ಅರವಿಂದ್ vs ಮೋದಿ ಟ್ರೆಂಡಿಂಗ್, ಬಿಸಿ ಬಿಸಿ ಚರ್ಚೆ

ನವದೆಹಲಿ, ಡಿ. 15: 'ನನ್ನ ಕಚೇರಿ ಮೇಲೆ ದಾಳಿ ನಡೆಸುವ ಮೂಲಕ ಪ್ರಧಾನಿ ಮೋದಿ ಅವರು ಎಂಥ ಹೇಡಿ ಎಂಬುದನ್ನು ತೋರಿಸಿದ್ದಾರೆ. ಮೋದಿ ಒಬ್ಬ ಸೈಕೋಪಾತ್ ಎಂದು ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಟ್ವೀಟ್ ಬಾಣಗಳು ಬಿಡುತ್ತಿದ್ದಂತೆ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಅರವಿಂದ್ vs ಮೋದಿ ಟ್ವೀಟ್ಸ್ ಟ್ರೆಂಡಿಂಗ್ ಶುರುವಾಗಿದೆ.

ದೆಹಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಸಿಬಿಐ ತಂಡ ಮಂಗಳವಾರ ದಾಳಿ ನಡೆಸಿತ್ತು.[ಮೋದಿ ಒಬ್ಬ ಹೇಡಿ, ಸೈಕೋಪಾತ್ : ಅರವಿಂದ್ ಟ್ವೀಟ್]

ಗುತ್ತಿಗೆ ಆಧಾರಿತ ನೌಕರರ ನೇಮಕಾತಿ ಅವ್ಯವಹಾರದ ಹಿನ್ನಲೆಯಲ್ಲಿ ದಾಳಿ ನಡೆಸಿದ ಸಿಬಿಐ ತಂಡ ಸುಮಾರು 2 ಗಂಟೆಗಳ ಕಾಲ ಪರಿಶೀಲನೆ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡು, ಕಚೇರಿಗೆ ಬೀಗ ಹಾಕಿದ್ದರು.

ಅದರೆ, ಸಿಬಿಐ ಸ್ಪಷ್ಟನೆ ಹೊರತಾಗಿಯೂ ಅರವಿಂದ್ ಕೇಜ್ರಿವಾಲ್ ಅವರು ನೇರವಾಗಿ ಪ್ರಧಾನಿ ಮೋದಿ ಅವರನ್ನು ಟಾರ್ಗೆಟ್ ಮಾಡಿಕೊಂಡು ಟ್ವೀಟ್ ವಾರ್ ಗೆ ಕರೆ ನೀಡಿದ್ದಾರೆ.

ಸಿಬಿಐ ದಾಳಿ ಲಾಭ ಯಾರಿಗೆ ಆಗಲಿದೆ

ಸಿಬಿಐ ದಾಳಿ ಲಾಭ ಯಾರಿಗೆ ಆಗಲಿದೆ

ಸಿಬಿಐ ದಾಳಿಯನ್ನು ರಾಜಕೀಯ ಲಾಭವಾಗಿ ಯಾರು ಬದಲಾಯಿಸಿಕೊಳ್ಳುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡಿದರೆ ಕೇಜ್ರಿವಾಲ್ ಗೆ ಏಕೆ ತೊಂದರೆ ಎಂದು ಜನತೆ ಪ್ರಶ್ನಿಸಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಎಎಪಿ ಮುಂದಾಗಿದೆ.

ಹೌದು ದೇಶದಲ್ಲಿ ಏನೇ ಆದರು ಮೋದಿ ಕಾರಣ

ಹೌದು, ದೇಶದಲ್ಲಿ ಏನೇ ಆದರು ಮೋದಿ ಕಾರಣ ಎನ್ನಲು ಎಎಪಿ ಯಾವಾಗಲೂ ಸಿದ್ಧ

ರಾಜೇಂದ್ರ ನಿವಾಸದಲ್ಲಿ ಸಿಕ್ಕ ಮೊತ್ತ ಯಾರದ್ದು?

ರಾಜೇಂದ್ರ ನಿವಾಸದಲ್ಲಿ ಸಿಕ್ಕ ಮೊತ್ತ ಯಾರದ್ದು? ಇದರಲ್ಲಿ ದೆಹಲಿ ಸರ್ಕಾರದ ಪಾಲು ಇದೆಯೆ? ಭ್ರಷ್ಟರ ಮೇಲೆ ಸಿಬಿಐ ದಾಳಿ ತಪ್ಪೇ? ಸಿಬಿಐ ಏನು ಸರ್ಕಾರಕ್ಕೆ ವರದಿ ಸಲ್ಲಿಸಬೇಕಾಗಿಲ್ಲ ಎಂಬ ಕನಿಷ್ಠ ಅರಿವು ಕೇಜ್ರಿವಾಲ್ ಗಿಲ್ಲವೆ?

ಜಗತ್ತನ್ನು ಮೆಚ್ಚಿಸಿದರೂ ಕೇಜ್ರಿ ಮೆಚ್ಚಿಸಲು ಆಗಲ್ಲ

ಜಗತ್ತನ್ನು ಮೆಚ್ಚಿಸಿದರೂ ಕೇಜ್ರಿ ಮೆಚ್ಚಿಸಲು ಆಗಲ್ಲ, ಒಬಾಮಾ, ಶಿಂಜೊ ಅಬೆ ಅವರು ಮೋದಿಯನ್ನು ಸುಮ್ಮನೆ ಹೊಗಳಿಲ್ಲ.

ಇದು ತುರ್ತು ಪರಿಸ್ಥಿತಿಯಂತೆ

ಇದು ತುರ್ತು ಪರಿಸ್ಥಿತಿ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಅವರ ಟ್ವೀಟ್ ಗೆ ಅರವಿಂದ್ ಉತ್ತರಿಸಿದ್ದಾರಂತೆ

ಇದೀಗ ಬಂದ ಮಾಹಿತಿಯಂತೆ ಸಿಬಿಐ ದಾಳಿ ಖಂಡಿಸಿ ದೇಶದೆಲ್ಲೆಡೆ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಬೇಕು ಎಂದು ಆಮ್ ಆದ್ಮಿ ಪಕ್ಷ ಫರ್ಮಾನು ಹೊರಡಿಸಿದೆ. ಸದ್ಯಕ್ಕಂತೂ ಟ್ವಿಟ್ಟರ್ ನಲ್ಲಿ ಬಿಜೆಪಿ vs ಎಎಪಿ, ಅರವಿಂದ್ vs ಮೋದಿ ಹಾಗೂ ತಟಸ್ಥ ರಾಜಕೀಯ ಮನಸ್ಥಿತಿಯ ಸಾರ್ವಜನಿಕರಿಂದ ಭರಪೂರ ಟ್ವೀಟ್ಸ್ ಕಾಣ ಸಿಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+