ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರುಣ್ ಜೇಟ್ಲಿ ಕೂಡಲೇ ರಾಜೀನಾಮೆ ನೀಡಲಿ: ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 13: ಉದ್ದೇಶಪೂರ್ವಕ ಸುಸ್ತೀದಾರ ವಿಜಯ್ ಮಲ್ಯ ದೇಶಬಿಟ್ಟು ಹೋಗುವುದು ವಿತ್ತ ಸಚಿವ ಅರುಣ್ ಜೇಟ್ಲಿಗೆ ಗೊತ್ತಿದ್ದರೂ ಸಹಿತ ಯಾವುದೇ ಕ್ರಮಕೈಗೊಂಡಿರಲಿಲ್ಲ ಹಾಗಾಗಿ ಅರುಣ್ ಜೇಟ್ಲಿ ಕೂಡಲೇ ರಾಜಿನಾಮೆ ಕೊಡಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ದೇಶಬಿಟ್ಟು ಹೊರಡುವ ಮುನ್ನಾ ನಾನು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಆಗುವ ಯತ್ನ ಮಾಡಿದ್ದೆ. ನಾನು ಲಂಡನ್‌ಗೆ ತೆರಳುತ್ತಿರುವ ಬಗ್ಗೆಯೂ ಅವರಿಗೆ ತಿಳಿಸಿದ್ದೆ ಎಂದು ಮಲ್ಯ ನಿನ್ನೆ ಹೇಳಿದ್ದರು ಇದು ರಾಷ್ಟ್ರ ರಾಜಕಾರಣದಲ್ಲಿ ಕೋಲಾಹಲ ಸೃಷ್ಠಿಸಿತ್ತು.

Arun Jaitley should step down as FInance Minister : Rahul Gandhi

2014ರ ನಂತರ ಮಲ್ಯ ಜತೆ ಮೀಟಿಂಗ್ ಮಾಡಿಲ್ಲ : ಜೇಟ್ಲಿ2014ರ ನಂತರ ಮಲ್ಯ ಜತೆ ಮೀಟಿಂಗ್ ಮಾಡಿಲ್ಲ : ಜೇಟ್ಲಿ

ವಿಜಯ್ ಮಲ್ಯ ಪ್ರಕಣದ ಬಗ್ಗೆ ತನಿಖೆ ನಡೆಸಲು ಮೋದಿ ಅವರು ಕೂಡಲೇ ವಿಶೇಷ ತಂಡ ರಚಿಸಬೇಕು ಎಂದು ಒತ್ತಾಯಿಸಿರುವ ರಾಹುಲ್ ಗಾಂಧಿ, ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಕೂಡಲೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅರುಣ್ ಜೇಟ್ಲಿ ಭೇಟಿ ಹೇಳಿಕೆ: ವರಸೆ ಬದಲಿಸಿದ ವಿಜಯ್‌ ಮಲ್ಯ ಅರುಣ್ ಜೇಟ್ಲಿ ಭೇಟಿ ಹೇಳಿಕೆ: ವರಸೆ ಬದಲಿಸಿದ ವಿಜಯ್‌ ಮಲ್ಯ

ನಿನ್ನೆ ರಾತ್ರಿ ಟ್ವೀಟ್ ಮಾಡಿರುವ ಎಐಸಿಸಿ ಅಧ್ಯಕ್ಷ ತನಿಖೆ ಮುಗಿಯುವವರೆಗೆ ಜೇಟ್ಲಿ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕು ಎಂದಿದ್ದಾರೆ.

English summary
Rahul Gandhi tweeted that Arun Jaitley should step down as FInance Minister. the PM should immediately order an independent probe into the Vijay Mallyas alligation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X