ದೇಶದ ಅತಿ ಹೆಚ್ಚು ಕಲುಷಿತ ನಗರಗಳ ಪಟ್ಟಿ: 3 ನೇ ಸ್ಥಾನದಲ್ಲಿ ದೆಹಲಿ

ನವದೆಹಲಿ, ಮಾರ್ಚ್ 07: ರಾಷ್ಟ್ರ ರಾಜಧಾನಿ ದೆಹಲಿಯು ದೇಶದಲ್ಲೇ ಅತಿ ಹೆಚ್ಚು ಕಲುಷಿತನಗರವೆಂಬ ಅಪಖ್ಯಾತಿಗೆ ಒಳಗಾಗಿದೆ.

23 ಕಲುಷಿತ ಪ್ರದೇಶಗಳನ್ನು ಹೊಂದಿರುವ ಒಡಿಶಾ ಮೊದಲನೆಯ ಸ್ಥಾನದಲ್ಲಿದ್ದರೆ, 21 ಕಲುಷಿತ ಪ್ರದೇಶ ಹೊಂದಿರುವ ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದ್ದರೆ 11 ಕಲುಷಿತ ಪ್ರದೇಶಗಳಿರುವ ದೆಹಲಿ ಮೂರನೇ ಸ್ಥಾನದಲ್ಲಿದೆ.

ಅತ್ಯಂತ ವಿಷಕಾರಿ ಹಾಗೂ ಅಪಾಯಕಾರಿ ವಸ್ತುಗಳನ್ನು ಹೊಂದಿರುವ ಕಲುಷಿತ ನಗರಗಳಲ್ಲಿ ದೆಹಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ದೇಶದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 112 ಪ್ರದೇಶಗಳನ್ನು ಅತ್ಯಂತ ಕಲುಷಿತ ಪ್ರದೇಶಗಳೆಂದು ಗುರುತಿಸಲಾಗಿದೆ.

Delhi Among Top 3 States With Most Contaminated Sites: Pollution Board

ಕಲುಷಿತ ಪ್ರದೇಶಗಳನ್ನು ಸ್ವಚ್ಚಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ ರಾಷ್ಟ್ರಿಯ ಹಸಿರು ನ್ಯಾಯಾಲಯ ಸೂಚನೆ ನೀಡಿದ್ದು ಕೆಲವು ರಾಜ್ಯಗಳಲ್ಲಿ ಶುಚಿ ಕಾರ್ಯ ಆರಂಭಗೊಂಡಿದೆ.

ಕಲುಷಿತ ಪ್ರದೇಶಗಳಲ್ಲಿ ಭೂಮಿ, ಕುಡಿಯುವ ನೀರು, ಗಾಳಿ ಮಲಿನವಾಗಿದೆ. ಇಂತಹ ಪರಿಸ್ಥಿತಿಯನ್ನು ಸರಿಗೊಳಿಸದಿದ್ದರೆ ಭವಿಷ್ಯದಲ್ಲಿ ಭಾರಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಪರಿಸರ ಸಚಿವಾಲಯ ಎಚ್ಚರಿಕೆ ನೀಡಿದೆ.

ರಾಷ್ಟ್ರ ರಾಜಧಾನಿಯ ಭಾಲ್ಸಾವಾ, ಘಾಜಿಪುರ್ ಲ್ಯಾಂಡ್‍ಪಿಲ್‍ಪ್ರದೇಶ, ಝಿಲ್‍ಮಿಲ್ ಕೈಗಾರಿಕಾ ಪ್ರದೇಶ, ವಾಜೀರ್‍ಪುರ್, ನ್ಯೂಫ್ರೆಂಡ್ಸ್ ಕಾಲನಿ, ದಿಲಷದ್ ಗಾರ್ಡನ್, ಲಾರೇನ್ಸ್ ರೋಡ್ ಸೇರಿದಂತೆ 11ಕ್ಕೂ ಹೆಚ್ಚು ಪ್ರದೇಶಗಳಲ್ಲಿ ವಿಷಕಾರಿ ಮತ್ತು ಅಪಾಯಕಾರಿ ವಸ್ತುಗಳು ಹೆಚ್ಚಾಗಿದ್ದು ಇಂತಹ ಪ್ರದೇಶಗಳಲ್ಲಿ ಜನ ವಾಸಿಸಲು ಯೋಗ್ಯವಿಲ್ಲ ಎಂದು ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+