನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದ್ದರೂ, 'ಇವಿಎಂ ದುರ್ಬಳಕೆ ಸಾಧ್ಯ' ಎಂಬುದು ಕಾಂಗ್ರೆಸ್ ಸೇರಿದಮತೆ ಇತರ ಪ್ರತಿಪಕ್ಷಗಳ ಆರೋಪ.

ಈ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ದೋಷರಹಿತವಾಗಿ ನಡೆಯಬೇಕಾದರೆ ಬ್ಯಾಲೆಟ್ ಪೇಪರ್ ಗಳನ್ನು ಬಳಸಬೇಕು ಎಂಬುದು ಪ್ರತಿಪಕ್ಷಗಳ ವರಾತ.
ಪ್ರತಿಪಕ್ಷಗಳ ಆಗ್ರಹಕ್ಕೆ ಮಣಿದು ಚುನಾವಣಾ ಆಯೋಗ ಮತ್ತೆ ಸಾಂಪ್ರದಾಯಿಕ ಮತದಾನ ಪದ್ಧತಿಯ ಮೊರೆಹೋಗುತ್ತದಾ ಎಂಬುದನ್ನು ಕಾದುನೋಡಬೇಕು.












Click it and Unblock the Notifications