ತಿಹಾರ್ ಜೈಲು ಪಾಲಾದ ಬಾಲಿವುಡ್ ನಟ ರಾಜ್ ಪಾಲ್ ಯಾದವ್
Recommended Video

ನವದೆಹಲಿ, ನವೆಂಬರ್ 30: ಬಾಲಿವುಡ್ ನಟ ರಾಜ್ ಪಾಲ್ ಯಾದವ್ ಅವರನ್ನು ತಿಹಾರ್ ಜೈಲಿಗೆ ಕಳಿಸಲಾಗಿದೆ. 5ಕೋಟಿ ರು ಸಾಲ ಹಿಂತಿರುಗಿಸದ ಕಾರಣ ಅವರು ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.
ರಾಜ್ಪಾಲ್ಯಾದವ್ಗೆ ಮೂರು ತಿಂಗಳುಗಳ ಕಾಲ ಜೈಲುವಾಸ ಶಿಕ್ಷೆ ವಿಧಿಸಿ, ಸಾಮಾನ್ಯ ಕೈದಿ ದರ್ಜೆಯಂತೆ ಸೆರೆಮನೆಯಲ್ಲಿ ಇರಿಸುವಂತೆ ದೆಹಲಿ ಪೊಲೀಸರಿಗೆ ದೆಹಲಿ ಹೈಕೋರ್ಟ್ ಆದೇಶಿಸಿದೆ.
ಹೈಕೋರ್ಟ್ ನ್ಯಾ. ರಾಜೀವ್ ಸಹಾಯ್ ಎಂಡ್ಲಾ ಅವರು ಯಾದವ್ ಅವರನ್ನು ಕೂಡಲೇ ಕಸ್ಟಡಿಗೆ ತೆಗೆದುಕೊಂಡು ತಿಹಾರ್ ಜೈಲಿನಲ್ಲಿ ಇರಿಸುವಂತೆ ನಿರ್ದೇಶಿಸಿದರು.

2010ರಲ್ಲಿ ತೆರೆ ಕಂಡ 'ಅಟಾ ಪಟಾ ಲಾಪಟಾ' ಎನ್ನುವ ಚಿತ್ರ ನಿರ್ಮಾಣ ಹಾಗೂ ನಿರ್ದೇಶನಕ್ಕಾಗಿ ದೆಹಲಿ ಮೂಲದ ಮುರಳಿ ಪ್ರೊಜೆಕ್ಟ್ ಕಂಪನಿಯಿಂದ ಯಾದವ್ ಹಾಗೂ ಅವರ ಪತ್ನಿ ರಾಧಾ ಅವರು 5 ಕೋಟಿ ರು ಹಣ ಪಡೆದುಕೊಂಡಿದ್ದರು.
ಆದರೆ, ಹಣ ವಾಪಸ್ನೀಡಿರಲಿಲ್ಲ. ರಾಜ್ಪಾಲ್ ಒಡೆತನದ ಶ್ರೀ ನವರಂಗ ಎಂಟರ್ಟ್ರೈನ್ಮೆಂಟ್ ಕಂಪನಿ ವಿರುದ್ಧ ಮುರಳಿ ಪ್ರೊಜೆಕ್ಟ್ ಕಂಪನಿ ಸಿವಿಲ್ ಕೇಸ್ ದಾಖಲಿಸಿತ್ತು.
2013ರಲ್ಲಿ 10 ದಿನಗಳ ನ್ಯಾಯಾಂಗ ಬಂಧನವನ್ನು ಅನುಭವಿಸಿದ್ದ ರಾಜ್ ಪಾಲ್ ಅವರು 2015ರಲ್ಲಿ 1.58 ಕೋಟಿ ರು ಪಾವತಿಸಿದ್ದೇನೆ, ಬಾಕಿ ಮೊತ್ತವನ್ನು 30ದಿನಗಳಲ್ಲಿ ಹಿಂತಿರುಗಿಸುವೆ ಎಂದು ಹೇಳಿದ್ದರು. ಆದರೆ, ಮಾತಿಗೆ ತಪ್ಪಿದ್ದರು. ಈಗ ಯಾದವ್ ದಂಪತಿ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲು ಕೋರ್ಟ್ ಆದೇಶಿಸಿದೆ.












Click it and Unblock the Notifications