ಸಚಿವ ಸ್ಥಾನ ಆಕಾಂಕ್ಷಿಗಳ ಲಾಭಿ ಶುರು, ದೆಹಲಿಯಲ್ಲಿ ಅತೃಪ್ತ ಶಾಸಕರು
ನವದೆಹಲಿ, ಆಗಸ್ಟ್ 07: ಆಷಾಢ ಮುಗಿದ ಕೂಡಲೇ ಸಚಿವ ಸಂಪುಟ ವಿಸ್ತರಣೆ ಮಾಡಲು ಕಾಂಗ್ರೆಸ್ ಸಜ್ಜಾಗಿರುವ ಬೆನ್ನಲ್ಲೆ ಮತ್ತೆ ಸಚಿವ ಸ್ಥಾನ ಆಕಾಂಕ್ಷಿಗಳ ಲಾಭಿ ಶುರುವಾಗಿದ್ದು ಹಲವರು ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.
ಸಚಿವ ರಮೇಶ್ ಜಾರಕಿಹೊಳಿ ತಮ್ಮ ಗುಂಪಿನ ಶಾಸಕರನ್ನು ಕರೆದುಕೊಂಡು ದೆಹಲಿಗೆ ತೆರಳಿದ್ದು ಅಲ್ಲಿ ವೇಣುಗೋಪಾಲ್ ಅವರೊಂದಿಗೆ ಮಾತುಕತೆಯಲ್ಲಿ ನಿರತರಾಗಿದ್ದಾರೆ.
ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಕೆಲವು ಶಾಸಕರು ಅಜ್ಮೇರ್ ದರ್ಗಾ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸದಿಂದ ನೇರವಾಗಿ ದೆಹಲಿಗೆ ತೆರಳಿರುವ ಈ ತಂಡ ವೇಣುಗೋಪಾಲ್ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದೆ.

ರಮೇಶ್ ಜಾರಕಿಹೊಳಿ ಜತೆಯಲ್ಲಿ ಶಾಸಕರಾದ ನಾರಾಯಣ ರಾವ್, ಬಿ.ನಾಗೇಂದ್ರ, ರಹೀಮ್ ಖಾನ್ ಇದ್ದಾರೆ. ಎಂ.ಬಿ.ಪಾಟೀಲ್ ಸಹ ಪ್ರತ್ಯೇಕವಾಗಿ ದೆಹಲಿಗೆ ಬಂದಿದ್ದು, ಇಂದು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.












Click it and Unblock the Notifications