ಅರವಿಂದ್ ಕೇಜ್ರಿವಾಲ್ ಪುತ್ರಿಗೆ ಕಿಡ್ನ್ಯಾಪ್ ಬೆದರಿಕೆ
ನವದೆಹಲಿ, ಜನವರಿ 13: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪುತ್ರಿಯನ್ನು ಅಪಹರಿಸುವ ಬೆದರಿಕೆಯುಳ್ಳ ಇಮೇಲ್ ವೊಂದು ದೆಹಲಿಯಲ್ಲಿ ಆತಂತ ಸೃಷ್ಟಿಸಿತ್ತು.
ಜನವರಿ 09 ರಂದು ಅಪರಿಚಿತ ಇಮೇಲ್ ಐಡಿಯಿದ ನಿಮ್ಮ ಪುತ್ರಿಯನ್ನು ಕಿಡ್ನ್ಯಾಪ್ ಮಾಡುವುದಾಗಿ ಬೆದರಿಕೆಯುಳ್ಳ ಇ ಮೇಲ್ ಅನ್ನು ಅರವಿಂದ್ ಕೇಜ್ರಿವಾಲ್ ಅವರಿಗೆ ಕಳಿಸಲಾಗಿತ್ತು.

ಇದರಿಂದ ಆತಂಕಗೊಂಡ ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸದ್ಯಕ್ಕೆ ಈ ಪ್ರಕರಣವನ್ನು ಸೈಬರ್ ಪೊಲೀಸರಿಗೆ ಒಪ್ಪಿಸಲಾಗಿದೆ. ಬೆದರಿಕೆಯ ಇಮೇಲ್ ಬಂದ ನಂತರ ತಮ್ಮ ಪುತ್ರಿ ಹರ್ಷಿತಾ ಮತ್ತು ಪುತ್ರ ಪುಳಕಿತ್ ನನ್ನು ಕೇಜ್ರಿವಾಲ್ ಮನೆಯಿಂದ ಎಲ್ಲೂ ಆಚೆ ಹೋಗಲು ಬಿಟ್ಟಿಲ್ಲ.
ದೆಹಲಿಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಹರ್ಷಿತಾ ಎಂಜಿನಿಯರಿಂದ್ ಪದವಿ ಓದುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications