ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯ ಶೇ. 97 ರಷ್ಟು ಮಂದಿಗೆ ಕೋವಿಡ್‌ ವಿರುದ್ದ ಪ್ರತಿಕಾಯ: ಸೆರೊ ಸಮೀಕ್ಷೆ

|
Google Oneindia Kannada News

ನವದೆಹಲಿ, ಅಕ್ಟೋಬರ್‌ 28: ದೆಹಲಿಯ ಶೇಕಡ 97 ರಷ್ಟು ಜನರಲ್ಲಿ ಕೊರೊನಾ ವೈರಸ್‌ ಸೋಂಕು ವಿರುದ್ಧ ಪ್ರತಿಕಾಯ ಇದೆ, ಅಂದರೆ ಶೇಕಡ 97 ರಷ್ಟು ಜನರಲ್ಲಿ ಸೆರೊಪಾಸಿಟಿವಿ ಇದೆ ಎಂದು ಸೆರೊ ಸಮೀಕ್ಷೆ ಮೂಲಕ ತಿಳಿದು ಬಂದಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್‌ ಜೈನ್‌ ಗುರುವಾರ ಹೇಳಿದ್ದಾರೆ.

ಹಾಗೆಯೇ ಎಲ್ಲಾ ಜಿಲ್ಲೆಗಳಲ್ಲಿ ಸೆರೊ ಪಾಸಿಟಿವಿಟಿ ಶೇಕಡ 95 ರಷ್ಟು ಇದೆ ಎಂದು ಸೆರೊ ಸರ್ವೇ ಮೂಲಕ ಕಂಡು ಬಂದಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್‌ ಜೈನ್‌ ತಿಳಿಸಿದ್ದಾರೆ.

ಕೇರಳದಲ್ಲಿ 3/4 ರಷ್ಟು ಭಾಗದ ಜನರು ಕೋವಿಡ್‌ಗೆ ಒಡ್ಡಿಕೊಂಡಿದ್ದಾರೆ: ಸೆರೊ ಸರ್ವೇಕೇರಳದಲ್ಲಿ 3/4 ರಷ್ಟು ಭಾಗದ ಜನರು ಕೋವಿಡ್‌ಗೆ ಒಡ್ಡಿಕೊಂಡಿದ್ದಾರೆ: ಸೆರೊ ಸರ್ವೇ

ಈ ಸೆರೊ ಸರ್ವೇಗಾಗಿ ಸೆಪ್ಟೆಂಬರ್‌ನ ಕೊನೆಯ ವಾರದಲ್ಲಿ ಮಾದರಿಗಳನ್ನು ಸಂಗ್ರಹ ಮಾಡಲಾಗಿದೆ. ಒಟ್ಟು 28,000 ಮಾದರಿಗಳನ್ನು ಸಂಗ್ರಹ ಮಾಡಲಾಗಿದೆ. ಪ್ರತಿ ವಾರ್ಡ್‌ನಿಂದಲೂ 100 ಮಾದರಿಯನ್ನು ಸಂಗ್ರಹ ಮಾಡಲಾಗಿದೆ. ಏಪ್ರಿಲ್-ಮೇ ತಿಂಗಳಿನಲ್ಲಿ ಕೊರೊನಾ ವೈರಸ್‌ ಸೋಂಕಿನ ಎರಡನೇ ಅಲೆಯು ಕಾಣಿಸಿಕೊಂಡ ಬಳಿಕ ಮೊದಲ ಬಾರಿಗೆ ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಈ ಸರ್ವೇಯನ್ನು ನಡೆಸಲಾಗಿದೆ. ಕೊರೊನಾ ವೈರಸ್‌ ಸೋಂಕಿನ ಸಂಖ್ಯೆ ಅಧಿಕ ಆಗುತ್ತಿರುವ ಕಾರಣದಿಂದಾಗಿ ಏಪ್ರಿಲ್‌ನಲ್ಲಿ ಈ ಸಮೀಕ್ಷೆಯನ್ನು ಮಧ್ಯದಲ್ಲಿಯೇ ಕೈಬಿಡಲಾಗಿತ್ತು.

