ಕೇಜ್ರಿವಾಲ್ ಪ್ರಮಾಣ ವಚನದಲ್ಲಿ ಮಿಂಚಿದ 'ಮಫ್ಲರ್ ಮ್ಯಾನ್'
Recommended Video
ನವದೆಹಲಿ, ಫೆಬ್ರವರಿ 16 : ದೆಹಲಿ ಮುಖ್ಯಮಂತ್ರಿಯಾಗಿ ಅರವಿಂದ್ ಕೇಜ್ರಿವಾಲ್ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದಿದ್ದು, 'ಮಫ್ಲರ್ ಮ್ಯಾನ್' ಅವ್ಯಾನ್ ತೋಮರ್.
ಆಮ್ ಆದ್ಮಿ ಪಕ್ಷ ಪ್ರಮಾಣ ವಚನ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಅವ್ಯಾನ್ ತೋಮರ್‌ಗೆ ಆಹ್ವಾನ ನೀಡಿತ್ತು. ತಂದೆ-ತಾಯಿ ಜೊತೆ ಬಂದಿದ್ದ ಅಮ್ಯಾನ್ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಜೊತೆಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಜನರು ಮುಗಿಬಿದ್ದರು.
ಫೆಬ್ರವರಿ 11ರಂದು ದೆಹಲಿ ಚುನಾವಣಾ ಫಲಿತಾಂಶ ಪ್ರಕಟವಾಯಿತು. ಅಂದು ಆಮ್ ಆದ್ಮಿ ಪಕ್ಷದ ಮುಖ್ಯ ಕಚೇರಿ ಬಳಿ ಅರವಿಂದ್ ಕೇಜ್ರಿವಾಲ್‌ನಂತೆ ವೇಷ ಧರಿಸಿಕೊಂಡು ನಿಂತಿದ್ದ ಒಂದೂವರೆ ವರ್ಷದ ಅವ್ಯಾನ್ ತೋಮರ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಆಮ್ ಆದ್ಮಿ ಪಕ್ಷ ಪ್ರಮಾಣ ವಚನ ಸಮಾರಂಭಕ್ಕೆ ಬರಬೇಕು ಎಂದು ಅವ್ಯಾನ್ ತೋಮರ್ ಕುಟುಂಬಕ್ಕೆ ಆಹ್ವಾನ ನೀಡಿತ್ತು. ಇಂದು ಪುನಃ ಕೇಜ್ರಿವಾಲ್‌ರಂತೆ ವೇಷ ಧರಿಸಿ ರಾಮ್ ಲೀಲಾ ಮೈದಾನಲ್ಲೆ ಅವ್ಯಾನ್ ತೋಮರ್ ಆಗಮಿಸಿದ್ದ.

ಎಎಪಿ ಇಟ್ಟ ಹೆಸರು 'ಮಫ್ಲರ್ ಮ್ಯಾನ್'
ಆಮ್ ಆದ್ಮಿ ಪಕ್ಷದ ಕಚೇರಿ ಮುಂದೆ ಫೆಬ್ರವರಿ 11ರಂದು ಕಾಣಿಸಿಕೊಂಡಿದ್ದ ಅವ್ಯಾನ್‌ಗೆ ಎಎಪಿ ಪ್ರೀತಿಯಿಂದ 'ಮಫ್ಲರ್ ಮ್ಯಾನ್' ಎಂದು ನಾಮಕರಣ ಮಾಡಿತ್ತು. ಎಎಪಿ ಮುಖ್ಯ ಕಚೇರಿ ಮುಂದೆ ಅವ್ಯಾನ್ ಇರುವ ಫೋಟೋಗಳು ವೈರಲ್ ಆಗಿತ್ತು.

ಎಎಪಿ ಟ್ವೀಟ್ ಮಾಡಿತ್ತು
ಅರವಿಂದ ಕೇಜ್ರಿವಾಲ್ ಪ್ರಮಾಣ ವಚನ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಅವ್ಯಾನ್ ತೋಮರ್‌ಗೆ ಆಹ್ವಾನ ನೀಡಲಾಗಿದೆ ಎಂದು ಆಮ್ ಆದ್ಮಿ ಪಕ್ಷ ಟ್ವೀಟ್ ಮಾಡಿತ್ತು. ಇಂದು ಅವ್ಯಾನ್ ಪ್ರಮಾಣ ವಚನ ಸಮಾರಂಭಕ್ಕೆ ಬಂದಿದ್ದರು.

ನೆಟ್ಟಿಗರು ಇಟ್ಟ ಹೆಸರೇನು?
ಫೆಬ್ರವರಿ 11ರಂದು ಅವ್ಯಾನ್ ತೋಮರ್ ಫೋಟೋ ಇಂಟರ್‌ನೆಟ್‌ನಲ್ಲಿ ವೈರಲ್ ಆದಾಗ ನೆಟ್ಟಿಗರು "cutest child of the day" ಎಂಬ ಹೆಸರು ಕೊಟ್ಟಿದ್ದರು. ಇಂದು ಸಹ ಅವ್ಯಾನ್ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.

ಹಲವಾರು ಮಕ್ಕಳು ಬಂದಿದ್ದರು
ಇಂದು ಪ್ರಮಾಣ ವಚನ ಸಮಾರಂಭಕ್ಕೆ ಅರವಿಂದ ಕೇಜ್ರಿವಾಲ್ ರೀತಿ ವೇಷ ಧರಿಸಿ ಹಲವಾರು ಮಕ್ಕಳು ಬಂದಿದ್ದರು. ಆದರೆ, ಅವ್ಯಾನ್ ತೋಮರ್ ಎಲ್ಲರ ಆಕರ್ಷಣೆಯಾದರು.












Click it and Unblock the Notifications