2019 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬರೋಲ್ಲ: ಭವಿಷ್ಯ ನುಡಿದಿದ್ದು ಯಾರು?!
Recommended Video

ನವದೆಹಲಿ, ನವೆಂಬರ್ 19: 2019 ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಸಾಧ್ಯವೇ ಇಲ್ಲ ಎಂದು ಲೋಕತಾಂತ್ರಿಕ ಜನತಾ ದಳದ ಮುಖಂಡ ಶರದ್ ಯಾದವ್ ಭವಿಷ್ಯ ನುಡಿದಿದ್ದಾರೆ.
ಪಿಟಿಐ ಗೆ ಅವರು ನೀಡಿದ ಸಂದರ್ಶನದಲ್ಲಿ, '2014 ರಲ್ಲಿ ಬಿಜೆಪಿಗೆ ಅದ್ಭುತ ಜಯ ತಂದುಕೊಟ್ಟಿದ್ದ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳೇ ಈ ಬಾರಿ ಬಿಜೆಪಿಗೆ ಸೋಲು ತಂದೊಡ್ಡಲಿವೆ' ಎಂದರು.
'ಪ್ರಧಾನಿ ನರೇಂದ್ರ ಮೋದಿಯವರು ಜನರನ್ನು ಭಾವನಾತ್ಮಕವಾಗಿ ಮೋಡಿ ಮಾಡಲು ನೋಡುತ್ತಿದ್ದಾರೆ. ತಮ್ಮ ಚಹಾ ವ್ಯಾಪಾರದ ಹಿನ್ನೆಲೆಯ ಬಗ್ಗೆಯೇ ಸದಾ ಹೇಳುವ ಮೋದಿಯವರು ಮೊದಲು ತಮ್ಮ ಸರ್ಕಾರದ ಸಾಧನೆಗಳೇನು, ನಾಲ್ಕೂವರೆ ವರ್ಷದಲ್ಲಿ ತಮ್ಮ ಸರ್ಕಾರ ಜನರಿಗೆ ಏನು ಮಾಡಿದೆ ಎಂಬುದನ್ನು ಹೇಳಬೇಕು' ಎಂದು ಅಭಿಪ್ರಾಯಪಟ್ಟರು.

'ಈ ನವೆಂಬರ್-ಡಿಸೆಂಬರ್ ನಲ್ಲಿ ನಡೆಯಲಿರುವ ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ. ಜನರಿಗೆ ಬಿಜೆಪಿ ನೇತೃತ್ವದ ಸರ್ಕಾರದ ಮೇಲೆ ಜಿಗುಪ್ಸೆ ಬಂದಿದೆ. 2019 ರ ಲೋಕಸಭಾ ಚುನಾವಣೆಗೆ ಈ ವಿಧಾನಸಭೆ ಚುನಾವಣೆಗಳು ಭದ್ರ ತಳಪಾಯ ಹಾಕಲಿವೆ' ಎಂದರು.












Click it and Unblock the Notifications