ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮ್‍ಲೀಲಾ ಮೈದಾನದಲ್ಲಿ ಕೇಸರಿ ರಂಗು, ಚಿತ್ರಗಳು

|
Google Oneindia Kannada News

ನವದೆಹಲಿ, ಜ.10 : ನವದೆಹಲಿಯ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಬೇಕು ಎಂದು ಕಾರ್ಯತಂತ್ರ ರೂಪಿಸಿದೆ. ರಾಮ್‍ಲೀಲಾ ಮೈದಾನದಲ್ಲಿ ಶನಿವಾರ ಬೃಹತ್ ಚುನಾವಣಾ ಪ್ರಚಾರ ಸಭೆಯನ್ನು ಆಯೋಜಿಸಿ ಬಹಿರಂಗ ಪ್ರಚಾರಕ್ಕೆ ಚಾಲನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಜಾರ್ಖಾಂಡ್‌ ಸಿಎಂ ರಘುವರ್ ದಾಸ್, ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಸೇರಿದಂತೆ ಪ್ರಮುಖ ನಾಯಕರು ಇಂದಿನ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. [ದೆಹಲಿ ಜನರಿಗೆ ಮೋದಿ ನೀಡಿದ ಭರವಸೆ ಏನು?]

ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೆಹಲಿ ನಿವಾಸಿಗಳನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಯೆಂದರೆ ವಿದ್ಯುತ್ ಸಮಸ್ಯೆ. ಜನರೇಟರ್ ಬಳಸಿದರೂ ಇದಕ್ಕೆ ಮುಕ್ತಿ ಸಿಗುವುದಿಲ್ಲ. ಆದರೆ, ನಮಗೆ ಮತ ನೀಡಿದರೆ ನಿಮ್ಮ ವಿದ್ಯುತ್ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆ ಹರಿಸುತ್ತೇವೆ ಎಂದು ಭರವಸೆ ನೀಡಿದರು. ಸಮಾವೇಶದ ಚಿತ್ರಗಳು ಇಲ್ಲಿವೆ [ಪಿಟಿಐ ಚಿತ್ರಗಳು]

ಚುನಾವಣಾ ಪ್ರಚಾರಕ್ಕೆ ಚಾಲನೆ

ಚುನಾವಣಾ ಪ್ರಚಾರಕ್ಕೆ ಚಾಲನೆ

ನವದೆಹಲಿಯ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಸ್ಪಷ್ಟ ಬಹುತದೊಂದಿಗೆ ಸರ್ಕಾರ ರಚನೆ ಮಾಡಬೇಕು ಎಂದು ಕಾರ್ಯತಂತ್ರ ರೂಪಿಸಿದೆ. ಬೃಹತ್ ಚುನಾವಣಾ ಪ್ರಚಾರ ಸಭೆಯನ್ನು ಆಯೋಜಿಸಿ ಬಹಿರಂಗ ಪ್ರಚಾರಕ್ಕೆ ಚಾಲನೆ ನೀಡಿದೆ.

ರಾಮ್‍ಲೀಲಾ ಮೈದಾನದಲ್ಲಿ ಕೇಸರಿ ಕಲರವ

ರಾಮ್‍ಲೀಲಾ ಮೈದಾನದಲ್ಲಿ ಕೇಸರಿ ಕಲರವ

ಶನಿವಾರ ರಾಮ್‌ಲೀಲಾ ಮೈದಾನದಲ್ಲಿ ಕೇಸರಿ ಕಲರವ. ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಬೃಹತ್ ಚುನಾವಣಾ ಪ್ರಚಾರ ಸಭೆಯನ್ನು ನಡೆಸಲಾಯಿತು.

24 ಗಂಟೆ ವಿದ್ಯುತ್ ಭರವಸೆ

24 ಗಂಟೆ ವಿದ್ಯುತ್ ಭರವಸೆ

ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ವಿದ್ಯುತ್ ಸಮಸ್ಯೆಯಿಂದ ನಿಮ್ಮನ್ನು ಮುಕ್ತಗೊಳಿಸುತ್ತೇವೆ. ಮೊಬೈಲ್ ಸಿಮ್ ಕಾರ್ಡ್ ನಿಮಗೆ ಇಷ್ಟವಿಲ್ಲವೆಂದರೆ ಹೇಗೆ ಬದಲಾಯಿಸುತ್ತಿರೋ ಹಾಗೆ ವಿದ್ಯುತ್ ಸಂಪರ್ಕವನ್ನು ಬದಲಾಯಿಸುವ ವ್ಯವಸ್ಥೆ ತರುತ್ತೇವೆ ಎಂದು ಭರವಸೆ ನೀಡಿದ್ದಾರೆ.

