ಮಹಿಳೆಯಿಂದ ಅವಮಾನವಾಯ್ತೆಂದು ನೇಣಿಗೆ ಶರಣಾದ ಯುವಕ
ಮೈಸೂರು, ಜೂನ್ 4: ಮಹಿಳೆಯೊಬ್ಬಳು ಚಪ್ಪಲಿಯಲ್ಲಿ ಹೊಡೆದ ಕಾರಣ, ಅವಮಾನದಿಂದ ಮನನೊಂದು ಯುವಕನೊಬ್ಬ ನೇಣಿಗೆ ಶರಣಾದ ಘಟನೆ ಮೈಸೂರಿನ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ರಾಮಯ್ಯ ಕಾಲೋನಿಯ ನಿವಾಸಿ ಕೆ.ಬಿ. ಸ್ವತಂತ್ರ (24) ನೇಣಿಗೆ ಶರಣಾದವನು. ಕೆ.ಆರ್.ಪೇಟೆ ಪುರಸಭೆಯ ವಸತಿ ಯೋಜನಾ ವಿಭಾಗದಲ್ಲಿ ಹೊರಗುತ್ತಿಗೆಯ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಸ್ವತಂತ್ರ, ನಿನ್ನೆ ಮಧ್ಯಾಹ್ನ ಜ್ವರ ಮತ್ತು ಕೆಮ್ಮು ಇದ್ದ ಕಾರಣ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಹೋಗಿದ್ದರು. ಇದೇ ವೇಳೆ ಸರತಿಯಲ್ಲಿ ನಿಂತಿದ್ದಾಗ, ಮುಂಭಾಗದಲ್ಲಿದ್ದ ಮಹಿಳೆ ಸಕಾರಣವಿಲ್ಲದೇ ಎಲ್ಲರೆದುರು ನಿಂದಿಸಿ, ಚಪ್ಪಲಿಯಲ್ಲಿ ಹೊಡೆದು ಅವಮಾನ ಮಾಡಿದ್ದಾರೆ.

ಆಸ್ಪತ್ರೆಯಿಂದ ಬಂದ ಬಳಿಕ ಕೊಠಡಿಗೆ ತೆರಳಿ ಡೆತ್ ನೋಟ್ ಬರೆದಿಟ್ಟ ಸ್ವತಂತ್ರ, ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.












Click it and Unblock the Notifications