ಅಲಕಾ ಲಂಬಾ ತಲೆಗೆ ಗುನ್ನ, ಬಿಜೆಪಿಯೇ ಕಾರಣ: ಎಎಪಿ

ನವದೆಹಲಿ, ಆಗಸ್ಟ್ : ಆಮ್ ಆದ್ಮಿ ಪಕ್ಷದ ಶಾಸಕಿ ಅಲಕಾ ಲಂಬಾ ಮೇಲೆ ನಡೆದ ಹಲ್ಲೆಗೆ ಬಿಜೆಪಿಯೇ ನೇರ ಕಾರಣ ಎಂದು ಆಮ್ ಆದ್ಮಿ ಪಕ್ಷ ಕಿಡಿಕಾರಿದೆ. ಇಲ್ಲಿನ ರಾಜ್ ಘಾಟ್ ಪ್ರದೇಶದಲ್ಲಿ ಅಲಕಾ ಅವರ ಮೇಲೆ ವ್ಯಕ್ತಿಯೊಬ್ಬ ಕಲ್ಲು ತೂರಾಟ ಮಾಡಿ ತಲೆಗೆ ಪೆಟ್ಟು ಮಾಡಿದ ಘಟನೆ ಭಾನುವಾರ ನಡೆದಿದೆ. ಅದರೆ, ಬಿಜೆಪಿ ಪರ ಕಾರ್ಯಕರ್ತರು ಇದೆಲ್ಲ ಎಎಪಿ ನಾಟಕ ಎಂದು ಪ್ರತಿಕ್ರಿಯಿಸಿದ್ದಾರೆ.

ಉತ್ತರ ದೆಹಲಿಯ ರಾಜ್ ಘಾಟ್ ಪ್ರದೇಶದ ಕಾಶ್ಮೀರಿ ಗೇಟ್ ಬಳಿ ಬಿಜೆಪಿ ಮುಖಂಡರೊಬ್ಬರಿಗೆ ಸೇರಿದ ಅಂಗಡಿ ಮಳಿಗೆ ಬಳಿ ಡ್ರಗ್ಸ್ ಬಗ್ಗೆ ಶಾಸಕಿ ಅಲಕಾ ಅವರು ಸಾರ್ವಜನಿಕರ ಮುಂದೆ ಜನ ಜಾಗೃತಿಗೆಯತ್ನಿಸುತ್ತಿದ್ದರು ಎನ್ನಲಾಗಿದೆ. [ಕಲ್ಲೇಟು ತಿಂದ ಅಲಕಾ ವಿರುದ್ಧ ಪೊಲೀಸರಿಂದ ಎಫ್ಐಆರ್]

ಮಾದಕ ವ್ಯಸನ ಕುರಿತಂತೆ ಆಪ್ ಶಾಸಕಿ ಅಲಕಾ ಲಂಬಾ ಭಾಷಣ ಆರಂಭಿಸುತ್ತಿದ್ದಂತೆ ಅಪರಿಚತ ವ್ಯಕ್ತಿಯೊಬ್ಬ ಕಲ್ಲು ತೂರಾಟನಡೆಸಿದ್ದಾನೆ. ಗಾಯಗೊಂಡ ಶಾಸಕಿಯನ್ನು ಅರುಣಾ ಅಸಫ್ ಅಲಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ದಾಳಿ ಕುರಿತಂತೆ ಬಿಜೆಪಿ ವಿರುದ್ಧ ಎಎಪಿ ಮುಖಂಡ ಆಶುತೋಷ್ ಅವರು ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿ ಅಲಕಾ ಲಂಬಾ ಅವರನ್ನು ಗುರಿಯನ್ನಾಗಿಸಿಕೊಂಡು ದಾಳಿ ನಡೆಸಲಾಗಿದೆ. ಇದು ಬಿಜೆಪಿಯ ಓಂ ಪ್ರಕಾಶ್ ಅವರದ್ದೇ ಕೈವಾಡ. ಪ್ರಕರಣ ಕುರಿತಂತೆ ಈಗಾಗಲೇ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ. ಸತ್ಯ ಹೊರ ಬೀಳಲಿದೆ ಎಂದಿದ್ದಾರೆ.

