ಎನ್‌ಆರ್ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ ತನ್ವೀರ್ ಸೇಠ್: ಈ ಬಾರಿ ಪ್ರತಿ ಸ್ಫರ್ಧಿ ಯಾರು..?
ಮೈಸೂರು ಜನವರಿ 7: ಮೈಸೂರು ಜಿಲ್ಲೆಯ ವಿಧಾಸಭಾ ಕ್ಷೇತ್ರಗಳ ಪೈಕಿ ಒಂದಾಗಿರುವ ನರಸಿಂಹರಾಜ(ಎನ್ ಆರ್) ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ತನ್ವೀರ್ ಸೇಠ್ ಸೋಲಿಲ್ಲದ ಸರದಾರನಂತೆ ಪ್ರತಿ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಲೇ ಬರುತ್ತಿದ್ದಾರೆ. ಇಲ್ಲಿ ಬಿಜೆಪಿ ಒಮ್ಮೆ ಗೆಲುವು ಸಾಧಿಸಿದ್ದರೆ ಜೆಡಿಎಸ್ ಖಾತೆಯನ್ನೇ ತೆರೆದಿಲ್ಲ.
ಈಗಾಗಲೇ ಚುನಾವಣಾ ಬಿಸಿ ಆರಂಭವಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ಹಾಲಿ ಶಾಸಕರು ಮತ್ತೆ ತಮಗೆ ಟಿಕೆಟ್ ಸಿಗುತ್ತಾ ಎನ್ನುವ ಚಡಪಡಿಕೆಯಲ್ಲಿದ್ದರೆ, ತನ್ವೀರ್ ಸೇಠ್ ಮಾತ್ರ ತಮ್ಮ ಪಾಡಿಗೆ ತಾವು ಎಂಬಂತೆ ಇದ್ದಾರೆ. ಕಾರಣ ಸದಾ ಗೆಲುವನ್ನೇ ಹೊದ್ದು ಕುಳಿತಿರುವ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡಲೇಬೇಕಾಗಿದೆ. ಕಳೆದ ಐದು ಚುನಾವಣೆಗಳಲ್ಲಿ ಗೆಲುವು ಸಾಧಿಸಿಕೊಂಡು ಬರುತ್ತಿರುವ ಅವರಿಗೆ ಟಿಕೆಟ್ ಪಕ್ಕಾ ಅಷ್ಟೇ ಅಲ್ಲ ಗೆಲುವು ಕೂಡ ಪಕ್ಕಾ ಎಂದು ರಾಜಕೀಯ ವಿಶ್ಲೇಷಣೆ ಮಾಡಲಾಗುತ್ತಿದೆ.
ಪ್ರತಿ ಬಾರಿಯೂ ತನ್ವೀರ್ ಸೇಠ್ ಅವರೇ ಗೆಲುವು ಸಾಧಿಸುತ್ತಾ ಬರುತ್ತಿದ್ದು ಅವರನ್ನು ಹೊರತು ಪಡಿಸಿ ಉಳಿದಂತೆ ಅವರ ವಿರುದ್ಧ ಗೆಲುವು ಪಡೆಯುವುದು ಜೆಡಿಎಸ್ ಮತ್ತು ಬಿಜೆಪಿಗೆ ಸಾಧ್ಯವಾಗದಂತಾಗಿದೆ. ಸದ್ಯ ಕ್ಷೇತ್ರದಲ್ಲಿ ತನ್ವೀರ್ ಸೇಠ್ ಅವರು ಸುಲಭ ಜಯ ಸಾಧಿಸುತ್ತಾರೆ ಎಂಬ ಮಾತುಗಳು ಈಗಿನಿಂದಲೇ ಕೇಳಿ ಬರುತ್ತಿದೆ. ಇದಕ್ಕೆ ಕಾರಣವೇನು ಎಂಬುದನ್ನು ನೋಡುವುದಾದರೆ ಕ್ಷೇತ್ರದಲ್ಲಿ ಅವರು ಮಾಡಿರುವ ಕೆಲಸಗಳು ಮತ್ತು ಜನ ಸಂಪರ್ಕ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಸೋಲು ಕಾಣದ ತನ್ವೀರ್ ಸೇಠ್
ತನ್ವೀರ್ ಸೇಠ್ ಅವರ ಮೇಲೆಯೇ ಹಲ್ಲೆಗಳು ನಡೆದಿದ್ದರೂ ಕ್ಷೇತ್ರದಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಯಾವುದೇ ರೀತಿಯ ಗಲಭೆಗಳಿಗೆ ಅವಕಾಶವಾಗದಂತೆ ನೋಡಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಆ ಮತಗಳು ತನ್ವೀರ್ ಸೇಠ್ ಕೈಬಿಟ್ಟಿಲ್ಲ. ಹೀಗಾಗಿ ಪ್ರತಿ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾ ಬರುತ್ತಿದ್ದಾರೆ. ಅವರ ರಾಜಕೀಯ ನಡೆಯನ್ನು ಗಮನಿಸಿದ್ದೇ ಆದರೆ 2,000 ಇಸವಿಯಲ್ಲಿ ತಂದೆ ಅಜೀಜ್ ಸೇಠ್ ರವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ನಂತರ ಅವರು ಹಿಂತಿರುಗಿ ನೋಡಿಲ್ಲ.

