• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೃಷಿ ಮೂಲಸೌಕರ್ಯಕ್ಕಾಗಿ 1 ಲಕ್ಷ ಕೋಟಿ ರೂ ಘೋಷಣೆ

|

ನವ ದೆಹಲಿ, ಮೇ 15: ಭಾರತ ಸರ್ಕಾರ ಕೃಷಿ ಮೂಲಸೌಕರ್ಯ ಯೋಜನೆಗಳಿಗಾಗಿ 1 ಲಕ್ಷ ಕೋಟಿ ರೂಪಾಯಿ ಘೋಷಣೆ ಮಾಡಿದೆ. ಈ ವಿಷಯವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಂಚಿಕೊಂಡಿದ್ದಾರೆ.

ಇಂದು ಆರ್ಥಿಕ ಪ್ಯಾಕೇಜ್‌ನ ಮೂರನೇ ಹಂತದ ವಿವರಣೆಯನ್ನು ನಿರ್ಮಲಾ ಸೀತಾರಾಮನ್ ನೀಡಿದ್ದಾರೆ. ಶುಕ್ರವಾರ ಪ್ರಮುಖವಾಗಿ ಕೃಷಿ ವಲಯದ ಯೋಜನೆಗಳ ಬಗ್ಗೆ ಅವರು ತಿಳಿಸಿದ್ದಾರೆ.

ಮೀನುಗಾರರಿಗೆ ನೆರವಾಗಲು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ

ಸೂಕ್ಷ್ಮ ಆಹಾರ ಉದ್ಯಮಗಳ (ಎಂಎಫ್‌ಇ) ಪಚಾರಿಕೀಕರಣಕ್ಕಾಗಿ 10,000 ಕೋಟಿ ರೂಪಾಯಿ ಮೀಸಲಿಡುವುದಾಗಿ ತಿಳಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಮಾವು, ಜಮ್ಮು ಮತ್ತು ಕಾಶ್ಮೀರದ ಕೇಸರಿ, ಈಶಾನ್ಯದಲ್ಲಿ ಬಿದಿರಿನ ಕಳಲೆ, ಆಂಧ್ರಪ್ರದೇಶದಲ್ಲಿ ಮೆಣಸಿನಕಾಯಿ, ತಮಿಳುನಾಡಿನ ಟಪಿಯೋಕಾ ಮುಂತಾದವುಗಳ ಅಳವಡಿಸಿಕೊಳ್ಳುವ ಮೂಲಕ 2 ಲಕ್ಷ ಎಂಎಫ್‌ಇಗಳಿಗೆ ಸಹಾಯ ಮಾಡಲು ಈ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದಿದ್ದಾರೆ.

"ಕೃಷಿ-ಮೂಲಸೌಕರ್ಯ ಯೋಜನೆಗಳಿಗೆ ಧನಸಹಾಯ ನೀಡಲು 1,00,000 ಕೋಟಿ ರೂ.ಗಳ ಹಣಕಾಸು ಸೌಲಭ್ಯವನ್ನು ಒದಗಿಸಲಾಗುವುದು. ಇದು ಸುಗ್ಗಿಯ ನಂತರದ ನಿರ್ವಹಣಾ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಹ ಪ್ರಚೋದನೆ ನೀಡುವುದು'' ಎಂದು ಸೀತಾರಾಮನ್ ಹೇಳಿದರು.

20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: ಕೃಷಿ ಕ್ಷೇತ್ರಕ್ಕೆ ಮಹತ್ವದ ಘೋಷಣೆ!

ಸುಧಾರಿತ ಆರೋಗ್ಯ ಪ್ರಜ್ಞೆಯನ್ನು ಗಮನದಲ್ಲಿಟ್ಟುಕೊಂಡು, ರಫ್ತು ಮಾಡದ ಮಾರುಕಟ್ಟೆಗಳನ್ನು ತಲುಪಲು ಈ ನಿಧಿ ಸಹಾಯ ಮಾಡುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

English summary
Finance Minister Nirmala Sitharaman on Friday announced that Rs 1 lakh crore fund for agri infrastructure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X