ಕಪ್ಪುಹಣ: ಮತ್ತೆ ಕೇಂದ್ರಕ್ಕೆ ಚುರುಕು ಮುಟ್ಟಿಸಿದ ಕೋರ್ಟ್

ಈ ಎಸ್‌ಐಟಿ ನೇತೃತ್ವ ವಹಿಸಿಕೊಂಡು ಕೋರ್ಟ್ ಅಧೀನದಲ್ಲಿಯೇ ಖಡಕ್ ವಿಚಾರಣೆ ನಡೆಸುವಂತೆ ನಿವೃತ್ತ ನ್ಯಾ. ಎಂಬಿ ಶಾ ಅವರಿಗೆ ಸುಪ್ರೀಂಕೋರ್ಟ್ ಸೂಚಿಸಿದೆ. ಅಷ್ಟೇ ಅಲ್ಲ, ವಿಳಂ ಮಾಡದೆ ಆದಷ್ಟು ಬೇಗ ತನಗೆ ವರದಿ ನೀಡುವಂತೆಯೂ ಕೋರ್ಟ್ ಸೂಚಿಸಿದೆ. ಸುಪ್ರೀಂಕೋರ್ಟ್ ನ್ಯಾ. ಎಚ್ಎಲ್ ದತ್ತು, ನ್ಯಾ. ಮದನ್ ಲೋಕೂರ್ ಮತ್ತು ನ್ಯಾ. ರಂಜನಾ ದೇಸಾಯಿ ಅವರ ನ್ಯಾಯಪೀಠವು ಈ ಆದೇಶ ನೀಡಿದೆ.
ಇದರಿಂದ ಕಪ್ಪುಹಣದ ಬಗ್ಗೆ ಸಿನಿಕರಾಗಿ ಮಾತನಾಡಿಕೊಳ್ಳುವುದು ತಪ್ಪಿ, ತಪ್ಪಿತಸ್ಥರು ಯಾರೆಂಬುದು ಜನತೆಗೆ ಗೊತ್ತಾಗುವ ಕಾಲ ಬಂದಿದೆ. ಈ ಹಿಂದೆಯೂ ಸರಕಾರಗಳು ಕೆಲ ಮುಖ್ಯ ಪ್ರಕರಣಗಳಲ್ಲಿ ಎಂದಿನ ಉದಾಸೀನತೆ ತೋರಿದಾಗ ಸ್ವತಃ ಸುಪ್ರೀಂಕೋರ್ಟ್ ತನ್ನ ಅಧೀನದಲ್ಲೇ SIT ಗಳನ್ನು ರಚಿಸಿ, ಭ್ರಷ್ಟಾಚಾರವನ್ನು ಬಯಲಿಗೆಳೆದಿರುವ ಪ್ರಸಂಗಗಳು ಅನೇಕವಿವೆ. ಹಾಗಾಗಿ ಈಗಲೂ ಸುಪ್ರೀಂಕೋರ್ಟಿನ ಈ ನಿರ್ಧಾರದಿಂದ ಕೋಟಿ ಕೋಟಿಗಳಲ್ಲಿ ವಿದೇಶಿ ಬ್ಯಾಂಕುಗಳಲ್ಲಿರುವ ಭಾರತೀಯರ ಹಣ ಬಯಲಿಗೆ ಬರುವ ದೊಡ್ಡ ಮಟ್ಟದ ಆಸೆ ಚಿಗುರಿದೆ.
ಇನ್ನು ಜಸ್ಟೀಸ್ ಎಂಬಿ ಶಾ ಅವರು ಸಹ ಅಕ್ರಮ ಗಣಿಗಾರಿಕೆ ಕುರಿತಂತೆ ಸುಪ್ರೀಂ ಕೋರ್ಟಿಗೆ ವರದಿ ನೀಡಿದ್ದರು. ಇದೇ ವೇಳೆ ಮನ್ನೊಬ್ಬ ನಿವೃತ್ತ ನ್ಯಾಯಾಧೀಶ ನ್ಯಾ. ಅರಿಜಿತ್ ಪಸಾಯತ್ ಅವರನ್ನು ಸಮಿತಿಯ ಉಪ ಮುಖ್ಯಸ್ಥರನ್ನಾಗಿ ಸುಪ್ರೀಂಕೋರ್ಟ್ ನೇಮಿಸಿದೆ. ಇದೇ ಎಸ್ಐಟಿಯಲ್ಲಿ ದೇಶದ ಉನ್ನತ ತನಿಖಾಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.
ನ್ಯಾಯವಾದಿ ರಾಮ ಜೇಠ್ಮಲಾನಿ ಅವರು ಭಾರತೀಯರ 19 ಲಕ್ಷ ಕೋಟಿ ರೂ. ಹಣ ವಿದೇಶಿ ಬ್ಯಾಂಕುಗಳಲ್ಲಿ (Liechtenstein Bank, Germany) ಇದೆ. ಇದನ್ನು ವಾಪಸ್ ತರಬೇಕು ಎಂದು ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ನಡೆಸುತ್ತಿದೆ. ಅದರ ಅಂಗವಾಗಿ ಸುಪ್ರೀಂಕೋರ್ಟ್ 2011ರಲ್ಲಿ Special Investigation Team (SIT) ರಚಿಸಿತ್ತು. ಆದರೆ ಕೇಂದ್ರ ಸರಕಾರವು ಕಾಳಧನದ ವಿಚಾರದಲ್ಲಿ ದೇಶದ ಹಿತಾಸಕ್ತಿಗೆ ಎಳ್ಳುನೀರು ಬಿಟ್ಟು, SITಯನ್ನು ಸುಪ್ತಾವಸ್ಥೆಯಲ್ಲಿಟ್ಟಿತ್ತು.
ಸುಪ್ರೀಂಕೋರ್ಟ್ ನಿವೃತ್ತ ಜಡ್ಜ್ ಬಿಪಿ ಜೀವನ್ ರೆಡ್ಡಿ ಅವರು SIT ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ಅದು ಬಲ ಕಳೆದುಕೊಂಡಿತ್ತು. ಮೂರು ದಿನಗಳ ಹಿಂದೆ 18 ಮಂದಿಯ ಕಾಳ ಧನವಂತರನ್ನು ಹೆಸರಿಸಿ, ಕೋರ್ಟಿಗೆ ವರದಿ ಸಲ್ಲಿಸಿದ್ದ ಕೇಂದ್ರ ಸರಕಾರವು SIT ಪುನಾರಚನೆ ವಿಷಯವನ್ನು ಕೈಬಿಡಬೇಕು ಎಂದು ಮನವಿ ಸಲ್ಲಿಸಿತ್ತು.












Click it and Unblock the Notifications