ಫೇಸ್ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್: ಯುವಕನ ಬಂಧನ
ಮೈಸೂರು, ಜೂನ್ 12 : ಫೇಸ್ ಬುಕ್‌ನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಪೋಸ್ಟರ್ ನ್ನು ಶೇರ್ ಮಾಡಿದ ಆರೋಪದಡಿ ಯುವಕನೋರ್ವನ್ನು ಪೊಲೀಸರು ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ಸೋಮವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿ ಹುಣಸೂರು ಮೂಲದ ಮಂಜುನಾಥ್ ಎನ್ನುವಾತ ಫೇಸ್ಬುಕ್ ನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಪೋಸ್ಟರ್ ಗಳನ್ನು ಶೇರ್ ಮಾಡಿದ್ದಾನೆ. ಈ ಹಿನ್ನಲೆಯಲ್ಲಿ ಮಂಜುನಾಥ್ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಇಲ್ಲಿನ ಮುಸ್ಲಿಂ ಕಮಿಟಿಯು ಆರೋಪಿ ಮಂಜುನಾಥ್ ವಿರುದ್ಧ ಹುಣಸೂರಿನ ಪೊಲೀಸ್ ಠಾಣೆಯಲ್ಲಿ ದೂರು ನೀಡಿತ್ತು.

ಪೊಲೀಸರು ಮಂಜುನಾಥ್‌ನನ್ನು ವಶಕ್ಕೆ ಪಡೆದು ಆತನ ವಿರುದ್ಧ ಕೇಸು ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.












Click it and Unblock the Notifications