ದೆಹಲಿಯಲ್ಲಿ ಒಬಾಮಾ ಭದ್ರತೆಗೆ 1 ಲಕ್ಷ ಪೊಲೀಸರು

ನವದೆಹಲಿ, ಜ.19 : ಗಣರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಏಳು ಸ್ತರದ ಭದ್ರತೆ ಒದಗಿಸಲು ಸಿದ್ಧತೆಗಳು ಆರಂಭಗೊಂಡಿವೆ. ಒಬಾಮಾ ಅವರ ಭದ್ರತೆಯ ಹೊಣೆಯನ್ನು ಉಭಯ ದೇಶಗಳ ಭದ್ರತಾ ಪಡೆಗಳು ಹಾಗೂ ಗುಪ್ತಚರ ಸಂಸ್ಥೆಗಳು ಜಂಟಿಯಾಗಿ ವಹಿಸಿಕೊಂಡಿವೆ.

ಅಮೆರಿಕದ ಅಧ್ಯಕ್ಷರೊಬ್ಬರು ಭಾರತದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಇದೇ ಮೊದಲ ಬಾರಿಗೆ ಪಾಲ್ಗೊಳ್ಳುತ್ತಿದ್ದಾರೆ. ಬಬಾಮಾ ಅವರಿಗೆ ಜಾಗತಿಕ ಉಗ್ರಗಾಮಿ ಸಂಘಟನೆಗಳಿಂದ ಬೆದರಿಕೆ ಇದೆ. ಆದ್ದರಿಂದ ಅತ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. [ಗಣರಾಜ್ಯೋತ್ಸವಕ್ಕೆ ಒಬಮಾ ಬರ್ತಾರೆ]

barack obama

ಜ.25ರಿಂದ 27ರವರೆಗೆ ಭಾರತದಲ್ಲಿರುವ ಒಬಾಮಾ ಅವರ ಭದ್ರತೆಯ ಹೊಣೆಯನ್ನು ಉಭಯ ದೇಶಗಳ ಭದ್ರತಾ ಪಡೆಗಳು ಹಾಗೂ ಗುಪ್ತಚರ ಸಂಸ್ಥೆಗಳು ಜಂಟಿಯಾಗಿ ವಹಿಸಿಕೊಂಡಿವೆ. ಉಗ್ರರು ದೆಹಲಿ ಮೇಲೆ ನಡೆಸಬಹುದಾದ ಸಂಭಾವ್ಯ ದಾಳಿ ತಡೆಗಟ್ಟಲು ಭದ್ರತಾ ಪಡೆಗಳು ಸಿದ್ಧವಾಗಿವೆ. [ಒಬಾಮಾ ನಂತರ ಮೋದಿಯೇ ಜನಪ್ರಿಯ ವ್ಯಕ್ತಿ!]

ಏಳು ಸ್ತರದ ಭದ್ರತೆ : ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಾಜಪಥದಲ್ಲಿನ ಬಹಿರಂಗ ವೇದಿಕೆಯಲ್ಲಿ ಸುಮಾರು ಎರಡು ಗಂಟೆ ಕಾಲವಿರಲಿದ್ದು, ಪಥ ಸಂಚಲನ ವೀಕ್ಷಿಸಲಿದ್ದಾರೆ. [ಗಣರಾಜ್ಯೋತ್ಸವ : ಸಿಮಿ, ಲಷ್ಕರ್ ದಾಳಿ ಸಾಧ್ಯತೆ]

ಒಬಾಮಾ ಅವರ ರಕ್ಷಣೆಗೆ ಏಳು ಸ್ತರದ ಭದ್ರತೆ ಒದಗಿಸಲಾಗುತ್ತದೆ. ಇದರ ನಿರ್ವಹಣೆಗಾಗಿಯೇ ದೆಹಲಿಯಲ್ಲಿ ಪ್ರತ್ಯೇಕ ಪೊಲೀಸ್ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ರಾಜಪಥದ ಪ್ರದೇಶದ ಕಣ್ಗಾವಲಿಗೆ ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ) ಹಾಗೂ 'ಅಮೆರಿಕನ್ ಸಿಕ್ರೆಟ್ ಸರ್ವಿಸ್' (ಎಎಸ್‌ಎಸ್) ಏಜೆನ್ಸಿಯ ಸಿಬ್ಬಂದಿ ಇರುತ್ತಾರೆ.

80 ಸಾವಿರ ಪೊಲೀಸ್, 20 ಸಾವಿರ ಅರೆಸೇನಾಪಡೆ ಸಿಬ್ಬಂದಿ ಭದ್ರತೆ ನೀಡಲಿದ್ದಾರೆ. ವಿವಿಐಪಿಗಳು ಪರೇಡ್ ವೀಕ್ಷಿಸಲು ಕೂರುವ ಸ್ಥಳದ ಸುತ್ತ ಗುಂಡು ನಿರೋಧಕ ಗಾಜಿನ ಕವಚ ನಿರ್ಮಿಸುವ ಸಾಧ್ಯತೆಯೂ ಇದೆ. ದೆಹಲಿಯ ವಿವಿಧೆಡೆ 15,000 ಸಿಸಿಟಿವಿಗಳನ್ನು ಅಳವಡಿಸಲಾಗಿದೆ.

ವಿಮಾನ ಹಾರಾಟವಿಲ್ಲ : ಗಣರಾಜ್ಯೋತ್ಸವ ಸಮಾರಂಭ ನಡೆಯುವ ರಾಜಪಥ ಪ್ರದೇಶ ವಲಯದಲ್ಲಿ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಅನುಮಾನಾಸ್ಪದ ವಿಮಾನಗಳು ಹಾರಾಡಿದರೆ ಅವನ್ನು ಹೊಡೆದುರುಳಿಸಲು ಪೊಲೀಸರು ಸಜ್ಜಾಗಿದ್ದಾರೆ.

ರಾಜಪಥ ಮಾರ್ಗಕ್ಕೆ ಸಂಪರ್ಕಿಸುವ ರಫಿ ಮಾರ್ಗ್, ಜನಪಥ್ ಹಾಗೂ ಮಾನ್ ಸಿಂಗ್ ರಸ್ತೆ ಎರಡು ದಿನ ಮೊದಲೇ ಬಂದ್ ಆಗಲಿದೆ. ರಾಜಪಥ ಮಾರ್ಗದ ಸುತ್ತಮುತ್ತಲಿನ ಮೆಟ್ರೋ ರೈಲು ಸಂಚಾರ 72 ಗಂಟೆಗಳ ಮುಂಚೆ ಸ್ಥಗಿತಗೊಳ್ಳಲಿದೆ. ಒಬಾಮಾ ತಾಜ್ ಮಹಲ್‌ಗೂ ಭೇಟಿ ನೀಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+