• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟಾಪ್ 20 ಹೈಟೆಕ್ ನಗರಗಳಲ್ಲಿ ಬೆಂಗಳೂರಿಗೆ 12ನೇ ಸ್ಥಾನ

By Vanitha
|

ನವದೆಹಲಿ, ಜುಲೈ, 07: ವಿಶ್ವದ ತಂತ್ರಜ್ಞಾನ ಸಮೃದ್ಧ ಟಾಪ್‌ 20 ಹೈಟೆಕ್ ನಗರಗಳಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು 12ನೇ ಸ್ಥಾನ ಪಡೆದುಕೊಂಡಿದೆ.

ಜಾಗತಿಕ ಆಸ್ತಿ ಸಲಹಾ ಸಂಸ್ಥೆ ಜೆಎಲ್ಎಲ್ (global property consultant Jones Lang LaSalle -JLL) ನಡೆಸಿದ ವಾರ್ಷಿಕ ಸಮೀಕ್ಷೆಯಲ್ಲಿ ಟಾಪ್‌ 20 ನಗರಗಳನ್ನು ಆಯ್ಕೆ ಮಾಡಿಕೊಂಡಿತ್ತು. ಅದರಲ್ಲಿ ಬೆಂಗಳೂರು 12 ನೇ ಸ್ಥಾನ ದಕ್ಕಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದ್ದು, ನಗರಗಳ ಈ ಪಟ್ಟಿಯಲ್ಲಿ ಆಯ್ಕೆಯಾದ 'ಭಾರತ ದೇಶದ ಮೊದಲ ನಗರ' ಎಂಬ ಪ್ರತಿಷ್ಠೆಯೂ ದೊರೆತಿದೆ. ಮೊದಲ 3 ಸ್ಥಾನಗಳನ್ನು ಲಂಡನ್, ಸ್ಯಾನ್ ಹೋಸೆ ಮತ್ತು ಬೀಜಿಂಗ್ ನಗರಗಳು ಹಂಚಿಕೊಂಡಿದೆ.[ಒನ್ ನೇಷನ್ ಒನ್ ನಂಬರ್ ಫುಲ್ ಪೋರ್ಟ್​ಬಿಲಿಟಿ]

ಉತ್ತಮ ಆರ್ಥಿಕ ಪ್ರಗತಿ, ಹೂಡಿಕೆ ಮೂಲ ಸೌಕರ್ಯ , ಉತ್ತಮ ಉದ್ಯಮಶೀಲತೆ ಹಾಗೂ ಕಚೇರಿಗಳ ಸ್ಥಾಪನೆಗೆ ಲಭ್ಯವಿರುವ ಸಮೃದ್ದವಾದ ಸ್ಥಳಾವಕಾಶ, ವೇಗವಾಗಿ ಬೆಳೆಯುತ್ತಿರುವ ರಿಯಲ್‌ ಎಸ್ಟೇಟ್ ಉದ್ಯಮ, ಹೂಡಿಕೆ ಮತ್ತು ವ್ಯಾಪಾರಕ್ಕಾಗಿ ಆಸಕ್ತಿ ವಹಿಸುತ್ತಿರುವ ಬೃಹತ್ ಕಂಪನಿಗಳು ಬೆಂಗಳೂರನ್ನು ಮೇರು ಮಟ್ಟದಲ್ಲಿ ನಿಲ್ಲಿಸಲು ಸಾಧ್ಯವಾಯಿತು ಎಂದು ಜೆಎಲ್ಎಲ್ ಸಂಸ್ಥೆಯ ಮುಖ್ಯಸ್ಥ ಅನೂಜ್ ಪುರಿ ತಿಳಿಸಿದ್ದಾರೆ.

ಸಂಶೋಧನಾ ಕ್ಷೇತ್ರದಲ್ಲಿಯೂ ಉಚ್ಚ ಸ್ಥಾನದಲ್ಲಿದ್ದು, ಅತಿ ಹೆಚ್ಚು ಅಂತರಾಷ್ಟ್ರೀಯ ಪೇಟೆಂಟ್ ಅರ್ಜಿಗಳು ಸಲ್ಲಿಕೆಯಾಗುವ ನಗರವೆಂಬ ಖ್ಯಾತಿಗೂ ಪಾತ್ರವಾಗಿದೆ. ಹೊಸ ಹೈಟೆಕ್ ನಗರಗಳ ನೋಂದಣಿಯಲ್ಲೂ ಕಳೆದ ಬಾರಿಗಿಂತ ಈ ಬಾರಿ ಅಧಿಕವಾಗಿರುವುದು ಬೆಂಗಳೂರನ್ನು ಆಯ್ಕೆಮಾಡಿಕೊಳ್ಳಲು ಪ್ರಮುಖ ಕಾರಣವಾಗಿದೆ.

ಮತ್ತೊಂದು ವಿಶೇಷ:

ಮೆಟ್ರೋ, ನಗರ ಬಸ್ ವ್ಯವಸ್ಥೆ, ರಿಂಗ್ ರೋಡ್ ಸೇರಿದಂತೆ ಹಲವು ಮೂಲಸೌಕರ್ಯಗಳಿಗೆ ಹೆಚ್ಚು ಹೂಡಿಕೆ ಮಾಡಲಾಗಿದ್ದು, ಆರ್ಥಿಕ ಅಭಿವೃದ್ದಿಯಲ್ಲಿ 8% ಕ್ಕೆ ತಲುಪುವ ನಿರೀಕ್ಷೆ ಇದೆ. ಬೆಂಗಳೂರು ನಾಗಲೋಟದಲ್ಲಿ ಬೆಳೆಯುತ್ತಿರುವ ನಗರ ಎಂಬ ಪ್ರಖ್ಯಾತಿಗೆ ಒಳಗಾಗಿದೆ.

ಆಯ್ಕೆಯಾದ ಟಾಪ್ 20 ನಗರಗಳು :

1. ಲಂಡನ್ 2. ಸ್ಯಾನ್ ಹೋಸೆ 3. ಬೀಜಿಂಗ್ 4. ಶೆನ್ ಝೆನ್ 5. ಶಾಂಘೈ 6. ಹೊ ಚಿ ಮಿನ್ ಸಿಟಿ 7. ಬೋಸ್ಟನ್ 8. ವುಹಾನ್ 9. ಸ್ಯಾನ್ ಫ್ರಾನ್ಸಿಸ್ಕೋ 10. ಚಾಂಗ್ ಗಿಂಗ್ 11. ಸಿಡ್ನಿ 12. ಬೆಂಗಳೂರು 13. ದುಬೈ 14. ದುಬ್ಲಿನ್ 15. ನೈರೋಬಿ 16. ಮೆಲ್ಬೋರ್ನ್ 17. ಸಿಂಗಪುರ್ 18. ನ್ಯೂಯಾರ್ಕ್ 19. ಟಿಯಾಂಜಿನ್ 20. ನಂಜಿಂಗ್

English summary
Bangalore has taken 12 ranked in the top 20 high-tech cities. 1st 3 place is going on London, San Jose and Bijing cities. Bangalore performs strongly on these measures like high investment, largest number of patent application, real estate business, innovations etc. Totally Bangalore reach 8% economic growth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X