ಪಾಕ್, PoK ಯಲ್ಲಿ 16 ಉಗ್ರನೆಲೆ ಇನ್ನೂ ಜೀವಂತ: ಗುಪ್ತಚರ ಇಲಾಖೆ
ನವದೆಹಲಿ, ಮಾರ್ಚ್ 05: ಪಾಕಿಸ್ತಾನದ ಬಾಲಕೋಟ್ ನಲ್ಲಿದ್ದ ಜೈಷ್ ಇ ಮೊಹಮ್ಮದ್ ಉಗ್ರನೆಲೆಯ ಮೇಲೆ ಭಾರತ ದಾಳಿ ನಡೆಸಿದ ಕೆಲವೇ ದಿನಗಳಲ್ಲಿ ಗುಪ್ತಚರ ಇಲಾಖೆಗೆ ಹೊಸ ಮಾಹಿತಿಯೊಂದು ಲಭ್ಯವಾಗಿದೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ(PoK) ಭಾಗಗಳಲ್ಲಿ ಈಗಲೂ 16 ಉಗ್ರ ಸಂಘಟನೆಗಳು ಜೀವಂತವಾಗಿವೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದಲ್ಲದೆ, ಎಚ್ಚರಿಕೆಯನ್ನೂ ನೀಡಿದೆ.
ಪಾಕಿಸ್ತಾನದಲ್ಲಿ 5 ಉಗ್ರನೆಲೆಯಿದ್ದರೆ, ಪಿಒಕೆಯಲ್ಲಿ 11 ಉಗ್ರನೆಲೆಗಳು ಜೀವಂತವಾಗಿದ್ದು, ಈ ನೆಲೆಗಳಲ್ಲಿ ಆತ್ಮಾಹುತಿ ಬಾಂಬರ್ ಗಳಿಗೆ ತರಬೇತಿ ನೀಡಲಾಗುತ್ತಿದೆ. ಮಾತ್ರವಲ್ಲ, ಎಲ್ ಇಡಿ ಸ್ಫೋಟಿಸುವುದು ಹೇಗೆ?, ನುಸುಳುಕೋರರಿಗೆ ತರಬೇತಿ ನೀಡುವುದು ಹೇಗೆ, ಶಾಂತಿ ಕದಡುವುದು ಹೇಗೆ ಎಂಬಿತ್ಯಾದಿ ತರಬೇತಿಯ ಜೊತೆಗೆ ಉಗ್ರ ಚಟುವಟಿಕೆಗಾಗಿ ತಂತ್ರಜ್ಞಾನ ಬಳಸುವುದು ಹೇಗೆ ಎಂಬ ಬಗ್ಗೆಯೂ ತರಬೇತಿ ನೀಡಲಾಗುತ್ತಿದೆ.

2018 ರಲ್ಲಿ 560 ಕ್ಕೂ ಹೆಚ್ಚು ಉಗ್ರರಿಗೆ ಭಾರತ ವಿರೋಧಿ ಚಟುವಟಿಕೆಗಾಗಿ ಎಲ್ಲ ರೀತಿಯ ತರಬೇತಿ ನೀಡಲಾಗಿದೆ.












Click it and Unblock the Notifications