ಅರವಿಂದ್ ಕೇಜ್ರಿವಾಲ್‌ರಿಂದ ದೆಹಲಿ ವಿಧಾನಸಭೆಯಲ್ಲಿ ಬಹುಮತ ಸಾಬೀತು
ನವದೆಹಲಿ, ಆಗಸ್ಟ್ 29: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಆಮ್ ಆದ್ಮಿ ಪಕ್ಷವನ್ನು ಒಡೆಯಲು ಮತ್ತು ದೆಹಲಿಯಲ್ಲಿ ಅವರ ಸರ್ಕಾರವನ್ನು ಕಿತ್ತೊಗೆಯಲು ಬಿಜೆಪಿಯ ಪ್ರಯತ್ನಗಳ ಹೊರತಾಗಿಯೂ ಎಲ್ಲಾ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರು ತಮ್ಮೊಂದಿಗೆ ಇದ್ದಾರೆ ಎಂಬುದನ್ನು ಸಾಬೀತುಪಡಿಸಲು ಇಂದು ಸದನದಲ್ಲಿ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ.
ತಮ್ಮ ಆಮ್ ಆದ್ಮಿ ಪಕ್ಷದ ಶಾಸಕರು ಸರ್ಕಾರಕ್ಕೆ ಕಂಟಕವಾಗಲು ಬಯಸುವುದಿಲ್ಲ ಎಂಬುದನ್ನು ಸಾಬೀತುಪಡಿಸಲು ಬಹುಮತದ ಪರೀಕ್ಷೆಯನ್ನು ತೆಗೆದುಕೊಳ್ಳಬೇಕೆಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಅಲ್ಲದೆ ಆಪರೇಷನ್ ಕಮಲ ಅಥವಾ ದೆಹಲಿಯಲ್ಲಿ ತಮ್ಮ ನೇತೃತ್ವದ ಸರ್ಕಾರವನ್ನು ಉರುಳಿಸುವ ಯೋಜನೆಯ ಭಾಗವಾಗಿ ಪಕ್ಷವನ್ನು ಬದಲಾಯಿಸಲು ಬಿಜೆಪಿಯು ತನ್ನ ಶಾಸಕರಿಗೆ ತಲಾ ₹ 20 ಕೋಟಿಯನ್ನು ನೀಡಿದೆ ಎಂದು ಅವರು ಆರೋಪಿಸಿದ್ದಾರೆ.
ಕಳೆದ ವಾರ ಅರವಿಂದ್ ಕೇಜ್ರಿವಾಲ್ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ದೆಹಲಿಯಲ್ಲಿ ಎಎಪಿಯ 62 ಶಾಸಕರಲ್ಲಿ 53 ಮಂದಿ ಭಾಗವಹಿಸಿದ್ದರು. ಆದರೆ ಉಳಿದ ಶಾಸಕರನ್ನು ಕೈಬಿಡಲಾಗಿಲ್ಲ ಬದಲಾಗಿ ಅವರು ಸೇರಿಕೊಂಡಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿಕೆ ನೀಡಿದರು. ನಂತರ ಶಾಸಕರೊಂದಿಗೆ ಮಹಾತ್ಮ ಗಾಂಧಿಯವರ ಸ್ಮಾರಕ ರಾಜ್‌ಘಾಟ್‌ಗೆ ಹೋದರು.
ರಾಜ್‌ಘಾಟ್‌ಗೆ ಭೇಟಿ ನೀಡಿದ ನಂತರ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು, ಬಿಜೆಪಿಯವರು ತಮ್ಮ ಪಕ್ಷದ 40 ಶಾಸಕರಿಗೆ ಲಂಚ ನೀಡಲು ಪ್ರಯತ್ನಿಸುತ್ತಿದ್ದಾರೆಂದು ನಾನು ಕೇಳಿದ್ದೇನೆ. ಆದರೆ ಬಿಜೆಪಿಯವರ ಈ ಆಫರ್‌ಗೆ ಒಬ್ಬ ಶಾಸಕನೂ ಮಣಿಯಲಿಲ್ಲ ಎಂದು ನನಗೆ ಸಂತೋಷವಾಗಿದೆ ಎಂದು ರಾಜ್‌ಘಾಟ್‌ಗೆ ಭೇಟಿ ನೀಡಿದ ನಂತರ ಕೇಜ್ರಿವಾಲ್ ಹೇಳಿದ್ದಾರೆ.
ಮುಂದುವರಿದು ಬಿಜೆಪಿಯ ಆಪರೇಷನ್ ಕಮಲದ ವೈಫಲ್ಯಕ್ಕಾಗಿ ಪ್ರಾರ್ಥಿಸಲು ರಾಜ್‌ಘಾಟ್‌ಗೆ ಹೋಗಿದ್ದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದ ಮಾದರಿಯಲ್ಲಿ ಬಿಜೆಪಿ ತನ್ನ ಸರ್ಕಾರವನ್ನು ಉರುಳಿಸಲು ಆಪರೇಷನ್ ಕಮಲದ ಸಂಚು ರೂಪಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿ, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿಸೋಡಿಯಾ ಅವರ ಮೇಲೆ ಸಿಬಿಐ ದಾಳಿ
ಶಾಸಕರು ಎಎಪಿ ತೊರೆದರೆ ಅವರ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಮುಚ್ಚಿಹಾಕಲು ಬಿಜೆಪಿ ಮುಂದಾಗಿದೆ ಎಂದು ಅವರ ಉಪನಾಯಕ ಮನೀಶ್ ಸಿಸೋಡಿಯಾ ಹೇಳಿಕೊಂಡಿದ್ದರು. ಈ ವರ್ಷದ ಆರಂಭದಲ್ಲಿ ಪರಿಚಯಿಸಲಾದ ದೆಹಲಿಯ ಮದ್ಯ ನೀತಿಯಲ್ಲಿನ ಅಕ್ರಮಗಳು ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿಸೋಡಿಯಾ ಅವರ ಮೇಲೆ ಸಿಬಿಐ ಇತ್ತೀಚೆಗೆ ದಾಳಿ ನಡೆಸಿತು. ನಂತರ ಅದನ್ನು ಹಿಂದೆಗೆದುಕೊಂಡಿತು. ಮದ್ಯದ ನೀತಿ ಉಲ್ಲಂಘನೆಯ ಕುರಿತು ಸಿಬಿಐನ ಎಫ್‌ಐಆರ್‌ನಲ್ಲಿ ಹೆಸರಿಸಲಾದ 15 ಆರೋಪಿಗಳ ಪಟ್ಟಿಯಲ್ಲಿ ಮನೀಶ್ ಸಿಸೋಡಿಯಾ ಮೊದಲ ಸ್ಥಾನದಲ್ಲಿದ್ದಾರೆ. ಅವರ ವಿರುದ್ಧ ಜಾರಿ ನಿರ್ದೇಶನಾಲಯವೂ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ.

