ಲಾಕ್ ಡೌನ್ ತೆರವು; ಜನರ ಸಲಹೆ ಕೇಳಿದ ಕೇಜ್ರಿವಾಲ್
ನವದೆಹಲಿ, ಮೇ 12 : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇ 17ರ ಬಳಿಕ ಲಾಕ್ ಡೌನ್‌ನಲ್ಲಿ ವಿನಾಯಿತಿ ನೀಡಲು ಜನರ ಸಲಹೆ ಕೇಳಿದ್ದಾರೆ. ದೆಹಲಿಯಲ್ಲಿ ಇದುವರೆಗೂ 7639 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 86 ಜನರು ಮೃತಪಟ್ಟಿದ್ದಾರೆ.
Recommended Video
ಸೋಮವಾರ ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಸಭೆಯ ಬಳಿಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜನರ ಸಲಹೆ ಕೇಳಿದ್ದಾರೆ. ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಲು ಅನುಮತಿ ನೀಡಬೇಕು ಎಂದು ಸಭೆಯಲ್ಲಿ ಕೇಜ್ರಿವಾಲ್ ಮನವಿ ಮಾಡಿದ್ದರು.
ಮೇ 17ರ ಬಳಿಕ ಯಾವ ಸೇವೆಗಳು ಅಗತ್ಯವಾಗಿ ಬೇಕು ಎಂದು ಜನರು ತಮ್ಮ ಸಲಹೆಗಳನ್ನು ಮುಖ್ಯಮಂತ್ರಿಗಳಿಗೆ ಮೇ 13ರ ಸಂಜೆಯೊಳಗೆ ಸಲ್ಲಿಸಬೇಕು. ಎಲ್ಲಾ ಸಲಹೆಗಳನ್ನು ಪರಿಶೀಲಿಸಿ ಸರ್ಕಾರ ತನ್ನ ತೀರ್ಮಾನವನ್ನು ಕೈಗೊಳ್ಳಲಿದೆ.

ಜನರು 1031 ದೂರವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಸಲಹೆ ನೀಡಬಹುದು. 8800007722 ನಂಬರ್‌ಗೆ ವಾಟ್ಸಪ್ ಸಂದೇಶ ಕಳಿಸಬಹುದು. [email protected] ವಿಳಾಸಕ್ಕೆ ಇ-ಮೇಲ್ ಕಳಿಸಬಹುದಾಗಿದೆ.
ದೆಹಲಿಯ ಎಲ್ಲಾ 11 ಜಿಲ್ಲೆಗಳನ್ನು ಕೆಂಪು ವಲಯ ಎಂದು ಗುರುತಿಸಿರುವುದು ಸರಿಯಲ್ಲ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಆರ್ಥಿಕ ಚಟುವಟಿಕೆ ಆರಂಭಿಸಲು ಅನುಮತಿ ನೀಡಬೇಕು ಎಂದು ದೆಹಲಿ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ದೆಹಲಿಯಲ್ಲಿ ಕೊರೊನಾ ಕೆಂಪು ವಲಯಗಳನ್ನು ವಾರ್ಡ್ ಆಧಾರದ ಮೇಲೆ ಗುರುತಿಸಿ, ಜಿಲ್ಲೆಯ ಆಧಾರದ ಮೇಲೆ ಅಲ್ಲ ಎಂಬುದು ಸರ್ಕಾರದ ವಾದವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಇಡೀ ದೆಹಲಿಯನ್ನು ಕೆಂಪು ವಲಯ ಎಂದು ಘೋಷಣೆ ಮಾಡಿದೆ.












Click it and Unblock the Notifications