ಕ್ರೇತ್ರದಲ್ಲಿ ಹಿಡಿತ ಸಾಧಿಸಿದ ತನ್ವೀರ್ ಸೇಠ್
ನರಸಿಂಹರಾಜ ಕ್ಷೇತ್ರದಲ್ಲಿ ಇದುವರೆಗೆ ಒಂದು ಉಪಚುನಾವಣೆ ಸೇರಿದಂತೆ 5 ಚುನಾವಣೆಗಳನ್ನು (2002, 2004, 2008, 2013, 2018) ಎದುರಿಸಿದ್ದಾರೆ. ಈ ಎಲ್ಲಾ ಚುನಾವಣೆಗಳಲ್ಲೂ ಗೆಲುವು ಸಾಧಿಸಿರುವುದು ಅವರು ಕ್ಷೇತ್ರದಲ್ಲಿ ಎಂತಹ ಹಿಡಿತ ಸಾಧಿಸಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಕ್ಷೇತ್ರ ವ್ಯಾಪ್ತಿಯ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಭ್ರಷ್ಟಾಚಾರ ಮುಕ್ತ ಅಧಿಕಾರ ನೀಡಿದ್ದಾರೆ. ಜತೆಗೆ ಕೋಮುಗಲಭೆಗೆ ಆಸ್ಪದ ನೀಡಿಲ್ಲ. ಹೀಗಾಗಿ ಮತದಾರರು ಇವರ ಕೈಬಿಡುತ್ತಿಲ್ಲ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಅಭಿಪ್ರಾಯವಾಗಿದೆ.

ಜೆಡಿಎಸ್ ಮೊದಲ ಪಟ್ಟಿಯಲ್ಲಿ ಘೋಷಣೆಯಾಗದ ಅಭ್ಯರ್ಥಿ ಹೆಸರು
ಎನ್ ಆರ್ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಮತಗಳೇ ನಿರ್ಣಾಯಕವಾಗಿದ್ದು, ಇಲ್ಲಿ ತನ್ವೀರ್ ಸೇಠ್ ಅವರಿಗೆ ಸ್ಪರ್ಧೆ ನೀಡುವ ಪ್ರಬಲ ನಾಯಕರ ಕೊರತೆಯಿದ್ದು, ಜೆಡಿಎಸ್ ಗೆಲುವಿಗೆ ಪ್ರಯತ್ನ ಪಡುತ್ತಿದ್ದರೂ ಇದುವರೆಗೆ ಖಾತೆಯನ್ನೇ ತೆರೆಯಲು ಸಾಧ್ಯವಾಗಿಲ್ಲ. ಈ ಬಾರಿಯೂ ಜೆಡಿಎಸ್ ಮತ್ತು ಬಿಜೆಪಿಯಿಂದ ಕೆಲವು ನಾಯಕರು ಕಣಕ್ಕಿಳಿಯಲು ಮುಂದಾಗಿದ್ದಾರೆ. ಜೆಡಿಎಸ್ ಮೊದಲ ಪಟ್ಟಿಯಲ್ಲಿ ಎನ್ ಆರ್ ಕ್ಷೇತ್ರಕ್ಕೆ ಘೋಷಣೆ ಮಾಡಿಲ್ಲ. ಆದರೂ ಜೆಡಿಎಸ್‌ನಿಂದ ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ಅಬ್ದುಲ್ಲಾ ಈ ಸಲವೂ ಸ್ಪರ್ಧಿಸುವ ಹುಮ್ಮಸ್ಸು ತೋರುತ್ತಿದ್ದಾರೆ. ಕೊನೆಗಳಿಗೆಯಲ್ಲಿ ಜೆಡಿಎಸ್ ಯಾರನ್ನು ಕಣಕ್ಕಿಳಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಎನ್ ಆರ್ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ..?
