ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಬಂಗಲೆ, ಕಾರು ಬಳಸುತ್ತೇನೆ ಅಂದ್ರು ಕೇಜ್ರಿವಾಲ್!

|
Google Oneindia Kannada News

ನವದೆಹಲಿ. ಜ.3 : ದೆಹಲಿ ಮುಖ್ಯಮಂತ್ರಿ ಹುದ್ದೆಗೆ ಏರಿದಾಗ ಸರ್ಕಾರಿ ಬಂಗಲೆ, ಕಾರು, ಭದ್ರತೆ ಬೇಡ ಎಂದು ಹೇಳಿದ್ದ ಆಮ್ ಆದ್ಮಿ ಸಿಎಂ ಅರವಿಂದ್ ಕೇಜ್ರಿವಾಲ್ ತಮ್ಮ ನಿರ್ಧಾರದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ. ಐದು ಬೆಡ್ ರೂಂಗಳ ಸರ್ಕಾರಿ ಬಂಗಲೆ ಮತ್ತು ಸರ್ಕಾರಿ ಕಾರು ಬಳಸಲು ಶುಕ್ರವಾರ ಒಪ್ಪಿಗೆ ನೀಡಿದ್ದಾರೆ ಮತ್ತು ತಮ್ಮ ನಿರ್ಧಾರಕ್ಕೆ ಸಮರ್ಥನೆ ನೀಡಿದ್ದಾರೆ.

ನವ ದೆಹಲಿಯ ಭಗವಾನ್ ದಾಸ್ ರಸ್ತೆಯಲ್ಲಿರುವ ಐದು ಬೆಡ್ ರೂಂ ಹೊಂದಿರುವ ಮೆನಗೆ ತಮ್ಮ ವಾಸ್ತವ್ಯ ಬದಲಿಸುವುದಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ದೆಹಲಿ ಮುಖ್ಯಮಂತ್ರಿಗಳಿಗಾಗಿ ಮೀಸಲಾಗಿರುವ ಈ ಬಂಗಲೆಯನ್ನು ಇನ್ನು ಮುಂದೆ ಬಳಸುತ್ತೇನೆ ಎಂದು ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಸರ್ಕಾರದಿಂದ ನೀಡಲಾಗುವ ಕಾರು ಬಳಸುತ್ತೇನೆ, ಆದರೆ, ಕೆಂಪು ದೀಪದ ಕಾರು ಬಳಸುವುದಿಲ್ಲ ಎಂದು ಅವರು ಶುಕ್ರವಾರ ತಿಳಿಸಿದ್ದಾರೆ.

Arvind Kejriwal

ಮುಖ್ಯ ಮಂತ್ರಿಗಳಿಗೆ ಸರ್ಕಾರ ನೀಡುವ ಸೌಲಭ್ಯಗಳನ್ನು ಬಳಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥನೆ ನೀಡಿರುವ ಕೇಜ್ರಿವಾಲ್, ತಮ್ಮ ಪಕ್ಷದ ಸಚಿವರೂ ಸಹ ಸರ್ಕಾರಿ ಕಾರನ್ನು ಬಳಸಲಿದ್ದಾರೆ. ಆದರೆ, ಯಾರು ಕೆಂಪು ದೀಪದ ಕಾರನ್ನು ಬಳಸುವುದಿಲ್ಲ ಎಂದು ಹೇಳಿದ್ದಾರೆ. ಕಾರು, ಬಂಗಲೆ ಬೇಡವೆಂದಿದ್ದ ಕೇಜ್ರಿವಾಲ್ ಈ ನಿರ್ಧಾರ ಹಲವಾರು ಅಚ್ಚರಿಗಳಿಗೆ ಕಾರಣವಾಗಿದೆ. [ಸರಕಾರಿ ಬಂಗ್ಲೇನೂ ಬೇಡ; ಕಾರು ಬೇಡ]

ಭಗವಾನ್ ದಾಸ್ ರಸ್ತೆಯಲ್ಲಿ ಒಂದೇ ಸ್ಥಳದಲ್ಲಿ ಎರಡು ಪ್ರತ್ಯೇಕ ಮನೆಗಳಿದ್ದು ಒಂದರಲ್ಲಿ ಕೇಜ್ರಿವಾಲ್ ವಾಸ್ತವ್ಯ ಹೂಡಲಿದ್ದು, ಮತ್ತೊಂದನ್ನು ಕಚೇರಿಗಾಗಿ ಬಳಸಲಿದ್ದಾರೆ. ನಗರಾಭಿವೃದ್ಧಿ ಸಚಿವಾಲಯದ ಪ್ರಕಾರ ಕೇಜ್ರಿವಾಲ್ ವಾಸ್ತವ್ಯ ಹೂಡಲು ಸಿದ್ಧವಾಗಿರುವ ಮನೆ, ಸುಪ್ರೀಂಕೋರ್ಟ್ ಜಡ್ಜ್ ಹಾಗೂ ಕೇಂದ್ರ ಸಚಿವಾಲಯದ ಮಂತ್ರಿಗಳಿಗೆ ನೀಡಲಾಗುವ ಬಂಗಲೆಗಳ ಸಮನಾದ ಸೌಲಭ್ಯವನ್ನು ಹೊಂದಿದೆ.

ಮುಖ್ಯಮಂತ್ರಿಯಾದರೂ ಸರ್ಕಾರಿ ಬಂಗಲೆ ಬೇಡ ಎಂದು ಹೇಳಿದ್ದ ಸಿಎಂ ಕೇಜ್ರಿವಾಲ್ ಈ ನಿರ್ಧಾರಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ. ಮತ್ತೊಂದು ಕಡೆ ಅಗತ್ಯವಿದ್ದರೆ ಪೊಲೀಸ್ ಭದ್ರತೆ ಪಡೆದುಕೊಳ್ಳಿ ಎಂದು ದೆಹಲಿ ಪೊಲೀಸರು ಕೇಜ್ರಿವಾಲ್ ಅವರಿಗೆ ಮನವಿ ಮಾಡಿದ್ದಾರೆ.

English summary
Delhi Chief Minister Arvind Kejriwal has finally decided to move into a house in Delhi after refusing a bungalow. The two adjacent duplex flats on Bhagwan Das Road in central Delhi in which Kejriwal will be moving in will be used as his residence and the other one will be converted into a office for the CM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X