ಮೈಸೂರು: ಫೆ. 23 ರಂದು ಯದುರಾಜ್ ಗೆ ಪಟ್ಟಾಭಿಷೇಕ
ಮೈಸೂರು, ಫೆ. 8: ಮೈಸೂರು ಒಡೆಯರ್ ಉತ್ತರಾಧಿಕಾರಿಯಾಗಿ ಯದುವರ್‌ರಾಜ್ ಅರಸ್ ಅವರಿಗೆ ಫೆಬ್ರವರಿ ಫೆ.23ರಂದು ಪಟ್ಟಾಭಿಷೇಕ ಮಾಡಲಾಗುವುದು. ಅಂಬಾವಿಲಾಸ ಅರಮನೆಯಲ್ಲಿ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಲಿದೆ.
ಯದುವರ್‌ರಾಜ್ ಅರಸ್ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಕಿರಿಯ ಸಹೋದರಿ ಗಾಯತ್ರಿದೇವಿ ಪುತ್ರ. ಬೋಸ್ಟಾನ್ ವಿವಿಯಲ್ಲಿ ವ್ಯಾಸಂಗ ಮಾಡಿರುವ ಯದುವರ್‌ರಾಜ್ ಅರಸ್ ಗೆ ಉತ್ತರಾಧಿಕಾರಿ ಗಾದಿ ಒದಗಿ ಬಂದಿದೆ. ಇದ್ದ ಎಲ್ಲ ಗೊಂದಲಗಳಿಗೆ ಅಂತ್ಯ ಸಿಕ್ಕಂತಾಗಿದೆ.[ಮೈಸೂರು ಒಡೆಯರ್ ಉತ್ತರಾಧಿಕಾರಿ ನೇಮಕಕ್ಕೆ ತೆರೆ?]

ಪಟ್ಟಾಭಿಷೇಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಂಬಾವಿಲಾಸ ಅರಮನೆಯ ಕಲ್ಯಾಣ ಮಂಟಪವನ್ನು ಅಲಂಕರಿಸಲಾಗುತ್ತಿದೆ. ರಾಜ ಕುಟುಂಬ ಹಾಗೂ ಗಣ್ಯರನ್ನು ಪಟ್ಟಾಭಿಷೇಕಕ್ಕೆ ಆಹ್ವಾನಿಸಲು ಸಿದ್ಧತೆ ನಡೆಯುತ್ತಿದೆ.
ಉತ್ತರಾಧಿಕಾರಿ ನೇಮಕ ಸಂಬಂಧ ರಾಣಿ ಪ್ರಮೋದಾದೇವಿ ತಮ್ಮ ಕುಟುಂಬದ ಸಂಬಂಧಿಕರು,ಆತ್ಮೀಯರು, ಸ್ನೇಹಿತರು ಹಾಗೂ ಪುರೋಹಿತರ ಜತೆ ಚರ್ಚಿಸಿದ್ದರು. ಅಲ್ಲದೇ ಶೃಂಗೇರಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದವನ್ನು ಪಡೆದಿದ್ದರು.












Click it and Unblock the Notifications