ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಎಲ್‌ಎಕ್ಸ್‌ನಲ್ಲಿ ಸೋಫಾ ಮಾರಿದ ಅರವಿಂದ್ ಕೇಜ್ರಿವಾಲ್ ಮಗಳಿಗೆ 34,000 ರೂ ಪಂಗನಾಮ!

|
Google Oneindia Kannada News

ನವದೆಹಲಿ, ಫೆಬ್ರವರಿ 8: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಗಳು ಹರ್ಷಿತಾ ಕೇಜ್ರಿವಾಲ್ ಆನ್‌ಲೈನ್ ಸ್ಕ್ಯಾಮ್ ಜಾಲವೊಂದರಲ್ಲಿ ಸಿಕ್ಕಿಬಿದ್ದಿದ್ದಾರೆ. ಜನಪ್ರಿಯ ಆನ್‌ಲೈನ್ ಖರೀದಿ-ಮಾರಾಟ ವೇದಿಕೆ ಒಎಲ್‌ಎಕ್ಸ್‌ನಲ್ಲಿ ಸೆಕೆಂಡ್ ಹ್ಯಾಂಡ್ ಸೋಫಾ ಮಾರಲು ಮುಂದಾಗಿದ್ದ ಹರ್ಷಿತಾ ಅವರಿಗೆ ಆನ್‌ಲೈನ್ ಸ್ಕ್ಯಾಮರ್ ಒಬ್ಬ ಯಾಮಾರಿಸಿ 34,000 ರೂ ಟೋಪಿ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆನ್‌ಲೈನ್ ಪ್ಲಾಟ್‌ಫಾರ್ಮ್ ಒಎಲ್‌ಎಕ್ಸ್‌ನಲ್ಲಿ ಹರ್ಷಿತಾ ಬಳಸಿದ್ದ ಸೋಫಾವನ್ನು ಮಾರಾಟಕ್ಕೆ ಪಟ್ಟಿ ಮಾಡಿದ್ದರು. ವ್ಯಕ್ತಿಯೊಬ್ಬರ ಬಳಿ ಡೀಲ್ ಕೂಡ ಕುದುರಿತ್ತು. ಸೋಫಾದ ಖರೀದಿಗಾಗಿ ಒಪ್ಪಿಕೊಂಡ ಮೊತ್ತವನ್ನು ಅವರ ಬ್ಯಾಂಕ್ ಖಾತೆಗೆ ಹಾಕಲು ಬಾರ್ ಕೋಡ್ ಒಂದನ್ನು ಸ್ಕ್ಯಾನ್ ಮಾಡುವಂತೆ ಆತ ಸಲಹೆ ನೀಡಿದ್ದ.

 ನೀವು ಸೈಬರ್ ವಂಚನೆಗೆ ಒಳಗಾಗಿದ್ದೀರಾ? ಹಾಗಾದರೆ 100ಕ್ಕೆ ಡಯಲ್ ಮಾಡಿ ನೀವು ಸೈಬರ್ ವಂಚನೆಗೆ ಒಳಗಾಗಿದ್ದೀರಾ? ಹಾಗಾದರೆ 100ಕ್ಕೆ ಡಯಲ್ ಮಾಡಿ

ಆರಂಭದಲ್ಲಿ ಹರ್ಷಿತಾ ನಂಬಿಕೆ ಸಂಪಾದಿಸಲು ಮತ್ತು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗುತ್ತದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಸಣ್ಣ ಪ್ರಮಾಣದ ಮೊತ್ತವನ್ನು ಹರ್ಷಿತಾಗೆ ರವಾನಿಸಿದ್ದ. ಬಳಿಕ ಅವರ ಬ್ಯಾಂಕ್ ಖಾತೆಯಿಂದ 20,000 ರೂ ಮತ್ತು 14,000 ರೂ ಕಂತುಗಳಲ್ಲಿ ಒಟ್ಟು 34,000 ರೂ ಎಗರಿಸಿದ್ದಾನೆ.

ಮುಖ್ಯಮಂತ್ರಿ ನಿವಾಸದ ಸಮೀಪದಲ್ಲಿನ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಮುಂದೆ ಓದಿ.

