ಆರೇ ಕಾಲೋನಿ: ಕಾರ್ ಶೆಡ್ ಗೆ ಓಕೆ, ಮರ ಕಡಿವಂತಿಲ್ಲ ಎಂದ ಸುಪ್ರೀಂ

ನವದೆಹಲಿ, ಅಕ್ಟೋಬರ್ 21: ಮುಂಬೈಯ ಆರೆ ಕಾಲೋನಿಯಲ್ಲಿ ಮೆಟ್ರೋ ಕಾರ್ ಶೆಡ್ ನಿರ್ಮಾಣವನ್ನು ಮುಂದುವರಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ತನ್ನ ಮುಂದಿನ ಆದೇಶದವರೆಗೂ ಈ ಸ್ಥಳದಲ್ಲಿ ಯಾವುದೇ ಮರ ಕಡಿಯುವಂತಿಲ್ಲ ಎಂದಿದೆ.

ನವೆಂಬರ್ 15 ರಂದು ಈ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದ್ದು, ಅಲ್ಲಿಯವರೆಗೂ ಈ ಪ್ರದೇಶದಲ್ಲಿ ಯಾವುದೇ ಮರ ಕಡಿಯುವಂತಿಲ್ಲ ಎಂದು ಕೋರ್ಟ್ ಹೇಳಿದೆ.

ಮುಂಬೈ ಮೆಟ್ರೋ ನಿಲ್ದಾಣಕ್ಕೆ ಕಾರ್ ಶೆಡ್ ನಿರ್ಮಿಸುವ ಸಲುವಾಗಿ ಅರೆ ಕಾಲೋನಿಯಲ್ಲಿರುವ 2500 ಮರಗಳನ್ನು ಕಡಿಯಲು ಎಂಎಂಆರ್ ಸಿ ಮುಂದಾಗಿತ್ತು. ಅಕ್ಟೋಬರ್ 4 ರಂದು ಮರಕಡಿವ ಪ್ರಕ್ರಿಯೆ ಆರಂಭಿಸಿದ್ದ ಎಂಎಂಆರ್ ಸಿ ಕ್ರಮವನ್ನು ವಿರೋಧಿಸಿ ಅಂದೇ ಮಧ್ಯ ರಾತ್ರಿ ಈ ಕಾಲೊನಿಯ ಜನರು ಪ್ರತಿಭಟನೆ ಆರಂಭಿಸಿದ್ದರು.

Recommended Video

      ಬಿ ಎಸ್ ಯಡಿಯೂರಪ್ಪ ಹುಟ್ಟೂರಾದ ಮಂಡ್ಯ ಜಿಲ್ಲೆಯ ಬೂಕನಕೆರೆ ಗ್ರಾಮದಲ್ಲಿ ಸಂಭ್ರಮ | Oneindia Kannada
      Aarey Case: SC Says Okay To Metro Car Shed, But No to Felling Of Trees

      ಮರ ಕಟಾವನ್ನು ವಿರೋಧಿಸಿ ಕೆಲವು ಪರಿಸರವಾದಿಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ಮಹಾರಾಷ್ಟ್ರ ಹೈಕೋರ್ಟ್ ಅಕ್ಟೋಬರ್ 4 ರಂದು ತಿರಸ್ಕರಿಸಿತು. ಈ ಮೂಲಕ ಮರಕಡಿಯಲು ಅನುಮತಿ ನೀಡಿತು.

      ನಂತರ ಮರ ಕಟಾವಿನ ವಿರುದ್ಧ ವಿವಿಧ ಜನ ನಾಯಕರು, ಸೆಲೆಬ್ರಿಟಿಗಳು ಒಂದಾದ ಕಾರಣ ಕಟಾವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಮರ ಕಟಾವಿನ ವಿರುದ್ಧ ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

      ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮೆಟ್ರೋ ಕಾರ್ ಶೆಡ್ ನಿರ್ಮಾಣವನ್ನು ಮುಂದುರಿಸಬಹುದು, ಆದರೆ ಮರ ಕಡಿಯುವಂತಿಲ್ಲ ಎಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+