ಭಾಷಣದ ವೇಳೆ ಭಾವುಕರಾದ ಮುಖ್ಯ ನ್ಯಾಯಮೂರ್ತಿ ಠಾಕೂರ್

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 24: ಭಾರತದ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರು ಭಾನುವಾರ ಭಾಷಣದ ವೇಳೆ ಕಣ್ಣೀರಿಟ್ಟರೆ? ಎಂಬ ಪ್ರಶ್ನೆ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಯಾಗುತ್ತಿದೆ. ಪ್ರಧಾನಿ ಮೋದಿ ಅವರಿದ್ದ ಸಮಾರಂಭದಲ್ಲಿ ಹೆಚ್ಚುತಿರುವ ಕೇಸುಗಳ ಸಂಖ್ಯೆ ನ್ಯಾಯಾಧೀಶರ ಕೊರತೆ ಬಗ್ಗೆ ತುಂಬಾ ಒತ್ತಡದಲ್ಲಿ ಠಾಕೂರ್ ಅವರು ಮಾತನಾಡಿದ್ದು ಕಂಡು ಬಂದಿತು.

ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಜಂಟಿ ಸಭೆಯಲ್ಲಿ ನ್ಯಾಯಮೂರ್ತಿಗಳ ಮೇಲಿನ ಒತ್ತಡದ ಕುರಿತು ಮಾತನಾಡುತ್ತ ಟಿಎಸ್ ಠಾಕೂರ್ ಅವರು ಭಾವುಕರಾದರು. 21 ಸಾವಿರದಷ್ಟಿರುವ ಜಡ್ಜ್ ಗಳ ಸಂಖ್ಯೆಯನ್ನು 40 ಸಾವಿರಕ್ಕೆ ಏರಿಸಲು ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ.

CJI TS Thakur breaks down in front of Modi over need for more judges

ನಮ್ಮ ದೇಶಗಳಲ್ಲಿನ ನ್ಯಾಯಾಧೀಶರು ಹಾಗೂ ವಿದೇಶಿ ನ್ಯಾಯಾಧೀಶರ ಮೇಲಿನ ಕೆಲಸದ ಒತ್ತಡವನ್ನು ತುಲನೆ ಮಾಡಲು ಸಾಧ್ಯವಿಲ್ಲ. ಇಬ್ಬರ ಕೆಲಸಕ್ಕೂ ಅಜಗಜಾಂತರ. ಅಷ್ಟಕ್ಕೂ ನ್ಯಾಯಾಧೀಶರ ಮೇಲಿನ ಜವಾಬ್ದಾರಿಗಳನ್ನು ಬೇರಾವುದೇ ವಿಭಾಗಕ್ಕೆ ವರ್ಗಾಯಿಸಲು ಸಾಧ್ಯವಿಲ್ಲ ಎಂದರು.

ಈ ಬಗ್ಗೆ ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಎಲ್ಲಾ ವಿಚಾರಗಳನ್ನೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತಿಳಿಸಿದ್ದೇವೆ. ಆದರೆ ಸಮಸ್ಯೆಯ ಪರಿಹಾರದ ಅನಿವಾರ್ಯತೆ ಎದುರಾದಾಗ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದತ್ತ ಬೊಟ್ಟು ಮಾಡುತ್ತಿದೆ. ರಾಜ್ಯ ಸರ್ಕಾರ ಉತ್ತರಿಸಬೇಕಾಗಿ ಬಂದಾಗ ಕೇಂದ್ರ ಸರ್ಕಾರ ಅನುದಾನ ಹೆಚ್ಚಿಸುತ್ತಿಲ್ಲ. ವಿಚಾರಣೆ ನಡೆಸಿ ತೀರ್ಪು ನೀಡಬೇಕಾದ ಪ್ರಕರಣಗಳ ಸಂಖ್ಯೆ 38 ಲಕ್ಷ ದಾಟುತ್ತಿದೆ ಎಂದರು.

ಜಸ್ಟೀಸ್ ಠಾಕೂರ್ ಅವರು ಕೂಡಾ ನಿವೃತ್ತಿ ಹೊಸ್ತಿಲಲ್ಲಿದ್ದಾರೆ. ಜನವರಿ 3, 2017ರಂದು ನಿವೃತ್ತಿ ಹೊಂದಲಿರುವ ಠಾಕೂರ್ ಅವರು ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಮತ್ತು ಕರ್ನಾಟಕದ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 2009ರಲ್ಲಿ ಸುಪ್ರೀಂಕೋರ್ಟಿನ ಜಡ್ಜ್ ಆಗಿ ಬಡ್ತಿ ಪಡೆದಿದ್ದರು. ನಂತರ ಎಚ್ಎಲ್ ದತ್ತು ಅವರ ಸ್ಥಾನವನ್ನು ತುಂಬಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An emotional Chief Justice of India (CJI) TS Thakur on Sunday lamented "inaction" by the Executive to increase the number of judges from the present 21,000 to 40,000 to handle the "avalanche" of litigations even as Prime Minister Narendra Modi assured him of his government's resolve in finding a solution jointly with the judiciary.
Please Wait while comments are loading...