ಕೇಜ್ರಿವಾಲ್ ಪತ್ನಿ ಸುನೀತಾ ವಿರುದ್ಧ ದೂರು ನೀಡಿದ ಬಿಜೆಪಿ

ನವದೆಹಲಿ, ಏಪ್ರಿಲ್ 29: ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಅವರ ವಿರುದ್ಧ ಭಾರತೀಯ ಜನತಾ ಪಕ್ಷ(ಬಿಜೆಪಿ)ವು ಚುನಾವಣಾ ಆಯೋಗಕ್ಕೆ ಸೋಮವಾರದಂದು ದೂರು ನೀಡಿದೆ.

ಸುನೀತಾ ಕೇಜ್ರಿವಾಲ್ ಅವರ ಬಳಿ ಒಂದಕ್ಕಿಂತ ಅಧಿಕ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಎಂದು ಬಿಜೆಪಿ ವಕ್ತಾರ ಹರೀಶ್ ಖುರಾನಾ ಆರೋಪಿಸಿದ್ದು, ತೀಜ್ ಹಜಾರಿ ಕೋರ್ಟಿನಲ್ಲಿ ದೂರು ದಾಖಲಿಸಿದ್ದಾರೆ. ಕಳೆದ ಈ ಕುರಿತಂತೆ ಹರೀಶ್ ಅವರು ಟ್ವೀಟ್ ಮಾಡಿದ್ದರು.

'ಬೇರೆಯವರತ್ತ ಬೆರಳು ಮಾಡಿ ತೋರಿಸುವ ಮುನ್ನ ನೀವು(ಅರವಿಂದ್ ಕೇಜ್ರಿವಾಲ್) ಕ್ಲೀನ್ ಇರಬೇಕು' ಎಂದು ಬರೆದು ಟ್ವೀಟ್ ಮಾಡಿದ್ದರು.

Complaint filed against Kejriwals wife Sunita for allegedly having two voter IDs

ಕೇಜ್ರಿವಾಲ್ ಪತ್ನಿ ಸುನೀತಾ ಅವರು ಎರಡು ವೋಟರ್ ಐಡಿ ಹೊಂದಿದ್ದಾರೆ. ಒಂದರಲ್ಲಿ ವಿಳಾಸ ಉತ್ತರಪ್ರದೇಶದ ಸಹಿಬಾಬಾದ್ ಎಂದಿದೆ. ಇನ್ನೊಂದರಲ್ಲಿ ನವದೆಹಲಿಯ ಚಾಂದಿನಿ ಚೌಕ್ ಎಂದು ನಮೂದಿಸಲಾಗಿದೆ.ಇದು ಉದ್ದೇಶ ಪೂರ್ವಕ ಹಾಗೂ ಗೊತ್ತಿದ್ದೇ ಮಾಡಿರುವ ಕೃತ್ಯವಾಗಿದೆ. ಮತದಾರರ ಪಟ್ಟಿಯಲ್ಲಿ ಎರಡು ಕಡೆ ಹೆಸರು ಇರುವುದರಿಂದ ಅವರ ಪತಿಗೆ ನೆರವಾಗಲಿದೆ.

ಐಆರ್ ಎಸ್ ಅಧಿಕಾರಿಯಾಗಿದ್ದು, ಉತ್ತಮ ಶೈಕ್ಷಣಿಕ ಹಿನ್ನಲೆಯುಳ್ಳವರಾಗಿದ್ದಾರೆ. ಆದರೆ, ಚುನಾವಣಾ ಪ್ರಕ್ರಿಯೆಯ ಅರಿವಿಲ್ಲದೆ ನಡೆದುಕೊಂಡಿರುವುದು ಸರಿಯಲ್ಲ, ಅವರ ಈ ನಡೆಯಿಂದ ಪರೋಕ್ಷವಾಗಿ ಆಮ್ ಆದ್ಮಿ ಪಕ್ಷಕ್ಕೆ ನೆರವಾಗಲಿದೆ ಎಂದು ಆರೋಪಿಸಿದ್ದಾರೆ.

ಈ ಮುಂಚೆ ಪೂರ್ವ ದೆಹಲಿಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅತಿಶಿ ಅವರು ಕ್ರಿಕೆಟರ್ ಕಮ್ ರಾಜಕಾರಣಿ, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಅವರ ವಿರುದ್ಧ ಜನಪ್ರತಿನಿಧಿಗಳ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ ಎರಡು ಕಡೆಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಎಂದು ಆರೋಪಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+