ದೆಹಲಿ ಭವಿಷ್ಯ ಹಾಳುಮಾಡುವವರನ್ನು ಶಿಕ್ಷಿಸಿ

ದೆಹಲಿ ಭವಿಷ್ಯ ಹಾಳುಮಾಡುವವರನ್ನು ಶಿಕ್ಷಿಸಿ

ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೆಸರು ಹೇಳದೆಯೇ ವಾಗ್ದಾಳಿ ನಡೆಸಿದ ಮೋದಿ, ಸುಳ್ಳು ಭರವಸೆ, ಹೇಳಿಕೆಗಳನ್ನು ನೀಡಿ ಜನರಿಗೆ ಮೋಸ ಮಾಡುವ ವ್ಯಕ್ತಿಗಳಿಗೆ ಮತ ಹಾಕಬೇಡಿ. 1 ವರ್ಷಗಳ ದೆಹಲಿಯ ಭವಿಷ್ಯವನ್ನು ಹಾಳು ಮಾಡಿದವರನ್ನು ನೀವು ಶಿಕ್ಷಿಸಬೇಕು ಎಂದು ಕರೆ ನೀಡಿದರು.

ಕೆಲಸ ಗೊತ್ತಿಲ್ಲದ ವ್ಯಕ್ತಿ ಏನು ಮಾಡುತ್ತಾನೆ?

ಕೆಲಸ ಗೊತ್ತಿಲ್ಲದ ವ್ಯಕ್ತಿ ಏನು ಮಾಡುತ್ತಾನೆ?

ಕೆಲಸ ಗೊತ್ತಿಲ್ಲದ ವ್ಯಕ್ತಿಯನ್ನು ಕೆಲಸ ಮಾಡಲು ಹೇಳಿದರೆ ಏನು ಆಗುತ್ತದೆ? ಎನ್ನುವುದಕ್ಕೆ ದೆಹಲಿಯೇ ಸ್ಪಷ್ಟ ಉದಾಹರಣೆ ಎಂದು ಹೇಳುವ ಮೂಲಕ ಕೇಜ್ರಿವಾಲ್ ವಿರುದ್ಧ ಮೋದಿ ಪರೋಕ್ಷವಾಗಿ ಕಿಡಿ ಕಾರಿದರು.

ಭ್ರಷ್ಟಾಚಾರ ವಿರುದ್ಧ ಅಭಿಯಾನ

ಭ್ರಷ್ಟಾಚಾರ ವಿರುದ್ಧ ಅಭಿಯಾನ

ಭ್ರಷ್ಟಾಚಾರದ ವಿರುದ್ಧದ ಅಭಿಯಾನವನ್ನು ನಾವು ಆರಂಭಿಸಿದ್ದೇವೆ. ದೆಹಲಿ ನಿವಾಸಿಗಳನ್ನು ಭ್ರಷ್ಟಾಚಾರದಿಂದ ಮುಕ್ತಿಗೊಳಿಸಬೇಕಿದೆ ಎಂದು ಮೋದಿ ಹೇಳಿದರು.

ಮೋದಿ ಅಭಿಮಾನಿ

ಮೋದಿ ಅಭಿಮಾನಿ

ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಮೋದಿ ಅಭಿಮಾನಿ ಕಂಡಿದ್ದು ಹೀಗೆ.

ಅಭಿವೃದ್ಧಿಯೇ ನಮ್ಮ ಮಂತ್ರ

ಅಭಿವೃದ್ಧಿಯೇ ನಮ್ಮ ಮಂತ್ರ

ಅಭಿವೃದ್ಧಿಯೇ ಬಿಜೆಪಿಯ ಮಂತ್ರ ಆದ್ದರಿಂದ ಇಂದು ಬಿಜೆಪಿ ದೇಶದೆಲ್ಲೆಡೆ ತನ್ನ ಅಸ್ತಿತ್ವ ಹೊಂದಿದೆ. ದೆಹಲಿಯಲ್ಲಿಯೂ ನಮಗೆ ಮತ ನೀಡಿ ಎಂದು ನಾಯಕರು ಮನವಿ ಮಾಡಿದರು.

ಫಡ್ನವೀಸ್ ಮೋಡಿ

ಫಡ್ನವೀಸ್ ಮೋಡಿ

ದೆಹಲಿಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪಾಲ್ಗೊಂಡಿದ್ದರು.

ಸಮಾವೇಶದಲ್ಲಿ ಪಾಲ್ಗೊಂಡಿದ್ದವರು

ಸಮಾವೇಶದಲ್ಲಿ ಪಾಲ್ಗೊಂಡಿದ್ದವರು

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಜಾರ್ಖಾಂಡ್‌ ಸಿಎಂ ರಘುವರ್ ದಾಸ್, ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಸೇರಿದಂತೆ ಪ್ರಮುಖ ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

English summary
Bharatiya Janata Party on Saturday launched its campaign for the upcoming Delhi assembly polls at an "Abhinandan" rally at the Ramlila Maidan. Here is pics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X