ತಂದೆಯಾದ ಖುಷಿಯಲ್ಲಿ ನಾನಾ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಯದುವೀರ್
ಮೈಸೂರು, ಜನವರಿ, 6 : ಮೈಸೂರಿನ ಯದುವಂಶಕ್ಕೆ ಉತ್ತರಾಧಿಕಾರಿ ಬಂದ ಖುಷಿಯಲ್ಲಿರುವ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು (ಜನವರಿ 6) ಬೆಳ್ಳಂಬೆಳಗ್ಗೆ ಅರಮನೆ ಸಮೀಪವಿರುವ ಕೋಟೆ ಮಾರಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ದಶಕಗಳ ಬಳಿಕ ಮೊದಲ ಬಾರಿಗೆ ಅರಮನೆಯಲ್ಲಿ ಮಗು ಅಳುವಿನ ಸದ್ದು ಕೇಳುತ್ತಿದೆ. ಈ ಸಂತಸದಲ್ಲಿರುವ ಯದುವೀರ ಅವರು ಇಂದು ಬೆಳಗ್ಗೆ ಪ್ರಥಮ ಬಾರಿಗೆ ಕೋಟೆ ಆಂಜನೇಯಸ್ವಾಮಿ, ಕೋಟೆ ಮಾರಮ್ಮ ಸೇರಿದಂತೆ ಹಲವು ದೇವಸ್ಥಾನಗಳಿಗೆ ತೆರಳ ವಿಶೇಷ ಪೂಜೆ ಸಲ್ಲಿಸಿದರು.

ಎಲ್ಲ ದೇವರ ಆಶೀರ್ವಾದದಿಂದ ಯದುವಂಶಕ್ಕೆ ಉತ್ತರಾಧಿಕಾರಿ ಸಿಕ್ಕಿದ್ದಾನೆ. ಈ ಸಂಭ್ರಮದ ಜತೆಗೆ ರಾಜ್ಯದ ಜನತೆಗೆ ದೇವಿ ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸಲು ಕೋಟೆ ಮಾರಮ್ಮನ ದೇವಾಲಯಕ್ಕೆ ಭೇಟಿ ನೀಡಿದ್ದೇನೆ. ಜತೆಗೆ ಎಲ್ಲ ದೇವಾಲಯಗಳಿಗೂ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿರುವುದಾಗಿ ಯದುವೀರ್ ಹೇಳಿದರು.

ಡಿಸೆಂಬರ್ 6ರಂದು ತ್ರಿಷಿಕಾ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.












Click it and Unblock the Notifications