123 ನಕಲಿ ವೆಬ್‌ಸೈಟ್, 10,000 ಜನರಿಗೆ ವಂಚಿಸಿದ್ದ ಜಾಲ ಪತ್ತೆ: ಓರ್ವ ಮಹಿಳೆ ಸೇರಿ 6 ಜನರ ಬಂಧನ123 ನಕಲಿ ವೆಬ್‌ಸೈಟ್, 10,000 ಜನರಿಗೆ ವಂಚಿಸಿದ್ದ ಜಾಲ ಪತ್ತೆ: ಓರ್ವ ಮಹಿಳೆ ಸೇರಿ 6 ಜನರ ಬಂಧನ

ಸುದ್ದಿಯಾಗಿದ್ದ ಹರ್ಷಿತಾ

ಸುದ್ದಿಯಾಗಿದ್ದ ಹರ್ಷಿತಾ

ಅರವಿಂದ್ ಕೇಜ್ರಿವಾಲ್ ಅವರಿಗೆ ಇಬ್ಬರು ಮಕ್ಕಳು. ಮಗಳು ಹರ್ಷಿತಾ ಕೇಜ್ರಿವಾಲ್ ಮತ್ತು ಮಗ ಪುಲ್ಕಿತ್ ಕೇಜ್ರಿವಾಲ್. ಹರ್ಷಿತಾ 2014ರಲ್ಲಿ 12ನೇ ತರಗತಿ ಸಿಬಿಎಸ್‌ಇ ಪರೀಕ್ಷೆಯಲ್ಲಿ ಶೇ 96ರಷ್ಟು ಅಂಕಗಳನ್ನು ಗಳಿಸುವ ಮೂಲಕ ಸುದ್ದಿಯಾಗಿದ್ದರು. ಅವರು ಐಐಟಿ ದೆಹಲಿಯಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ಬಾರ್‌ಕೋಡ್ ಹೊಸ ಸಾಧನ

ಬಾರ್‌ಕೋಡ್ ಹೊಸ ಸಾಧನ

ಆನ್‌ಲೈನ್ ವಂಚನೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಆನ್‌ಲೈನ್ ವಂಚಕರು ದೊಡ್ಡ ಅಧಿಕಾರಿಗಳು, ಪೊಲೀಸರು, ರಾಜಕಾರಣಿಗಳನ್ನೂ ಧೈರ್ಯದಿಂದ ಮತ್ತು ಸುಲಭವಾಗಿ ಯಾಮಾರಿಸುತ್ತಿದ್ದಾರೆ. ಜತೆಗೆ ಹೊಸ ಹೊಸ ಸೃಜನಶೀಲತೆಯನ್ನೂ ಅಳವಡಿಸಿಕೊಳ್ಳುತ್ತಿದ್ದಾರೆ. ಬಾರ್‌ಕೋಡ್ ಸ್ಕ್ಯಾಮ್ ಇದಕ್ಕೆ ಇತ್ತೀಚಿನ ಸೇರ್ಪಡೆ. ಈಗಾಗಲೇ ನೂರಾರು ಮಂದಿ ಬಾರ್‌ಕೋಡ್‌ನಿಂದ ಹಣ ಕಳೆದುಕೊಂಡಿದ್ದಾರೆ.

ಅನ್ ಲೈನ್ ಲೊನ್ ಆಪ್ ಟಾರ್ಚರ್: ಪಾರಾಗೋಕೆ ಒಂದು ಐಡಿಯಾಅನ್ ಲೈನ್ ಲೊನ್ ಆಪ್ ಟಾರ್ಚರ್: ಪಾರಾಗೋಕೆ ಒಂದು ಐಡಿಯಾ

