ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಮರಣದಂಡನೆಗೊಳಗಾದವರನ್ನು ನೇಣುಗಂಬಕ್ಕೇರಿಸುವುದೇ ಸರಿ"

|
Google Oneindia Kannada News

ನವದೆಹಲಿ, ಏಪ್ರಿಲ್ 24: ಮರಣದಂಡನೆ ಶಿಕ್ಷೆಗೊಳಗಾದವರನ್ನು ಗಲ್ಲಿಗೇರಿಸುವ ಕ್ರಮವೇ ಸರಿ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ಸಮರ್ಥಿಸಿಕೊಂಡಿದೆ.

ಮರಣದಂಡನೆಗೊಳಗಾದ ಆರೋಪಿಗಳನ್ನು ಗಲ್ಲಿಗೇರಿಸುವುದಕ್ಕಿಂತ, ಲೆಥಾಲ್ ಇಂಜೆಕ್ಷನ್ ನೀಡಿ ಅಥವಾ ಗುಂಡಿಕ್ಕಿ ಸಾಯಿಸುವ ಹೊಸ ಕ್ರಮವನ್ನು ಜಾರಿಗೆ ತರುವಂತೆ ಸುಪ್ರೀಂ ಕೋರ್ಟ್ ವಕೀಲ ರಿಷಿ ಮಲ್ಹೋತ್ರಾ ಎಂಬುವವರು ಅರ್ಜಿ ಸಲ್ಲಿಸಿದ್ದರು.

ನಿರ್ಧಾರ ಸ್ವಾಗತಾರ್ಹ, ಆದರೂ... ಎಲ್ಲಾ ಅತ್ಯಾಚಾರಿಗಳೂ ಗಲ್ಲಿಗೇರಲಿ!ನಿರ್ಧಾರ ಸ್ವಾಗತಾರ್ಹ, ಆದರೂ... ಎಲ್ಲಾ ಅತ್ಯಾಚಾರಿಗಳೂ ಗಲ್ಲಿಗೇರಲಿ!

ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿದ್ದು, ಇತಕ್ಕೆ ಪ್ರತಿವಾದ ಎಂಬಂತೆ ಅಫಿಡವಿಟ್ ಸಲ್ಲಿಸಿರುವ ಕೇಂದ್ರ ಸರ್ಕಾರ, ಆರೋಪಿಯನ್ನು ನೇಣುಗಂಬಕ್ಕೇರಿಸುವ ಕ್ರಮವೇ ಸರಿ.

Centre defends death by hanging in SC, says far safer and quicker

ಇದರಿಂದ ಮರಣದಂಡನೆಗೊಳಗಾದ ವ್ಯಕ್ತಿ ಬೇಗನೆ ಸಾಯಬಹುದು ಮತ್ತು ಇನ್ನಿತರ ಸಮಸ್ಯೆಗಳು ಉಲ್ಬಣಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ.

12 ವರ್ಷದೊಳಗಿನ ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ 12 ವರ್ಷದೊಳಗಿನ ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ

ಇದಕ್ಕೆ ಪ್ರತಿವಾದ ವಂಡಿಸಿದ್ದ ರಿಶಿ ಮಲ್ಹೋತ್ರಾ, ಸಾಯುವ ಹಕ್ಕ ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಹಕ್ಕಾಗಿದ್ದು, ಅದರಲ್ಲೂ ಘನತೆ ಉಳಿಯಬೇಕು ಎಂದು ಹೇಳಿದ್ದಾರೆ.

English summary
The Centre in its counter affidavit over a plea seeking an alternative method of execution other than hanging on Tuesday submitted to the Supreme Court that hanging is far safer and quicker than lethal injections or firing squads.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X