ಉಪಚುನಾವಣೆ ಸೋಲು ಬಿಜೆಪಿಗೆ ಎಚ್ಚರಿಕೆಯ ಪಾಠ: ಸ್ವಾಮಿ
ನವದೆಹಲಿ, ಜೂನ್ 01: "ಉಪಚುನಾವಣೆಯಲ್ಲಿನ ಹೀನಾಯ ಸೋಲು ಬಿಜೆಪಿಗೆ ಎಚ್ಚರಿಕೆಯ ಪಾಠ" ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
4 ಲೋಕಸಭಾ ಮತ್ತು 10 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಕ್ರಮಾವಾಗಿ ಒಂದು-ಒಂದು ಸ್ಥಾನಗಳಲ್ಲಿ ಮಾತ್ರ ಜಯಗಳಿಸಿತ್ತು. ಬಿಜೆಪಿ ಆಡಳಿತದಲ್ಲಿರುವ ಉತ್ತರ ಪ್ರದೇಶದಲ್ಲು ಬಿಜೆಪಿ ಉಪಚುನಾವಣೆಯಲ್ಲಿ ಹೀನಾಯ ಪ್ರದರ್ಶನ ತೋರಿದ್ದು ಚರ್ಚೆಗೆ ಗ್ರಾಸವಾಗಿತ್ತು.
"ಬಿಜೆಪಿ ಸೋಲಿನಿಂದಾಗಿ ಪಕ್ಷದ ಕಾರ್ಯಕರ್ತರು ಬೇಸರಪಡುವ ಅಗತ್ಯವಿಲ್ಲ. ಪಕ್ಷ ಎಲ್ಲ ಕಾರ್ಯಕರ್ತರಿಗೂ ಗೌರವ ನೀಡಬೇಕು. ಪಕ್ಷವನ್ನು ಕಾರ್ಪೋರೇಟ್ ಆಫೀಸ್ ರೀತಿಯಲ್ಲಿ ನಡೆಸುವುದು ಸರಿಯಲ್ಲ. ಈ ಫಲಿತಾಂಶ ನಮಗೆ ಎಚ್ಚರಿಕೆಯ ಪಾಠ" ಎಮದು ಸ್ವಾಮಿ ಹೇಳಿದ್ದಾರೆ.

ಒಟ್ಟು 14 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಉತ್ತರಾಖಂಡ್ ನ ತರಾಲಿ ವಿಧಾನಸಭಾ ಕ್ಷೇತ್ರ ಮತ್ತು ಮಹಾರಾಷ್ಟ್ರದ ಪಲ್ಘರ್ ಲೋಕಸಭಾ ಕ್ಷೇತ್ರಗಳಲ್ಲಿ ಮಾತ್ರ ಜಯ ಸಾಧಿಸಿತ್ತು. ಉಳಿದೆಲ್ಲ ಕಡೆ ಆಯಾ ರಾಜ್ಯದ ಪ್ರಾದೇಶಿಕ ಪಕ್ಷಗಳೇ ಮೇಲುಗೈ ಸಾಧಿಸಿದ್ದವು. ಮೇ 28 ರಂದು ನಡೆದಿದ್ದ ಉಪಚುನಾವಣೆಗಳ ಫಲಿತಾಂಶ ಮೇ 31 ರಂದು ಹೊರಬಿದ್ದಿತ್ತು.












Click it and Unblock the Notifications