• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೆಂಟ್ರಲ್‌ ವಿಸ್ಟಾ ಯೋಜನೆ ತಡೆ ಕೋರಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ

|

ನವದೆಹಲಿ, ಜೂನ್ 3: ಸೆಂಟ್ರಲ್‌ ವಿಸ್ಟಾ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗೆ ತಡೆ ನೀಡಲು ದೆಹಲಿ ಹೈಕೋರ್ಟ್‌ ನಿರಾಕರಿಸಿ ನೀಡಿರುವ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

''ಇದೊಂದು ಗಂಭೀರ ಸಾರ್ವಜನಿಕ ಆರೋಗ್ಯ ಕಾಳಜಿಯ ವಿಚಾರ. ಸೆಂಟ್ರಲ್‌ ವಿಸ್ಟಾ ಒಂದು ಪ್ರಮುಖ ಹಾಗೂ ಅಗತ್ಯ ರಾಷ್ಟ್ರೀಯ ಯೋಜನೆ'' ಎಂದು ಹೈಕೋರ್ಟ್‌ ನೀಡಿರುವ ಆದೇಶ ಸಮರ್ಥನೀಯವಲ್ಲ ಎಂದು ಅರ್ಜಿದಾರ ಪ್ರದೀಪ್‌ ಕುಮಾರ್‌ ಮೇಲ್ಮನವಿಯಲ್ಲಿ ತಿಳಿಸಿದ್ದಾರೆ.

ಸೆಂಟ್ರಲ್ ವಿಸ್ಟಾ ಯೋಜನೆ: ಕಾನೂನು ಪ್ರಕರಣದ ಕಾಲಾನುಕ್ರಮಸೆಂಟ್ರಲ್ ವಿಸ್ಟಾ ಯೋಜನೆ: ಕಾನೂನು ಪ್ರಕರಣದ ಕಾಲಾನುಕ್ರಮ

ಲಾಕ್‌ಡೌನ್‌ ವೇಳೆ ಇಡೀ ದೇಶ ಅಗತ್ಯ ಚಟುವಟಿಕೆಗಳನ್ನು ಸ್ತಬ್ಧಗೊಳಿಸಿರುವಾಗ ಸೆಂಟ್ರಲ್‌ ವಿಸ್ಟಾ ಕಾಮಗಾರಿಯನ್ನು ಅಗತ್ಯ ರಾಷ್ಟ್ರೀಯ ಯೋಜನೆ ಎನ್ನುವುದು ಸರಿಯಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ. ಈ ಕಾಮಗಾರಿಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿದಾರರಿಗೆ ಒಂದು ಲಕ್ಷ ರೂಪಾಯಿ ದಂಡವನ್ನು ದೆಹಲಿ ಹೈಕೋರ್ಟ್ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೋವಿಡ್ 19 ಮಾರ್ಗಸೂಚಿ ಪ್ರಕಾರ ಕಟ್ಟಡ ಕಾಮಗಾರಿಗಳಿಗೆ ಅವಕಾಶ ನೀಡಲಾಗಿದೆ ಎಂದು ಕೋರ್ಟ್ ಉಲ್ಲೇಖಿಸಿ, ಒಪ್ಪಂದದ ಪ್ರಕಾರ ಈ ಯೋಜನೆ ನವೆಂಬರ್ 2021ರ ಒಳಗೆ ಸಂಪೂರ್ಣವಾಗಬೇಕಿದೆ. ಹೀಗಾಗಿ ಅದನ್ನು ಮುಂದುವರಿಸಲು ಅವಕಾಶ ನೀಡಬಹುದು ಎಂದು ಹೇಳಿದೆ.

ಸೆಂಟ್ರಲ್ ವಿಸ್ಟಾ : 2022ರ ಆಗಸ್ಟ್ 15ರಂದು ಭಾರತವು 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ವೇಳೆಗೆ ಸರಿಯಾಗಿ ಈ ಸಂಸತ್ ಭವನ ಉದ್ಘಾಟಿಸುವುದು ಸರ್ಕಾರದ ಉದ್ದೇಶ. ತ್ರಿಕೋನಾಕೃತಿಯ ಈ ಹೊಸ ಸಂಸತ್‌ನಲ್ಲಿ 900 ರಿಂದ 1,200ರಷ್ಟು ಸಂಸದರು ಕೂರುವ ಸಾಮರ್ಥ್ಯ ಇರಲಿದೆ. ಸಂಸದರು ಹಾಗೂ ಅಧಿಕಾರಿಗಳ ವಸತಿ ಗೃಹಗಳು, ವಿವಿಧ ಸಚಿವಾಲಯಗಳ ಕಚೇರಿಗಳು ಸೇರಿದಂತೆ ಅನೇಕ ಕಟ್ಟಡಗಳು ಈ ಮಾರ್ಗದಲ್ಲಿ ನಿರ್ಮಾಣವಾಗಲಿದೆ.

English summary
Central Vista Case: Appeal in Supreme Court against Delhi High Court judgment allowing construction activities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X