ಸದ್ಯ ಕ್ಷೇತ್ರದಲ್ಲಿ ತನ್ವೀರ್ ಸೇಠ್ ಅವರಿಗೆ ಪ್ರಬಲ ಸ್ಪರ್ಧೆ ನೀಡಲು ತಳಮಟ್ಟದಿಂದ ಎಸ್ ಡಿಪಿಐ ಸಂಘಟನೆ ಮಾಡುತ್ತಾ ಬಂದಿದ್ದು, ಮುಸ್ಲಿಂ ಸಮುದಾಯದ ಮತಗಳನ್ನು ಕಲೆ ಹಾಕುತ್ತಿರುವ ಎಸ್ ಡಿಪಿಐ ರಾಜ್ಯಾದ್ಯಕ್ಷ ಅಬ್ದುಲ್ ಮಜೀದ್ ಈ ಬಾರಿ ಸ್ಪರ್ಧಿಸುವ ಸಾಧ್ಯತೆಯಿದೆ. ಉಳಿದಂತೆ ಬಿಜೆಪಿಯಿಂದ ಸಂದೇಶ್‌ಸ್ವಾಮಿ, ಎಚ್.ಜಿ.ಗಿರಿಧರ್ ಪ್ರಬಲ ಆಕಾಂಕ್ಷಿಯಾಗಿದ್ದು, ಇವರಿಬ್ಬರ ನಡುವೆ ಯಾರಿಗೆ ಬಿಜೆಪಿ ಟಿಕೆಟ್ ದಕ್ಕುತ್ತದೆಯೋ ಗೊತ್ತಿಲ್ಲ. ಕ್ಷೇತ್ರದಲ್ಲಿ ಬಿಜೆಪಿಯಿಂದ 1994ರಲ್ಲಿ ಮಾರುತಿರಾವ್ ಪವಾರ್ ಗೆಲುವು ಸಾಧಿಸಿದ್ದನ್ನು ಹೊರತು ಪಡಿಸಿದರೆ ಆ ನಂತರ ಇದುವರೆಗೆ ಬಿಜೆಪಿ ಗೆಲುವು ಕಂಡಿಲ್ಲ.

ಈ ಬಾರಿಯೂ ತನ್ವೀರ್ ಸೇಠ್ ಗೆ ಗೆಲುವು ಖಚಿತವೇ..?
ಇದುವರೆಗೆ ಕ್ಷೇತ್ರದಲ್ಲಿ ಸುಮಾರು 16 ಚುನಾವಣೆಗಳು ನಡೆದಿದ್ದು ಆ ಪೈಕಿ ಸುಮಾರು 12 ಚುನಾವಣೆಗಳಲ್ಲಿ ತಂದೆ ಅಜೀಜ್ ಸೇಠ್ ಮತ್ತು ಪುತ್ರ ತನ್ವೀರ್ ಸೇಠ್ ಗೆಲುವು ಸಾಧಿಸಿದ್ದಾರೆ. ಇದನ್ನು ಗಮನಿಸಿದರೆ ಇನ್ನೊಂದಷ್ಟು ವರ್ಷ ತನ್ವೀರ್ ಸೇಠ್ ಅವರ ಪಾರುಪತ್ಯ ನಡೆಯಬಹುದೇನೋ..? ಸದ್ಯ ತನ್ವೀರ್ ಸೇಠ್ ಗೆ ಪ್ರಬಲ ಸ್ಪರ್ಧೆಯನ್ನು ನೀಡುವ ನಾಯಕನನ್ನು ಕ್ಷೇತ್ರದಲ್ಲಿ ಹುಟ್ಟು ಹಾಕುವುದು ಜೆಡಿಎಸ್ ಮತ್ತು ಬಿಜೆಪಿಗೆ ಕಷ್ಟವಾಗಿದೆ. ಇದೆಲ್ಲವನ್ನು ಗಮನಿಸಿದರೆ ಈ ಬಾರಿಯೂ ತನ್ವೀರ್ ಸೇಠ್ ಗೆ ಗೆಲುವು ಖಚಿತ ಎನ್ನಬಹುದು. ಆದರೆ ಎಲ್ಲದಕ್ಕೂ ