ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು : ಯಶಸ್ವಿನಿ ಯೋಜನೆಗೆ ಆ.31ರ ತನಕ ಹೆಸರು ಸೇರಿಸಿ

|
Google Oneindia Kannada News

ಮೈಸೂರು, ಆ.4 : ಜಿಲ್ಲೆಯಲ್ಲಿ ಯಶಸ್ವಿನಿ ಸಹಕಾರಿ ರೈತರ/ ನಗರ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯಡಿ ಹೊಸ ಸದಸ್ಯರನ್ನಾಗಿ ನೋಂದಾಯಿಸಲು ಮತ್ತು ನವೀಕರಿಸುವ ಅವಧಿಯನ್ನು ಆಗಸ್ಟ್ 31ರ ತನಕ ವಿಸ್ತರಣೆ ಮಾಡಲಾಗಿದೆ.

ಸಹಕಾರ ಸಂಘಗಳ ಉಪನಿಬಂಧಕ ಡಾ.ಉಮೇಶ ಜಿ. ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.'

ಮಂಗಳೂರು : ಎಚ್1ಎನ್ 1 ಬಗ್ಗೆ ಆತಂಕ ಬೇಡಮಂಗಳೂರು : ಎಚ್1ಎನ್ 1 ಬಗ್ಗೆ ಆತಂಕ ಬೇಡ

'ಈಗಾಗಲೇ ಸಹಕಾರ ಸಂಘಗಳಲ್ಲಿ ಸದಸ್ಯರಾಗಿ 3 ತಿಂಗಳು ಕಳೆದಿರುವವರು ಸದಸ್ಯರಾಗಿ ನೋಂದಾಯಿಸಿಕೊಂಡು ಪ್ರಯೋಜನ ಪಡೆದುಕೊಳ್ಳಬಹುದಾಗಿದೆ' ಎಂದು ಹೇಳಿದ್ದಾರೆ.

Yeshasvini scheme

ಕಾರ್ಯನಿರತ ಎಲ್ಲಾ ವಿಧದ ಸಹಕಾರ ಸಂಘಗಳಲ್ಲಿ ಹಾಗೂ ಬ್ಯಾಂಕುಗಳಲ್ಲಿ ಸದಸ್ಯರಾಗಿರುವವರು ಮತ್ತು ಅವರ ಕುಟುಂಬದವರು, ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರು ಹಾಗೂ ಲೈಂಗಿಕ ಅಲ್ಪಸಂಖ್ಯಾತರು ಯೋಜನೆಯಡಿ ಸದಸ್ಯರಾಗಿ ಪ್ರಯೋಜನ ಪಡೆಯಬಹುದು.

ಮುಖ್ಯ ಅರ್ಜಿದಾರನು ತನ್ನ ಕುಟುಂಬದ ಎಲ್ಲ ಅರ್ಹ ಸದಸ್ಯರನ್ನು ಯಶಸ್ವಿನಿ ಸದಸ್ಯರನ್ನಾಗಿ ನೋಂದಣಿ ಮಾಡಬಹುದು.ನವಜಾತ ಶಿಶುವಿನಿಂದು ಹಿಡಿದು ಜೀವಿತಾವಧಿಯವರೆಗೆ ಸದಸ್ಯತ್ವ ಪಡೆದಿರುವವರು ಪ್ರಯೋಜನ ಪಡೆಯಬಹುದು.

ಗ್ರಾಮೀಣ ತಜ್ಞ ವೈದ್ಯರ ನೇಮಕಕ್ಕೆ ಆನ್‌ಲೈನ್‌ ಬಿಡ್ -ರಮೇಶ್ ಕುಮಾರ್ಗ್ರಾಮೀಣ ತಜ್ಞ ವೈದ್ಯರ ನೇಮಕಕ್ಕೆ ಆನ್‌ಲೈನ್‌ ಬಿಡ್ -ರಮೇಶ್ ಕುಮಾರ್

ಒಂದೇ ಕುಟುಂಬದ 5 ಅಥವಾ 5 ಕ್ಕಿಂತ ಹೆಚ್ಚಿನ ಸದಸ್ಯರು ನೋಂದಾವಣಿ ಮಾಡಿದಲ್ಲಿ ಶೇ.15 ರಷ್ಟು ರಿಯಾಯಿತಿ ಪಡೆಯಬಹುದಾಗಿದೆ. ಯೋಜನೆಯಡಿ ಉಚಿತ ಶಸ್ತ್ರಚಿಕಿತ್ಸೆ ಸೌಲಭ್ಯ ಪಡೆಯುವ ಅವಧಿಯು ಜೂನ್ 01 ರಿಂದ ಮೇ 31ರ ತನಕ ಇರುತ್ತದೆ.

ರೈತ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆ : ಗ್ರಾಮೀಣ ಭಾಗದ ಸಹಕಾರಿ ರೈತರ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ 2003-04ನೇ ಸಾಲಿನಲ್ಲಿ ಯಶಸ್ವಿನಿ ಸಹಕಾರಿ ರೈತ ಆರೋಗ್ಯ ರಕ್ಷಣಾ ಯೋಜನೆ ಕಾರ್ಯಕ್ರಮವನ್ನು ಸಹಕಾರ ಇಲಾಖೆ ವತಿಯಿಂದ ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ.

ನಗರ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆ : ನಗರ ಪ್ರದೇಶದ ಜನರೂ ಕೂಡ ಹೆಚ್ಚಿನ ಒತ್ತಡದಲ್ಲಿ ಕೆಲಸಕಾರ್ಯಗಳನ್ನು ನಿರ್ವಹಿಸುತ್ತಿದ್ದು ಅನಾರೋಗ್ಯದಿಂದ ಹೆಚ್ಚಿನ ಜನರು ತೊಂದರೆ ಅನುಭವಿಸುತ್ತಿದ್ದನ್ನು ಮನಗಂಡ ಸರ್ಕಾರವು ಸಹಕಾರ ಇಲಾಖಾ ವತಿಯಿಂದ ನಗರ ಯಶಸ್ವಿನಿ ಯೋಜನೆಯನ್ನು 2014-15ನೇ ಸಾಲಿನಲ್ಲಿ ಅನುಷ್ಟಾನಗೊಳಿಸಿದೆ.

ಪ್ರತಿ ಸದಸ್ಯರು ರೂ.710 ವತಿಸಿ ಯೋಜನೆಯಡಿ ಸದಸ್ಯರಾಗಬಹುದು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರು ರೂ.110 ಪಾವತಿ ಮಾಡಬೇಕು. ರಾಜ್ಯಾದ್ಯಂತ ಯಶಸ್ವಿನಿ ಟ್ರಸ್ಟ್ ನಿಂದ ಗುರುತಿಸಲ್ಪಟ್ಟ 65ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ 823 ಶಸ್ತ್ರ ಚಿಕಿತ್ಸೆಗಳನ್ನು ನಗದು ರಹಿತವಾಗಿ ಪಡೆಯಬಹುದಾಗಿರುತ್ತದೆ. ಹೃದಯ ಚಿಕಿತ್ಸೆ, ಕಿಡ್ನಿ ಚಿಕಿತ್ಸೆ ಹಾಗೂ ಬ್ರೈನ್ ಹ್ಯಾಮರೇಜ್ ಚಿಕಿತ್ಸೆ ಪ್ರಮುಖವಾಗಿವೆ.

English summary
In Mysuru peorple can rigister new members and renewal of registration of old members (2017-18) for Yeshasvini Health Scheme till August 31, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X