ಕಪ್ಪುಹಣ: ಎನ್ಡಿಎ ಸರಕಾರಕ್ಕೆ ಬುಧವಾರ ಡೆಡ್ ಲೈನ್
ನವದೆಹಲಿ, ಅ.28: ವಿದೇಶದಲ್ಲಿನ ಬ್ಯಾಂಕುಗಳಲ್ಲಿನ ಕಪ್ಪು ಹಣ ವಾಪಸ್ ತರುವ ಯತ್ನದಲ್ಲಿ ಹಿಂದೆ ಬಿದ್ದಿಲ್ಲ ಎಂದು ಹೇಳಿಕೊಳ್ಳುತ್ತಿರುವ ಮೋದಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ಭಾರಿ ಹೊಡೆತ ನೀಡಿದೆ. ವಿದೇಶದಲ್ಲಿರುವ ಎಲ್ಲಾ ತೆರಿಗೆ ವಂಚಕ ಖಾತೆದಾರರ ವಿವರಗಳನ್ನು ಬುಧವಾರವೇ ಕೋರ್ಟಿಗೆ ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿ ಎಚ್ ಎಲ್ ದತ್ತು ಆದೇಶಿಸಿದ್ದಾರೆ.
ಕಪ್ಪು ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಸುಪ್ರೀಂಕೋರ್ಟಿನಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಈ ಹಿಂದೆ ಕೋರ್ಟ್ ನೀಡಿದ್ದ ಆದೇಶ(ಖಾತೆದಾರರ ಹೆಸರು ಬಹಿರಂಗಕ್ಕೆ ಸಂಬಂಧಿಸಿದಂತೆ) ದಲ್ಲಿ ತಿದ್ದುಪಡಿ/ವಿನಾಯತಿ ಬಯಸಿ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿತ್ತು.

ಅದರೆ, ಸರ್ಕಾರದ ಪರವಾಗಿ ಅಟರ್ನಿ ಜನರಲ್ ಮುಕುಲ್ ರೊಹ್ಟಗಿ ಸಲ್ಲಿಸಿದ್ದ ತಿರಸ್ಕರಿಸಿದ ನ್ಯಾ. ದತ್ತು ರಂಜನಾ ದೇಸಾಯಿ, ಮದನ್ ಬಿ.ಲಾಕೂರ್ ಅವರಿದ್ದ ನ್ಯಾಯಪೀಠ 2011 ಅಥವಾ 2014ರಲ್ಲಿ ನೀಡಲಾದ ಆದೇಶದಲ್ಲಿ ಒಂದು ಸಾಲು ಬದಲಾವಣೆ ಮಾಡಲಾಗುವುದಿಲ್ಲ. ಈಗ ನೀವು ಎಲ್ಲಾ ಖಾತೆದಾರರ ವಿವರಗಳನ್ನು ನೀಡಿ, ಖಾತೆದಾರರನ್ನು ರಕ್ಷಿಸುವ ತಂತ್ರವೇನಾದರೂ ಅನುಸರಿಸುತ್ತಿದ್ದೀರಾ? ಆಯ್ಕೆ ಮಾಡಿ ಕೆಲವು ಹೆಸರುಗಳನ್ನು ಮಾತ್ರ ಏಕೆ ನೀಡಿದ್ದೀರಾ? ಎಂದು ನ್ಯಾ. ದತ್ತು ಅವರು ಪ್ರಶ್ನಿಸಿದ್ದಾರೆ. [ಬ್ಯಾಂಕುಗಳಲ್ಲಿ ಕಪ್ಪು ಹಣ : ಟೈಮ್ ಲೈನ್]
ಜೇಟ್ಲಿ ಪ್ರತಿಕ್ರಿಯೆ: ನ್ಯಾಯಾಲಯದ ಸೂಚನೆಯಂತೆ ಖಾತೆದಾರರ ಪಟ್ಟಿಯನ್ನು ಸಲ್ಲಿಸುತ್ತೇವೆ. ಯಾವುದೇ ರೀತಿಯ ತನಿಖೆ ನಡೆಸಲು ಸೂಚಿಸಲಿ ಅದಕ್ಕೆ ಸರ್ಕಾರ ಸೂಕ್ತ ಸಹಕಾರ ನೀಡಲಿದೆ ಎಂದಿದ್ದಾರೆ.
ಪ್ರಶಾಂತ್ ಭೂಷಣ್ ಪ್ರತಿಕ್ರಿಯೆ ನೀಡಿ:
Centre said they cant reveal some names due to double taxation avoidance agreement: Prashant Bhushan on black money case
— ANI (@ANI_news) October 28, 2014 ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಐದು ತಿಂಗಳಲ್ಲಿ ಇದೇ ಮೊದಲ ಬಾರಿಗೆ ತೆರಿಗೆ ವಂಚಕ ಖಾತೆದಾರರ ಹೆಸರುಗಳನ್ನು ಸೋಮವಾರ ಬಹಿರಂಗಗೊಳಿಸಿತ್ತು. ಎನ್ ಡಿಎ ಸರ್ಕಾರ ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಟಿಂಬ್ಲೋ ಕಂಪನಿಯ ರಾಧಾ ಸೇರಿದಂತೆ ನಾಲ್ವರು, ಡಾಬರ್ ನ ಪ್ರದೀಪ್ ಬರ್ಮನ್ ಹಾಗೂ ಷೇರು ಮಾರುಕಟ್ಟೆ ತಜ್ಞ ಪಂಕಜ್ ಚಿಮನ್ ಲಾಲ್ ಲೋಧಿಯಾ ಹೆಸರು ಸೇರಿ ಒಟ್ಟು 7 ಜನರಿದ್ದಾರೆ.[ಕಪ್ಪು ಹಣ ಖಾತೆದಾರರ ಹೆಸರು ಬಹಿರಂಗ]
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications