ಉದ್ಯಾನದಲ್ಲಿ ನೇಣು ಹಾಕಿಕೊಂಡು ಬಿಜೆಪಿ ನಾಯಕ ಆತ್ಮಹತ್ಯೆ

ನವದೆಹಲಿ, ಮಾರ್ಚ್ 30: ದೆಹಲಿಯ ಬಿಜೆಪಿ ನಾಯಕ ಜಿಎಸ್ ಬಾವಾ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದಾರೆ. ಪಶ್ಚಿಮ ದೆಹಲಿ ಬಿಜೆಪಿಯ ಮಾಜಿ ಉಪಾಧ್ಯಕ್ಷರಾಗಿದ್ದ ಬಾವಾ, ನಗರದಲ್ಲಿನ ತಮ್ಮ ನಿವಾಸದ ಸಮೀಪದಲ್ಲಿರುವ ಉದ್ಯಾನದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಕೌಟುಂಬಿಕ ಸಮಸ್ಯೆಗಳಿಂದ ಮನನೊಂದು ಬಾವಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಅವರ ಸಾವಿಗೆ ನಿಖರ ಕಾರಣವನ್ನು ಬಹಿರಂಗಪಡಿಸಲು ಪೊಲೀಸರು ಹಾಗೂ ಬಿಜೆಪಿ ಮುಂದಾಗಿಲ್ಲ.

58 ವರ್ಷದ ಜಿಎಸ್ ಬಾವಾ ಅವರು ಪಶ್ಚಿಮ ದೆಹಲಿಯ ಫತೇಹ್ ನಗರದಲ್ಲಿ ನೆಲೆಸಿದ್ದರು. ದೆಹಲಿಯ ಸುಭಾಷ್‌ ನಗರದಲ್ಲಿರುವ ಉದ್ಯಾನವೊಂದರ ಸರೋವರದ ಸಮೀಪದ ಗ್ರಿಲ್ ಒಂದಕ್ಕೆ ನೇಣು ಹಾಕಿಕೊಂಡಿರುವುದು ಸೋಮವಾರ ಸಂಜೆ ಕಂಡುಬಂದಿದೆ. ಸೋಮವಾರ ಸಂಜೆ 6 ಗಂಟೆ ವೇಳೆಗೆ ಉದ್ಯಾನದ ಒಳಗೆ ನೇಣುಬಿಗಿದ ಸ್ಥಿತಿಯಲ್ಲಿ ದೇಹವೊಂದು ಪತ್ತೆಯಾಗಿದ್ದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದು ಬಾವಾ ಅವರ ಮೃತದೇಹ ಎಂಬುದನ್ನು ಪೊಲೀಸರು ಗುರುತಿಸಿದರು. ಇದುವರೆಗೂ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ.

Delhi BJP Leader GS Bawa Found Hanging At Park, Suicide Suspected

ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ಅವರು ಕಳೆದ ವಾರ ದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು. ದೆಹಲಿಯ ನಿವಾಸದಲ್ಲಿ ಒಂಟಿಯಾಗಿ ಅವರು ವಾಸಿಸುತ್ತಿದ್ದರು. ಕೊಠಡಿಯ ಒಳಗಿನಿಂದ ಬಾಗಿಲು ಹಾಕಿಕೊಂಡು ಅವರು ನೇಣು ಬಿಗಿದು ಮೃತಪಟ್ಟಿದ್ದರು. ಇದುವರೆಗೂ ಅವರ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ.

COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+