ಜೇಟ್ಲಿ ವಿರುದ್ಧದ ಕೇಸ್ ನಲ್ಲಿ ಕೇಜ್ರಿವಾಲ್ ಗೆ 5 ಸಾವಿರ ರು. ದಂಡ

ಕೇಂದ್ರ ಸಚಿವ ಅರುಣ್ ಜೇಟ್ಲಿ ವಿರುದ್ಧದ ಕೇಸ್ ನಲ್ಲಿ ಕೇಜ್ರಿವಾಲ್ ಗೆ ದಂಡ. ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿಗೆ 5 ಸಾವಿರ ದಂಡ ವಿಧಿಸಿದ ದೆಹಲಿ ಹೈಕೋರ್ಟ್.

ನವದೆಹಲಿ, ಸೆಪ್ಟೆಂಬರ್ 4: ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ತಮ್ಮ ವಿರುದ್ಧ ಹಾಕಿರುವ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ತಮ್ಮ ಅಹವಾಲನ್ನು ಸಲ್ಲಿಸಲು ನೀಡಲಾಗಿದ್ದ ಗಡುವನ್ನು ಮೀರಿದ ಕಾರಣಕ್ಕಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ದೆಹಲಿ ಹೈಕೋರ್ಟ್ 5 ಸಾವಿರ ರು. ದಂಡ ವಿಧಿಸಿದೆ.

ಅರುಣ್ ಜೇಟ್ಲಿ ವಿರುದ್ಧದ ಪ್ರಕರಣವೊಂದರ ವಿಚಾರಣೆ ವೇಳೆ, ಕೇಜ್ರಿವಾಲ್ ಅವರ ಹಿಂದಿನ ವಕೀಲರಾದ ಜೇಠ್ಮಲಾನಿ ಅವರು, ಜೇಟ್ಲಿ ವಿರುದ್ಧ ಆಕ್ಷೇಪಾರ್ಹ ಶಬ್ದ ಪ್ರಯೋಗಿಸಿದ್ದರು. ಈ ಹಿನ್ನೆಲೆಯಲ್ಲಿ ಜೇಟ್ಲಿ ಅವರು ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದು 10 ಕೋಟಿ ರು. ಮೊತ್ತವನ್ನು ಪರಿಹಾರವಾಗಿ ಕೊಡಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

Arvind Kejriwal Fined Rs. 5,000 By Court In Arun Jaitley Defamation Case

ಈ ಪ್ರಕರಣದ ವಿಚಾರಣೆ ಸದ್ಯಕ್ಕೆ ದೆಹಲಿ ಹೈಕೋರ್ಟ್ ನಲ್ಲಿ ಕೆಲವು ತಿಂಗಳುಗಳಿಂದ ನಡೆಯುತ್ತಲೇ ಇದೆ. ಆದರೆ, ಏತನ್ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಅಹವಾಲೊಂದನ್ನು ಲಿಖಿತ ರೂಪದಲ್ಲಿ ಸಲ್ಲಿಸುವಂತೆ ನ್ಯಾಯಾಲಯ ಕೋರಿತ್ತು. ಇದಕ್ಕೆ 2 ವಾರಗಳ ಗಡುವು ವಿಧಿಸಿತ್ತು. ಅದರಂತೆ, ಅವರು ಜುಲೈ 26ರೊಳಗೆ ತಮ್ಮ ಅಹವಾಲನ್ನು ಸಲ್ಲಿಸಬೇಕಿತ್ತು.

ಆದರೆ, ಈ ಗಡುವನ್ನು ದಾಟಿದ ನಂತರವಷ್ಟೇ ಕೇಜ್ರಿವಾಲ್ ತಮ್ಮ ಅಹವಾಲನ್ನು ಸಲ್ಲಿಸಿದ್ದರು. ಇದನ್ನು, ಸೋಮವಾರದ (ಸೆಪ್ಟಂಬರ್ 4) ವಿಚಾರಣೆ ವೇಳೆ ಜೇಟ್ಲಿ ಪರ ವಕೀಲರಾದ ಮಾಣಿಕ್ ಡೋಗ್ರಾ ಅವರು ನ್ಯಾಯಾಲಯದ ಗಮನಕ್ಕೆ ತಂದರು.

ಇದರಿಂದ ಅಸಮಾಧಾನಗೊಂಡ ನ್ಯಾಯಾಲಯದ ಜಂಟಿ ರಿಜಿಸ್ಟ್ರಾರ್ ಪಂಕಜ್ ಗುಪ್ತಾ ಅವರು, 5 ಸಾವಿರ ರು. ದಂಡ ವಿಧಿಸಿದರು. ಈ ಹಿಂದೆಯೂ, ಕೇಜ್ರಿವಾಲ್ ಅವರಿಗೆ ಇದೇ ಪ್ರಕರಣದಲ್ಲಿ 10 ಸಾವಿರ ರು. ದಂಡ ವಿಧಿಸಿದ್ದನ್ನು ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+