ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಓಎಲ್ ಎಕ್ಸ್ ನಲ್ಲಿ ಸ್ಕೂಟರ್ ಮಾರುವುದಾಗಿ ಹೇಳಿ ಮೋಸ

|
Google Oneindia Kannada News

ಮೈಸೂರು, ಜುಲೈ 31: ಓಎಲ್ ‌ಎಕ್ಸ್ ನಲ್ಲಿ ಸ್ಕೂಟರ್ ಮಾರಾಟ ಮಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಮಹಿಳೆಗೆ 42 ಸಾವಿರ ರೂಪಾಯಿ ವಂಚಿಸಿದ್ದಾನೆ.

ಮೈಸೂರಿನ ಸೋಮನಾಥನಗರದ ಮಹಿಳೆ ಮೋಸ ಹೋದವರು. ಪ್ರವೀಣ್ ಅಗರ್ ವಾಲ್ ಎಂಬಾತ ತಾನು ಮಿಲಿಟರಿಯಲ್ಲಿ ಕೆಲಸ ಮಾಡುತ್ತಿದ್ದು, ಬೆಂಗಳೂರಿನಿಂದ ಕಾಶ್ಮೀರಕ್ಕೆ ವರ್ಗಾವಣೆಯಾಗಿರುವುದಾಗಿ ತಿಳಿಸಿದ್ದಾನೆ. ಹೀಗಾಗಿ ಹೊಸದಾಗಿ ತೆಗೆದುಕೊಂಡಿರುವ ಜ್ಯುಪಿಟರ್ ಸ್ಕೂಟರ್ ಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ಮಹಿಳೆ ಪ್ರವೀಣ್ ಖಾತೆಗೆ 42,250 ರೂಪಾಯಿ ಜಮಾ ಮಾಡಿದ್ದಾರೆ.

 ಗುಜರಿ ವ್ಯಾಪಾರಿಗಳಿಂದ 83 ಕೋಟಿ ರೂಪಾಯಿ ಜಿಎಸ್ ಟಿ ವಂಚನೆ! ಗುಜರಿ ವ್ಯಾಪಾರಿಗಳಿಂದ 83 ಕೋಟಿ ರೂಪಾಯಿ ಜಿಎಸ್ ಟಿ ವಂಚನೆ!

ಇದಾದ ಬಳಿಕ ಹೊಸ ಸ್ಕೂಟರ್ ನ ರಿಜಿಸ್ಟರ್ ನಂಬರ್ ಪರೀಕ್ಷಿಸಿದಾಗ ಅದು ಬೇರೊಬ್ಬರ ಹೆಸರಿನಲ್ಲಿ ನೋಂದಣಿಯಾಗಿರುವುದು ತಿಳಿದುಬಂದಿದೆ. ಗಾಬರಿಗೊಂಡ ಮಹಿಳೆ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ.

Woman Cheated In The Name Of OLX

"ಆನ್‌ಲೈನ್‌ನಲ್ಲಿ ಖರೀದಿಸುವ ವಸ್ತುಗಳ ಪೂರ್ಣ ಮಾಹಿತಿ ತಿಳಿದುಕೊಳ್ಳಬೇಕು. ಹಣದ ಮರುಪಾವತಿಯ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡು ವ್ಯವಹಾರ ಮಾಡಬೇಕು ಹಾಗೂ ಯಾವುದೇ ಕಾರಣಕ್ಕೂ ಮುಂಗಡ ಹಣ ನೀಡಬಾರದು" ಎಂದು ಪೊಲೀಸರು ಸಾರ್ವಜನಿಕರಿಗೆ ತಿಳಿಸಿದ್ದಾರೆ.

English summary
A man has cheated a woman in the name of olx. Women transferred 42,000 believing that he will sell a scooter at the OLX.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X