ಸರ್ಕಾರದಿಂದ ಮಹಿಳೆಯರಿಗಾಗಿ 25 ಸಾವಿರ ತುರ್ತುನಿಧಿ: ಸಚಿವೆ ಜಯಮಾಲಾ
ಮೈಸೂರು, ಅಕ್ಟೋಬರ್ 11: ವೈಭವದ ದಸರಾ ಮಹೋತ್ಸವಕ್ಕೆ ಇಂದು (ಅ.11) ಎರಡನೇ ದಿನ. ಇಂದು ಕೂಡ ಹತ್ತು ಹಲವು ಕಾರ್ಯಕ್ರಮಗಳು ನಡೆದಿದ್ದು, ನಗರದ ಜೆ.ಕೆ ಮೈದಾನದಲ್ಲಿ ಮಹಿಳಾ ದಸರಾಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ, ಸ್ತ್ರೀ ಶಕ್ತಿ ಗುಂಪು ಸ್ತ್ರೀಯರಲ್ಲಿ ಶಕ್ತಿಯನ್ನು ಹೊರತರುವಂತಹ ಕೆಲಸ ಮಾಡಬೇಕು. ಸರ್ಕಾರ ಮಹಿಳೆಯರಿಗಾಗಿ 25 ಸಾವಿರ ತುರ್ತುನಿಧಿಯನ್ನು ನೀಡುವ ಜೊತೆಯಲ್ಲಿ ಉದ್ಯೋಗಿನಿ ಯೋಜನೆಯನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ.
ಸರ್ಕಾರ ಜಾರಿಗೆ ತಂದಿರುವ ಎಲ್ಲ ಯೋಜನೆಯ ಫಲವನ್ನು ಬೇರೆಯವರಿಗೂ ಹೇಳಬೇಕು. ನೀವೂ ಅದನ್ನು ಬಳಸಿಕೊಳ್ಳಬೇಕು. ಸರ್ಕಾರದ ಯೋಜನೆಯನ್ನು ಸರಿಯಾಗಿ ಬಳಸಿಕೊಳ್ಳಿ. ನೀವು ಬೆಳೆದಷ್ಟು ಒಳ್ಳೆಯ ಕೆಲಸಗಳನ್ನು ಮಾಡಬಹುದು ಎಂದರು.

ಅಂಗನವಾಡಿ ನೌಕರರು ಯಾವುದೇ ನರ್ಸ್ ಮತ್ತು ಎಂಬಿಬಿಎಸ್ ಡಾಕ್ಟರ್ ಗಳಿಗಿಂತ ಕಡಿಮೆ ಇಲ್ಲ. ಅವರ ಸೇವೆ ಮಹತ್ವದ್ದು ಎಂದು ಜಯಮಾಲಾ ಬಣ್ಣಿಸಿದರು. ರಾಜ್ಯದಲ್ಲಿ 65 ಸಾವಿರಕ್ಕೂ ಹೆಚ್ಚು ಅಂಗನವಾಡಿಗಳಿದ್ದು, ಅಂಗನವಾಡಿ ಶಿಕ್ಷಕರ, ಸಹಾಯಕಿಯರ ಕೆಲಸ ಅವಿಸ್ಮರಣೀಯ. ಅವರು ಮಾಡುವ ಕೆಲಸ ದೇವರ ಕೆಲಸ.
ಅವರು ಕೆಲಸವನ್ನು ಡಾಕ್ಟರ್ ಕಲಿತವರು ಮಾಡಲಾಗುವುದಿಲ್ಲ. ವೈದ್ಯರು ಹಳ್ಳಿಗೆ ಹೋಗಿ ಕೆಲಸ ಮಾಡಲ್ಲ ಎನ್ನುತ್ತಾರೆ. ನೀವು ನಿಜವಾದ ಸಮಾಜ ಸೇವಕಿಯರು ಎಂದು ನೆರೆದಿದ್ದ ಅಂಗನವಾಡಿ ಕಾರ್ಯಕರ್ತರುನ್ನು ಹೊಗಳಿದರು.

ಮಹಿಳೆಯರ ಕರಕುಶಲ ವಸ್ತುಗಳು, ತಿಂಡಿ ತಿನಿಸುಗಳ ಮೇಳವನ್ನು ಇದೇ ವೇಳೆ ಆಯೋಜಿಸಲಾಗಿದ್ದು, ನೋಡುಗರ ಗಮನ ಸೆಳೆಯಿತು.












Click it and Unblock the Notifications