ಜ.17ರಿಂದ ಎಟಿಎಂನಿಂದ ದಿನಕ್ಕೆ 10 ಸಾವಿರ ಡ್ರಾ ಮಾಡಬಹುದು!

Posted By:
Subscribe to Oneindia Kannada

ನವದೆಹಲಿ, ಜನವರಿ 16: ಉಳಿತಾಯ ಖಾತೆ ಹೊಂದಿರುವವರಿಗೆ ಎಟಿಎಂಗಳಿಂದ ಹಣ ವಿಥ್ ಡ್ರಾ ಮಾಡುವ ಮಿತಿಯನ್ನು ಸದ್ಯಕ್ಕೆ ಇರುವ 4,500 ರುಪಾಯಿಯಿಂದ 10 ಸಾವಿರ ರುಪಾಯಿಗೆ ಹೆಚ್ಚಿಸಲಾಗಿದೆ. ಈ ನಿಯಮ ಮಂಗಳವಾರ (ಜನವರಿ 17) ದಿಂದಲೇ ಜಾರಿಗೆ ಬರಲಿದೆ. ಆ ಪ್ರಕಾರ ದಿನಕ್ಕೆ ಒಂದು ಕಾರ್ಡ್ ನಿಂದ ಇಷ್ಟು ಹಣವನ್ನು ತೆಗೆದುಕೊಳ್ಳಬಹುದಾಗಿದೆ.

ಆದರೆ, ವಾರಕ್ಕೆ ಇರುವ ಇಪ್ಪತ್ನಾಲ್ಕು ಸಾವಿರ ವಿಥ್ ಡ್ರಾ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಕೆಲವು ವಾರಗಳಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಎಟಿಎಂ ವಿಥ್ ಡ್ರಾ ಮಿತಿಯನ್ನು 4,500ಕ್ಕೆ ನಿಗದಿ ಮಾಡಿತ್ತು. ಇದೇ ವೇಳೆ ಚಾಲ್ತಿ ಖಾತೆ ಇರುವವರಿಗೆ (ಕರೆಂಟ್ ಅಕೌಂಟ್) ವಾರದ ವಿಥ್ ಡ್ರಾ ಮಿತಿಯನ್ನು 50 ಸಾವಿರ ರುಪಾಯಿಯಿಂದ 1 ಲಕ್ಷ ರುಪಾಯಿಗೆ ಹೆಚ್ಚಿಸಲಾಗಿದೆ.[ಎಟಿಎಂ ವಿಥ್ ಡ್ರಾಗೆ ಬೀಳಲಿದೆ ಮಿತಿ, 3ಕ್ಕಿಂತ ಹೆಚ್ಚು ಡ್ರಾಗೆ ಶುಲ್ಕ ಪಾವತಿ]

RBI

ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, "ಎಟಿಎಂಗಳ ಹಣ ವಿಥ್ ಡ್ರಾ ಮಿತಿ ಪ್ರತಿ ಕಾರ್ಡ್ ಗೆ ದಿನಕ್ಕೆ 4,500 ರುಪಾಯಿಯಿಂದ 10 ಸಾವಿರಕ್ಕೆ ಏರಿಸಲಾಗಿದೆ (ಈಗಿರುವ ವಾರದ ಮಿತಿ 24 ಸಾವಿರ ರುಪಾಯಿ ಮುಂದುವರಿಯಲಿದೆ)" ಎಂದು ತಿಳಿಸಲಾಗಿದೆ. ಸದ್ಯಕ್ಕೆ ಉಳಿತಾಯ ಖಾತೆದಾರರು ದಿನಕ್ಕೆ ಎಟಿಎಂನಿಂದ 4,500 ರುಪಾಯಿ, ವಾರಕ್ಕೆ 24 ಸಾವಿರ ರುಪಾಯಿ ಬ್ಯಾಂಕ್ ಕೌಂಟರ್ ನಿಂದ ಡ್ರಾ ಮಾಡಬಹುದಾಗಿದೆ.

ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಲಾವಣೆಯಲ್ಲಿದ್ದ 500, 1000 ರುಪಾಯಿ ನೋಟುಗಳನ್ನು ಹಿಂಪಡೆದಿದ್ದರು. ಹಳೆ ನೋಟುಗಳನ್ನು ಬದಲಿಸಿಕೊಳ್ಳಲು ಡಿಸೆಂಬರ್ 30ರವರೆಗೆ ಅವಕಾಶ ಮಾಡಿಕೊಡಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Starting January 17th, you can pull out 10,000 per day from an ATM, though a weekly limit of Rs. 24,000 for savings accounts remains unchanged. The RBI has increased the daily limit for ATM withdrawals from Rs. 4,500 which has been in place for a few weeks now.
Please Wait while comments are loading...