ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ಸಂಸತ್ತಿಗೆ ಸೈಕಲ್‌ನಲ್ಲಿ ತೆರಳಿದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್

|
Google Oneindia Kannada News

ನವದೆಹಲಿ, ಜುಲೈ 20: ಭಾರತದಲ್ಲಿ ಪ್ರತಿನಿತ್ಯ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಕರ್ನಾಟಕದ ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.

ಮಳೆಗಾಲ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಸೈಕಲ್‌ನಲ್ಲಿ ಸಂಸತ್ತಿಗೆ ಆಗಮಿಸುವ ಮೂಲಕ ಪ್ರತಿಭಟನೆ ತೋರಿದ್ದಾರೆ. ತಮ್ಮ ಬೆಂಬಲಿಗರ ಜೊತೆಗೆ ಸಂಸದರು ಸಂಸತ್ತಿನತ್ತ ಸೈಕಲ್ ಏರಿ ಹೊರಟಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

Congress MP DK Suresh Arrives In Cycles To Parliament To Protest Against Fuel Price Hike

ಜುಲೈ 19: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಬದಲಾವಣೆ ಇಲ್ಲ ಜುಲೈ 19: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಬದಲಾವಣೆ ಇಲ್ಲ

ಮುಂಗಾರು ಅಧಿವೇಶನ ಆರಂಭವಾದ ಮೊದಲ ದಿನವೇ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದರು ಸಂಸತ್ತಿಗೆ ಸೈಕಲ್ ತೆಗೆದುಕೊಂಡು ಹೋಗಿದ್ದರು. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಗೆ ಕಡಿವಾಣ ಹಾಕುವಂತೆ ಆ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಮಾಡಿದ್ದರು.

ದೇಶದಲ್ಲಿ ಮಂಗಳವಾರ ಬದಲಾಗಿಲ್ಲ ಇಂಧನ ಬೆಲೆ:

ಭಾರತದಲ್ಲಿ ಮೇ 4ರಿಂದ ಇತ್ತೀಚಿನವರೆಗೂ ಇಂಧನ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಕಳೆದ ಎರಡ್ಮೂರು ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರವಾಗಿದೆ. ಈವರೆಗೂ ಪೆಟ್ರೋಲ್ ದರ ಒಟ್ಟು 40 ಬಾರಿ ಹಾಗೂ ಡೀಸೆಲ್ ದರ 37 ಬಾರಿ ಏರಿಕೆಯಾಗಿದ್ದು, ಜೂನ್ ತಿಂಗಳಲ್ಲೇ 21 ಬಾರಿ ಬೆಲೆ ಏರಿಕೆಯಾಗಿದೆ. ಮೇ 4ರಿಂದ ಪೆಟ್ರೋಲ್ 11.15 ರು ಪ್ರತಿ ಲೀಟರ್ ಹಾಗೂ ಡೀಸೆಲ್ 10.80 ರು ಪ್ರತಿ ಲೀಟರ್ ಆಗಿದೆ. ಜುಲೈ 20ರಂದು ಇಂಧನ ದರ ಯಾವುದೇ ದರ ಬದಲಾವಣೆಯಾಗಿಲ್ಲ.

English summary
Monsoon Session: Karnataka Congress MP DK Suresh Arrives In Cycles To Parliament To Protest Against Fuel Price Hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X