97% people surveyed have antibodies against COVID-19 in Delhi says Minister

ಈ ಸೆರೊ ಸರ್ವೇ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್‌ ಜೈನ್‌, "ಮಹಿಳೆಯರಲ್ಲಿ ಸೆರೊ ಪಾಸಿಟಿವಿಟಿಯು ಪುರುಷರಿಗಿಂತ ಕೊಂಚ ಅಧಿಕವಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸೋಂಕು ಹರಡುವಿಕೆ ಪ್ರಮಾಣವು ಶೇಕಡ 88 ಆಗಿದೆ. ವಯಸ್ಕರಲ್ಲಿ ಸೋಂಕು ಹರಡುವಿಕೆ ಪ್ರಮಾಣವು ಶೇಕಡ 97 ರಿಂದ ಶೇಕಡ 98 ಆಗಿದೆ," ಎಂದು ವಿವರಿಸಿದ್ದಾರೆ.

ಮತ್ತೆ ಕೊರೊನಾ ಸೋಂಕು ಉಲ್ಬಣ, ಯಾವ್ಯಾವ ದೇಶದ ಪರಿಸ್ಥಿತಿ ಹೇಗಿದೆ?ಮತ್ತೆ ಕೊರೊನಾ ಸೋಂಕು ಉಲ್ಬಣ, ಯಾವ್ಯಾವ ದೇಶದ ಪರಿಸ್ಥಿತಿ ಹೇಗಿದೆ?

"ಇನ್ನು ಈ ಸೆರೊ ಸರ್ವೇಯನ್ನು ಕೋವಿಡ್‌ ಲಸಿಕೆ ಪಡೆದ ಹಾಗೂ ಕೋವಿಡ್‌ ಲಸಿಕೆಯನ್ನು ಪಡೆಯದ ಜನರನ್ನು ಜೊತೆಯಾಗಿ ಸೇರಿಸಿ ಮಾಡಲಾಗಿದೆ. ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಲಸಿಕೆಯನ್ನು ಪಡೆಯದವರಲ್ಲಿ ಶೇಕಡ 90 ರಷ್ಟು ಸೆರೋಪ್ರೆವೆಲೆನ್ಸ್ ಇದೆ. ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಲಸಿಕೆಯನ್ನು ಪಡೆದವರಲ್ಲಿ ಶೇಕಡ 97 ರಷ್ಟು ಮಂದಿಯಲ್ಲಿ ಸೆರೋಪ್ರೆವೆಲೆನ್ಸ್ ಇದೆ," ಎಂದು ಕೂಡಾ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್‌ ಜೈನ್‌ ತಿಳಿಸಿದರು.

ಶೇಕಡ 97 ರಷ್ಟು ಮಂದಿಯಲ್ಲಿ ಸೆರೊಪಾಸಿಟಿವಿಟಿ

ದೆಹಲಿಯ ಬಹುತೇಕ ಜನರಿಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ. ಉಳಿದವರಿಗೆ ಲಸಿಕೆ ನೀಡಲಾಗಿದೆ. "ದೆಹಲಿಯಲ್ಲಿ ಸೆರೊ ಪಾಸಿಟಿವಿಟಿ ದರವು ನಿಧಾನವಾಗಿ ಅಧಿಕವಾಗಿದೆ ಎಂದು ಡೇಟಾದಲ್ಲಿ ಸ್ಪಷ್ಟವಾಗಿ ತಿಳಿದು ಬಂದಿದೆ. ಹರಡುವಿಕೆಯು 56 ಪ್ರತಿಶತದಷ್ಟು ಇದ್ದ ಹಿನ್ನೆಲೆ ಹಲವಾರು ಮಂದಿಯಲ್ಲಿ ಪ್ರತಿಕಾಯ ಇರಬಹುದು ಎಂದು ನಾವು ಭಾವಿಸಿದೆವು. ಈಗ ಅದು ಶೇಕಡ 97ಕ್ಕೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ," ಎಂದು ಹೇಳಿದರು.

