• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ವೈರಸ್ ಹರಡುವಿಕೆ ಪತ್ತೆ ಹಾಗೂ ನಿಯಂತ್ರಣಕ್ಕೆ ಹೊಸ ಮಾರ್ಗ

|

ನವದೆಹಲಿ, ಮೇ.12: ನೊವೆಲ್ ಕೊರೊನಾ ವೈರಸ್ ಸೋಂಕು ಪತ್ತೆ ಮತ್ತು ನಿಯಂತ್ರಣ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ(ಐಸಿಎಂಆರ್) ಹಾಗೂ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ(ಎನ್ ಸಿಡಿಸಿ) ಹೊಸ ಮಾರ್ಗ ಕಂಡುಕೊಂಡಿದೆ.

ಭಾರತದಲ್ಲಿ ಜನಸಂಖ್ಯಾ ಆಧಾರದ ಮೇಲೆ ಆಯ್ದ ಜಿಲ್ಲೆಗಳಲ್ಲಿ ಸೆರೋ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ರಾಜ್ಯ ಆರೋಗ್ಯ ಇಲಾಖೆ ಮತ್ತು ತಜ್ಞರ ತಂಡವು ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಸೋಂಕು ಹರಡುವಿಕೆ ಪ್ರಮಾಣ ಪತ್ತೆ ಮಾಡುವುದಕ್ಕಾಗಿ ಸೆರೋ ಸಮೀಕ್ಷೆ ನಡೆಸಲಿದೆ.

ಕೇರಳದಲ್ಲಿ 25 ಕೊರೊನಾ ಸೋಂಕಿತರ ಹಿಂದಿನ ಇತಿಹಾಸ ಭಯಾನಕ!

ದೇಶದಲ್ಲಿನ ಆಯ್ದ ಪ್ರತಿಯೊಂದು ಜಿಲ್ಲೆಗಳಲ್ಲಿ ಒಂದು ವಾರಕ್ಕೆ 200 ಮಂದಿಯ ಮಾದರಿ ಹಾಗೂ ಒಂದು ತಿಂಗಳಿನಲ್ಲಿ 800 ಜನರ ಮಾದರಿ ಸಂಗ್ರಹಿಸಲಾಗುತ್ತದೆ. 10 ಬಗೆ ಆರೋಗ್ಯ ಸೌಲಭ್ಯಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಈ ಪೈಕಿ ಆರು ಸಾರ್ವಜನಿಕ ಆರೋಗ್ಯ ಸೌಲಭ್ಯಗಳಾಗಿವೆ. ಬಾಕಿ ನಾಲ್ಕು ಖಾಸಗಿ ಆರೋಗ್ಯ ಸೌಲಭ್ಯಗಳು ಎಂದು ತಿಳಿದು ಬಂದಿದೆ.

ಜನಸಂಖ್ಯೆ ಆಧಾರದಲ್ಲಿ ವೈದ್ಯಕೀಯ ತಪಾಸಣೆ:

ಜನಸಂಖ್ಯೆ ಆಧಾರದ ಮೇಲೆ ಸೆರೋ-ಸಮೀಕ್ಷೆ ನಡೆಸಲಾಗುತ್ತಿದೆ. ಇದರಲ್ಲಿ ಹೊರರೋಗಿಗಳು, ಗರ್ಭಿಣಿಯರು ಹಾಗೂ ವೈದ್ಯಕೀಯ ಸಿಬ್ಬಂದಿ ಸಹ ಒಳಪಟ್ಟಿದ್ದಾರೆ. ಆಯ್ದ ಜಿಲ್ಲೆಗಳಲ್ಲಿ ಒಬ್ಬರಿಂದ ಒಂದೇ ಬಾರಿ ರಕ್ತದ ಮಾದರಿ ಸಂಗ್ರಹಿಸಲಾಗುತ್ತಿದ್ದು, ಸೋಂಕು ತಗಲಿದೆಯೋ ಇಲ್ಲವೋ ಎಂಬುದರ ಸ್ಪಷ್ಟಪಡಿಸುವ ಉದ್ದೇಶದಿಂದ ಈ ಸೆರೋ-ಸಮೀಕ್ಷೆ ನಡೆಸಲಾಗುತ್ತಿದೆ.

ಸೆರೋ-ಸಮೀಕ್ಷೆಯು ವ್ಯಕ್ತಿಗತಿ ವೈದ್ಯಕೀಯ ತಪಾಸಣೆ ಅಲ್ಲವೇ ಅಲ್ಲ. ಆಂಟಿಬಾಡಿ ಹಾಗೂ ಎಲಿಸಾ ತಪಾಸಣೆಗಾಗಿ ಗಂಟಲು ದ್ರವ್ಯ, ರಕ್ತ ಮಾದರಿಯನ್ನು ಕಡ್ಡಾಯವಾಗಿ ಸಂಗ್ರಹಿಸಬೇಕಾಗುತ್ತದೆ. ಇದರ ಜೊತೆಗೆ ಮಾರ್ಗಸೂಚಿ ಅಡಿಯಲ್ಲಿ ದೈನಂದಿನ ವೈದ್ಯಕೀಯ ತಪಾಸಣೆ ನಡೆಸುವ ಅಗತ್ಯವಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಿಳಿಸಿದೆ.

English summary
A New Way To Detect And Control The Spread Of Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X