ಆರ್ಥಿಕ ಲಾಭಕ್ಕಾಗಿ ಖಾಸಗಿ ಮದ್ಯ ನೀತಿ
ಎಫ್‌ಐಆರ್ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರ ಉಲ್ಲೇಖವನ್ನು ಆಧರಿಸಿದೆ. ಅವರು ಎಎಪಿಯ ಅಬಕಾರಿ ನೀತಿಯನ್ನು ಸರ್ಕಾರದ ಉನ್ನತ ಮಟ್ಟದ ವ್ಯಕ್ತಿಗಳಿಗೆ ಆರ್ಥಿಕ ಲಾಭಕ್ಕಾಗಿ ಖಾಸಗಿ ಮದ್ಯದ ಉದ್ಯಮಿಗಳಿಗೆ ಲಾಭದಾಯಕವಾಗುವ ಏಕೈಕ ಗುರಿಯೊಂದಿಗೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ. ವಿನಯ್ ಕುಮಾರ್ ಸಕ್ಸೇನಾ ಅವರ ಹೇಳಿಕೆಯು ದೆಹಲಿ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ವಿವಿಧ ವ್ಯತ್ಯಾಸಗಳನ್ನು ಆರೋಪಿಸಿದೆ. ಎಎಪಿ ಪ್ರತಿಯಾಗಿ ತನ್ನ ಅಭಿವೃದ್ಧಿ ಯೋಜನೆಗಳನ್ನು ಹಳಿತಪ್ಪಿಸಲು ಕೇಂದ್ರದ ನಿರ್ದೇಶನಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದೆ.

ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ ಆರೋಪ
ಈ ಹಿನ್ನೆಲೆಯಲ್ಲಿ 2024ರ ಸಾರ್ವತ್ರಿಕ ಚುನಾವಣೆಯು ಕೇಜ್ರಿವಾಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಸ್ಪರ್ಧೆಯಾಗಿದೆ ಎಂದು ಎಎಪಿ ಹೇಳಿದೆ. ಎಎಪಿ ನಾಯಕನ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಶಿಕ್ಷಣ ಕ್ಷೇತ್ರ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಶ್ಲಾಘನೀಯ ಕೆಲಸದಿಂದಾಗಿ ಬಿಜೆಪಿಯು ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದೆ.

ಸರ್ಕಾರದ ಭ್ರಷ್ಟಾಚಾರದ ಗಮನ ಬೇರೆಡೆಗೆ ಸೆಳೆಯಲು ಹೇಳಿಕೆ
ಆದರೆ ಎಎಪಿಯ ಆರೋಪಗಳನ್ನು ಬಿಜೆಪಿ ನಿರಾಕರಿಸಿದ್ದು, ತನ್ನ ಸರ್ಕಾರದ ಭ್ರಷ್ಟಾಚಾರದಿಂದ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಪ್ರಮುಖ ಸವಾಲು ನೀಡುವ ಎಎಪಿಯ ಹೇಳಿಕೆಯನ್ನು ಪಕ್ಷವು ತಳ್ಳಿಹಾಕಿದೆ. ಎಎಪಿ ಈ ಹಿಂದೆಯೂ ದೊಡ್ಡ ಹೇಳಿಕೆಗಳನ್ನು ನೀಡಿತು. ಆದರೆ ಪ್ರಧಾನಿ ಮೋದಿಯ ಮುಂದೆ ನಿಲ್ಲಲು ಸಾಧ್ಯವಾಗಲಿಲ್ಲ ಎಂದು ವ್ಯಂಗ್ಯವಾಡಿತ್ತು. 70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ ಎಎಪಿ 62 ಶಾಸಕರನ್ನು ಹೊಂದಿದೆ. ಬಿಜೆಪಿಗೆ ಎಂಟು ಸ್ಥಾನಗಳಿದ್ದು ಬಹುಮತಕ್ಕೆ ಇನ್ನೂ 28ರ ಅಗತ್ಯವಿದೆ.












Click it and Unblock the Notifications