ಇನ್ನು ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಲಸಿಕೆಯನ್ನು ಪಡೆದ ಜನರ ಬಗ್ಗೆ ಮಾತನಾಡಿದ ಸತ್ಯೇಂದರ್‌ ಜೈನ್‌, "ಕೋವಿಡ್ ಲಸಿಕೆಯನ್ನು ಪಡೆಯದ ಹಾಗೂ ಲಸಿಕೆ ಪಡೆಯದ ಎರಡು ಭಾಗದ ಜನರಲ್ಲಿಯೂ ಸೋಂಕು ಹರಡುವಿಕೆ ಪ್ರಮಾಣ ಅಧಿಕವಾಗಿದೆ. ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಲಸಿಕೆಯನ್ನು ಪಡೆದವರಲ್ಲಿಯೇ ಅಧಿಕವಾಗಿ ಸೋಂಕು ಹರಡುವಿಕೆ ಪ್ರಮಾಣ ಇದೆ," ಎಂದರು.

'11 ಕೋಟಿ ಜನರಿಗೆ ಕೋವಿಡ್‌ ಲಸಿಕೆಯ 2 ನೇ ಡೋಸ್‌ ಅವಧಿ ಮೀರಿದೆ': ಕೇಂದ್ರ ಸರ್ಕಾರ'11 ಕೋಟಿ ಜನರಿಗೆ ಕೋವಿಡ್‌ ಲಸಿಕೆಯ 2 ನೇ ಡೋಸ್‌ ಅವಧಿ ಮೀರಿದೆ': ಕೇಂದ್ರ ಸರ್ಕಾರ

ಕೊರೊನಾ ವೈರಸ್‌ ಸೋಂಕಿನ ಎರಡನೇ ಅಲೆಯ ಬಳಿಕ ಹಲವಾರು ರಾಜ್ಯಗಳಲ್ಲಿ ಸೆರೊ ಸರ್ವೇ ನಡೆಸಲಾಗಿದೆ. ಮುಂಬೈನಲ್ಲಿ ಈ ವರ್ಷದ ಆಗಸ್ಟ್‌ನಲ್ಲಿ ಸಮೀಕ್ಷೆಯನ್ನು ನಡೆಸಲಾಗಿದೆ. ಮುಂಬೈನಲ್ಲಿ ಸೋಂಕು ಹರಡುವಿಕೆ ಪ್ರಮಾಣವು ಶೇಕಡ 86.64 ಆಗಿತ್ತು. ಜುಲೈನಲ್ಲಿ ಚಂಡೀಗಢದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇಕಡ 80.2 ರಷ್ಟು ಸೋಂಕು ಹರಡುವಿಕೆ ಪ್ರಮಾಣ ಹಾಗೂ ಸೆಪ್ಟೆಂಬರ್‌ನಲ್ಲಿ ಗುರುಗ್ರಾಮದಲ್ಲಿ ಶೇಕಡ 78.3 ರಷ್ಟು ಸೋಂಕು ಹರಡುವಿಕೆ ಪ್ರಮಾಣವಿದೆ ಎಂದು ತಿಳಿದು ಬಂದಿದೆ.

Recommended Video

ಒಂದು ವರ್ಷವಾದ್ರೂ ಆರದ ದೀಪ,ಬಾಡದ ಹೂವು:ದೇವಿ ಹಾಸನಾಂಬೆ ಮಹಿಮೆ | Oneindia Kannada

(ಒನ್ಇಂಡಿಯಾ ಸುದ್ದಿ)

English summary
Delhi has a seropositivity of 97 per cent for Covid-19 antibodies says Delhi Health Minister Satyendar Jain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X