ಮೈಸೂರಿನಲ್ಲಿ ವರದಕ್ಷಿಣೆ ದಾಹಕ್ಕೆ ಮಹಿಳೆ ಬಲಿ
ಮೈಸೂರು, ಜುಲೈ 1: ಗಂಡನ ವರದಕ್ಷಿಣೆ ದಾಹಕ್ಕೆ ಗೃಹಿಣಿಯೊಬ್ಬರು ನೇಣಿಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ಯರಗನಹಳ್ಳಿಯ ಸೌಮ್ಯಾ (24) ನೇಣಿಗೆ ಶರಣಾದವರು. ಮೈಸೂರು ತಾಲ್ಲೂಕಿನ ಮರೆಸತ್ತನಹಳ್ಳಿಯ ಸೌಮ್ಯಾ ವರ್ಷದ ಹಿಂದಷ್ಟೇ ನಗರದ ಯರಗನಹಳ್ಳಿಯ ಶಿವು ಎಂಬಾತನ ಜತೆ ವಿವಾಹವಾಗಿದ್ದರು. ಪೋಷಕರು ಅದ್ಧೂರಿಯಿಂದ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದ ಕೆಲ ದಿನಗಳ ಬಳಿಕ ಶಿವು ವರದಕ್ಷಿಣೆ ತರುವಂತೆ ಕಿರುಕುಳ ನೀಡಲಾರಂಭಿಸಿದ್ದ. ಹಣ ತರಲು ಸೌಮ್ಯಾ ನಿರಾಕರಿಸುತ್ತಿದ್ದರು.
ವರದಕ್ಷಿಣೆ ತರಲಿಲ್ಲವೆಂದೇ ಶಿವು ಹಾಗೂ ಆತನ ಕುಟುಂಬದವರು ಸೇರಿಕೊಂಡು ಸೌಮ್ಯಾಳನ್ನು ಕೊಲೆಗೈದು, ನೇಣು ಹಾಕಿದ್ದಾರೆ ಎಂದು ಸೌಮ್ಯಾ ಪೋಷಕರು ದೂರು ನೀಡಿದ್ದಾರೆ.

ಸೌಮ್ಯಾಳ ಸಾವಿನ ಸುದ್ದಿ ತಿಳಿದ ತವರಿನವರು, ಶವವಿಟ್ಟಿದ್ದ ಕಾವೇರಿ ಆಸ್ಪತ್ರೆ ಮುಂಭಾಗ ಅಪಾರ ಸಂಖ್ಯೆಯಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ಆಲನಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.












Click it and Unblock the Notifications