ಮಾರಾಟಗಾರರು ಪ್ರಮುಖ ಟಾರ್ಗೆಟ್

ಮಾರಾಟಗಾರರು ಪ್ರಮುಖ ಟಾರ್ಗೆಟ್

ಆನ್‌ಲೈನ್ ಮಾರಾಟಗಾರರ ಖಾತೆಗಳನ್ನು ಚೆನ್ನಾಗಿ ಅಧ್ಯಯನ ಮಾಡುವ ವಂಚಕರು, ಅವರ ಸ್ವಭಾವವನ್ನು ಅರಿಯಲು ಪ್ರಯತ್ನಿಸುತ್ತಾರೆ. ಮುಖ್ಯವಾಗಿ ಆನ್‌ಲೈನ್‌ನಲ್ಲಿ ವಸ್ತು ಮಾರಾಟಕ್ಕೆ ಪ್ರಯತ್ನಿಸುವವರು ಅವರ ಗುರಿಯಾಗಿರುತ್ತಾರೆ. ಸಾಮಾನ್ಯವಾಗಿ ಅವರು ಖುದ್ದಾಗಿ ಭೇಟಿಯಾಗಲು ಒತ್ತಾಯಿಸುತ್ತಾರೆ. ಕೆಲವೊಮ್ಮೆ ನೇರ ಮುಖಾಮುಖಿಯಾಗುವುದನ್ನು ತಪ್ಪಿಸಿಕೊಳ್ಳಲು ತಾವು ದೂರದ ಪ್ರದೇಶದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸೈನಿಕ ಎಂದು ಬಿಂಬಿಸಿಕೊಳ್ಳುತ್ತಾರೆ. ಒಎಲ್‌ಎಕ್ಸ್‌ನಂತಹ ಆಪ್‌ಗಳು ಈ ವಂಚಕರಿಗೆ ಒಳ್ಳೆ ಕಮಾಯಿಯ ಮೂಲವಾಗಿವೆ.

ಮೊದಲ ಬಾರಿ ಹಣ ಬೀಳುತ್ತದೆ

ಮೊದಲ ಬಾರಿ ಹಣ ಬೀಳುತ್ತದೆ

ವಸ್ತು ಮಾರಲು ಬಯಸುವ ವ್ಯಕ್ತಿಯೊಂದಿಗೆ ಆನ್‌ಲೈನ್‌ನಲ್ಲಿಯೇ ಡೀಲ್ ಕುದುರಿದ ನಂತರ ಅವರಿಗೆ ಸ್ಕ್ಯಾನ್ ಮಾಡಲು ಟೆಸ್ಟ್ ಬಾರ್‌ಕೋಡ್ ಒಂದನ್ನು ಕಳುಹಿಸುತ್ತಾರೆ. ಮೊದಲು ಬಾರ್ ಕೋಡ್ ಸ್ಕ್ಯಾನ್ ಮಾಡಿದಾಗ ಅಲ್ಪ ಪ್ರಮಾಣದ ಹಣ ಅವರ ಖಾತೆಗೆ ಬೀಳುತ್ತದೆ. ಇಲ್ಲೇನೂ ಮೋಸವಿಲ್ಲ, ಎಲ್ಲ ಸುಗಮವಾಗಿದೆ ಎಂದು ಮಾರಾಟ ಮಾಡುವವರು ನಂಬುತ್ತಾರೆ.

ಎರಡನೆಯ ಬಾರಿ ಬೀಳುವುದು ನಾಮ!

ಎರಡನೆಯ ಬಾರಿ ಬೀಳುವುದು ನಾಮ!

ಆಗ ದುಷ್ಕರ್ಮಿಗಳು ಎರಡನೆಯ ಬಾರ್‌ಕೋಡ್ ಕಳುಹಿಸುತ್ತಾರೆ. ಇದನ್ನು ಸ್ಕ್ಯಾನ್ ಮಾಡಿದರೆ ಅವರ ಖಾತೆಗೆ ಹಣ ಬರುವುದಿಲ್ಲ, ಬದಲಾಗಿ ಖಾತೆಯಿಂದ ಹಣ ಡೆಬಿಟ್ ಆಗುತ್ತದೆ. ಸಂತ್ರಸ್ತರು ಎರಡನೆಯ ಬಾರ್‌ ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆಯೇ ಅವರ ಖಾತೆಯಿಂದ ಹಣ ಲಪಟಾಯಿಸುತ್ತಾರೆ. ಕೆಲವು ಪ್ರಕರಣಗಳಲ್ಲಿ ಅವರ ಗಮನಕ್ಕೆ ಬಾರದಂತೆಯೇ ಅವರ ಬ್ಯಾಂಕ್ ಖಾತೆಗಳನ್ನು ಸಂಪೂರ್ಣ ಬರಿದಾಗಿಸುತ್ತಾರೆ.

English summary
Delhi CM Arvind Kejriwal's daughter Harshita Kejriwal was duped of Rs 34,000 by an online scammer when she was trying to sell a old sofa on OLX.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X