ಘಟನೆ ನಂತರ ಟ್ವೀಟ್ ಮಾಡಿದ ಅಲಕಾ

ಘಟನೆ ನಂತರ ಟ್ವೀಟ್ ಮಾಡಿದ ಅಲಕಾ

ಮಾದಕ ವ್ಯಸನ ಕುರಿತಂತೆ ಹೋರಾಟ ನಡೆಸುತ್ತಿದ್ದ ವೇಳೆ ನನ್ನ ಮೇಲೆ ಯಾರೋ ವ್ಯಕ್ತಿಯೊಬ್ಬ ದಾಳಿ ನಡೆಸಿದ. ಆ ವ್ಯಕ್ತಿ ಕಲ್ಲು ತೂರಾಟ ನಡೆಸುತ್ತಿದ್ದ ವೇಳೆಯಲ್ಲಿ ಸ್ಥಳದಲ್ಲಿದ್ದ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನೆ ಇದ್ದರು ಎಂದಿದ್ದಾರೆ.

ಆಗಸ್ಟ್ 9, 2015 ಕ್ರಾಂತಿದಿನ ಎಂದ ಅಲಕಾ

ಆಗಸ್ಟ್ 9, 2015 ಕ್ರಾಂತಿದಿನ ಎಂದ ಅಲಕಾ ಘಟನೆ ಬಗ್ಗೆ ಟ್ವೀಟ್ ಮಾಡಿದ್ದು ಹೀಗೆ...

ಅಲಕಾ ಲಂಬಾ ತಲೆಗೆ ಕಲ್ಲು ಹೊಡೆದವನು

ಅಲಕಾ ಲಂಬಾ ತಲೆಗೆ ಕಲ್ಲು ಹೊಡೆದವನು ಸಮೀಪದ ಸಿಹಿ ಆಂಗಡಿಯಲ್ಲಿ ಕೆಲಸ ಮಾಡುತ್ತಾನೆ. ಆ ಅಂಗಡಿ ಬಿಜೆಪಿ ಶಾಸಕ ಓಂ ಪ್ರಕಾಶ್ ಶರ್ಮ ಗೆ ಸೇರಿದೆ ಎಂದು ಸ್ಥಳೀಯರು ಹೇಳಿದ್ದಾರೆ ಎಂದು ಆಶುತೋಷ್ ಟ್ವೀಟ್.

ಅಲಕಾ ಬಗ್ಗೆ ಮುಖ್ಯಮಂತ್ರಿ ಕೇಜ್ರಿವಾಲ್

ಅಲಕಾ ಬಗ್ಗೆ ಮುಖ್ಯಮಂತ್ರಿ ಕೇಜ್ರಿವಾಲ್ ಪ್ರತಿಕ್ರಿಯಿಸಿ, ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ ಎಂದಿದ್ದಾರೆ.

ಎ ಎ ಪಿ ಹೋರಾಟ ಮುಂದುವರೆಯಲಿದೆ

ಎ ಎ ಪಿ ಹೋರಾಟ ಮುಂದುವರೆಯಲಿದೆ, ಅಲಕಾ ಈ ಘಟನೆಯಿಂದ ಹೆದರಿಲ್ಲ. ಅಷ್ಟು ಜನರಿದ್ದರೂ ಆಕೆಯನ್ನು ಗುರಿಯನ್ನಾಗಿಸಿ ಹಲ್ಲೆ ಮಾಡಲಾಗಿದೆ ಇದು ಖಂಡನೀಯ ಎಂದ ಆಶುತೋಷ್.

ಮೊದಲು ಬ್ಯಾಂಡೇಜ್ ಸರಿಯಾಗಿ ಕಟ್ಟಿಕೊಳ್ಳಿ

ಮೊದಲು ಬ್ಯಾಂಡೇಜ್ ಸರಿಯಾಗಿ ಕಟ್ಟಿಕೊಳ್ಳಿ, ಯಾವುದೋ ಮೋಚಿ ಅಂಗಡಿಯಲ್ಲಿ ಬ್ಯಾಂಡೇಜ್ ಸುತ್ತಿಸಿಕೊಂಡು ಬಂದ ಹಾಗೆ ಕಾಣುತ್ತದೆ. ನಾಟಕ ನಿಲ್ಲಿಸಿ ಎಂದ ಸಾರ್ವಜನಿಕರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+