India
  • search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಲಸಿಕೆ ನೀಡಲು ಚೀನಾ ಯೋಜನೆ

|
Google Oneindia Kannada News

ನವದೆಹಲಿ, ಜೂನ್ 3: ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಲಸಿಕೆಯನ್ನು ಹಂಚಲು ಚೀನಾ ಯೋಜನೆಯನ್ನು ರೂಪಿಸುತ್ತಿದೆ. ಚೀನಾ ತನ್ನ ಅಂತಾರಾಷ್ಟ್ರೀಯ ಲಸಿಕೆ ಅಭಿಯಾನವಾದ "ಸ್ಪ್ರಿಂಗ್ ಸ್ಪ್ರೌಟ್"ಅನ್ನು ಭಾರತದಲ್ಲಿ ನಡೆಸಲು ಪೂರಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವುದಾಗಿ ಚೀನಾ ಮಾಧ್ಯಮಗಳು ವರದಿ ಮಾಡಿದೆ. ಇನ್ನು ಇದೇ ಸಂದರ್ಭದಲ್ಲಿ ಜೂನ್ 2ರವರೆಗೆ ಚೀನಾ ತನ್ನ ದೇಶದಲ್ಲಿ 70 ಕೋಟಿಗೂ ಅಧಿಕ ಲಸಿಕೆಯನ್ನು ನೀಡಿರುವುದಾಗಿ ವರದಿಯಾಗಿದೆ.

ಭಾರತದಲ್ಲಿರುವ ಚೀನೀಯರಿಗೆ ಲಸಿಕೆಯನ್ನು ನೀಡುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಚೀನಾ ಪ್ರಶ್ನಾವಳಿಯನ್ನು ಸಿದ್ಧಪಡಿಸಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ನವದೆಹಲಿಯಲ್ಲಿರುವ ಚೀನಾ ರಾಯಭಾರಿ ಕಚೇರಿ ಆನ್‌ಲೈನ್‌ನಲ್ಲಿ ಈ ಪ್ರಶ್ನಾವಳಿಗಳನ್ನು ನೀಡಿದೆ. ಈ ಪ್ರಶ್ನಾವಳಿ ಭಾರತದಲ್ಲಿ ಚೀನಾ ಪ್ರಾರಂಭಿಸುವ "ಸ್ಪ್ರಿಂಗ್ ಸ್ಪ್ರೌಟ್" ಲಸಿಕಾ ಯೋಜನೆಯ ಭಾಗವಾಗಿದೆ ಎಂದು ಅದು ತನ್ನ ವರದಿಯಲ್ಲಿ ಹೇಳಿಕೊಂಡಿದೆ.

ಭವಿಷ್ಯದಲ್ಲಿ ಚೀನಾಗೆ ಕಾದಿದೆಯಾ ಕಂಟಕ? ತಜ್ಞರು ಹೇಳಿದ್ದೇನು?ಭವಿಷ್ಯದಲ್ಲಿ ಚೀನಾಗೆ ಕಾದಿದೆಯಾ ಕಂಟಕ? ತಜ್ಞರು ಹೇಳಿದ್ದೇನು?

ಆದರೆ ಈ ಯೋಜನೆ ಭಾರತದಲ್ಲಿ ಯಾವಾಗ ಆರಂಭವಾಗಲಿದೆ ಎಂಬ ಬಗ್ಗೆ ಯಾವುದೇ ಸ್ಪಷ್ಟತೆಗಳು ಇಲ್ಲ. ಭಾರತದಲ್ಲಿರುವ ಚೀನಾ ಪ್ರಜೆಗಳ ಪರಿಸ್ಥಿತಿಯನ್ನು ಉತ್ತಮವಾಗಿ ಅರಿತುಕೊಳ್ಳುವುದು ಮತ್ತು ಹೆಚ್ಚಿನ ವೈರಸ್‌ನ ತಡೆಗಟ್ಟುವಿಕೆ ಮತ್ತು ಸುರಕ್ಷತಾ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಈ ಪ್ರಶ್ನಾವಳಿಗಳನ್ನು ಕೇಳಳಾಗುತ್ತಿದೆ ಎಂದು ಈ ಸರ್ವೆಯಲ್ಲಿ ಹೇಳಿಕೊಂಡಿದೆ.

ವಿದೇಶಗಳಲ್ಲಿರುವ ಚೀನೀಯರಿಗೆ ಲಸಿಕೆಯನ್ನು ನೀಡುವ ಚೀನಾದ "ಸ್ಪ್ರಿಂಗ್ ಸ್ಪ್ರೌಟ್" ಕಾರ್ಯಕ್ರಮವನ್ನು ಮಾರ್ಚ್‌ ತಿಂಗಳಿನಲ್ಲಿ ಪ್ರಾರಂಭಿಸಲಾಯಿತು. ಮೇ 19ರ ವೇಳೆಗೆ 120ಕ್ಕೂ ಹೆಚ್ಚು ದೇಶಗಳಲ್ಲಿ 5,00,000 ಕ್ಕೂ ಹೆಚ್ಚು ಚೀನೀ ಪ್ರಜೆಗಳಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಚೀನಾದ ಈ ಲಸಿಕೆ ಕಾರ್ಯಕ್ರಮದ ಅಡಿಯಲ್ಲಿ ಥಾಯ್ಲೆಂಡ್, ಈಜಿಪ್ಟ್, ಜಿಂಬಾಬ್ವೆ, ಶ್ರೀಲಂಕಾ, ಲೆಬನಾನ್, ಸುಡಾನ್, ಅಂಗೋಲಾ, ಕಾಂಗೋ, ಮೊಜಾಂಬಿಕ್, ಸಿರಿಯಾ, ಮತ್ತು ಮಾಂಟೆನೆಗ್ರೊ ಸೇರಿದಂತೆ ಹಲವು ದೇಶಗಳಲ್ಲಿ ಇರುವ ಚೀನಾ ಪ್ರಜೆಗಳಿಗೆ ಲಸಿಕೆಯನ್ನು ಹಾಕಲಾಗಿದೆ.

English summary
China is planning to launch its global Covid-19 vaccination campaign “Spring Sprout” for its citizens in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X