• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾಟ್ಸಾಪ್ ಹೊಸ ಸೇವಾ ನಿಯಮ: ಗೌಪ್ಯ ನೀತಿಗಳನ್ನು ಹಿಂಪಡೆಯುವಂತೆ ಸಿಇಒಗೆ ಪತ್ರ ಬರೆದ ಕೇಂದ್ರ ಸರ್ಕಾರ

|

ನವದೆಹಲಿ, ಜನವರಿ 19: ಫೇಸ್‌ಬುಕ್ ನೀಡುವ ಸೇವೆಗಳು ಮತ್ತು ಉತ್ಪನ್ನಗಳನ್ನು ಸಂಯೋಜಿಸುವ ಸಲುವಾಗಿ ವಾಟ್ಸಾಪ್ ಮೆಸೆಂಜರ್ ತನ್ನ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಗಳನ್ನು ನವೀಕರಿಸಿದ್ದ ವಾಟ್ಸಾಪ್‌ ಅನ್ನು ತನ್ನ ನಿರ್ಧಾರದಿಂದ ಹಿಂದೆ ಸರಿಯುವಂತೆ ಕೇಂದ್ರ ಸರ್ಕಾರ ಪತ್ರ ಬರೆದಿದೆ.

ವಾಟ್ಸಾಪ್‌ ಗೌಪ್ಯತೆ ನೀತಿಗಳು ಮತ್ತು ನಿಯಮಗಳಲ್ಲಿನ ಹೊಸ ಬದಲಾವಣೆಗಳು ಜಾರಿಗೆ ತರಲು ವಾಟ್ಸಾಪ್ ನಿರ್ಧರಿಸಿತ್ತು. ಆದರೆ ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಾಟ್ಸಾಪ್ ತನ್ನ ಹೆಜ್ಜೆಯನ್ನು ಸದ್ಯಕ್ಕೆ ಹಿಂದೆ ಸರಿಸಿದೆ. ಆದರೆ ಈ ಹೊಸ ನಿಯಮಗಳನ್ನು ಜಾರಿಗೆ ತರದಂತೆ ವಾಟ್ಸಾಪ್ ಸಿಇಒಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ.

ವಾಟ್ಸಾಪ್ ಗ್ರೂಪಿನಿಂದ ಸಿಗ್ನಲ್ APP ಗ್ರೂಪಿಗೆ ಜಂಪ್ ಹೇಗೆ?ವಾಟ್ಸಾಪ್ ಗ್ರೂಪಿನಿಂದ ಸಿಗ್ನಲ್ APP ಗ್ರೂಪಿಗೆ ಜಂಪ್ ಹೇಗೆ?

ವಾಟ್ಸಾಪ್ ತನ್ನ ನಿಯಮಗಳನ್ನು ನವೀಕರಿಸುವ ಬದಲು ಹಿಂದೆ ಸರಿಯಲು ಪ್ರಮುಖ ಕಾರಣವು ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ವಾಟ್ಸಾಪ್ ಬಳಕೆದಾರರ ವಿರೋಧವಾಗಿದೆ. ಜೊತೆಗೆ ವಾಟ್ಸಾಪ್ ಕೂಡ ತನ್ನ ಗೌಪ್ಯತೆ ನೀತಿಗಳನ್ನು ನವೀಕರಿಸಿದ ಮೇಲಂತೂ, ಜನರು ಸಿಗ್ನಲ್ ಆ್ಯಪ್‌ ಕಡೆಗೆ ಹೆಚ್ಚು ಮುಖ ಮಾಡುತ್ತಿದ್ದಾರೆ.

ಸದ್ಯ ವಾಟ್ಸಾಪ್‌ ನ ಸೇವಾ ನಿಯಮವನ್ನು ವಿರೋಧಿಸುತ್ತಿರುವ ಹೆಚ್ಚಿನ ಮಂದಿ ಹಾಗೂ ಮುಂದಿನ ದಿನಗಳಲ್ಲಿ ಹಣ ಪಾವತಿ ಮಾಡಬೇಕೆಂದಿರುವ ಟೆಲಿಗ್ರಾಮ್‌ ಆ್ಯಪ್‌ಗೂ ಗುಡ್‌ಬೈ ಹೇಳಲು ಜನರು ಮನಸ್ಸು ಮಾಡುತ್ತಿದ್ದಾರೆ. ಹೀಗಾಗಿ ಸಿಗ್ನಲ್ ಆ್ಯಪ್‌ಗೆ ಬೇಡಿಕೆ ಹೆಚ್ಚಿದೆ.

ತನ್ನ ಹೊಸ ಗೌಪ್ಯತೆ ಸೇವಾ ನಿಯಮಗಳ ನವೀಕರಣದಿಂದಾಗಿಯೇ ವಾಟ್ಸಾಪ್‌ಗೆ ದೊಡ್ಡ ಹೊಡೆತ ನೀಡಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಜನರು ಸಿಗ್ನಲ್ ಆ್ಯಪ್ ಬಳಕೆಗೆ ಮುಂದಾಗಿದ್ದಾರೆ. ಹೀಗಾಗಿ ವಾಟ್ಸಾಪ್ ತನ್ನ ನಿರ್ಧಾರವನ್ನು ಸ್ವಲ್ಪ ದಿನಗಳ ಮುಂದೂಡಿದೆ. ಇದರ ನಡುವೆ ಕೇಂದ್ರ ಸರ್ಕಾರ ಕೂಡ ವಾಟ್ಸಾಪ್ ಕ್ರಮವನ್ನು ವಿರೋಧಿಸಿದೆ.

English summary
Central government Writes to WhatsApp CEO To Withdraw recently proposed changes to Privacy policy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X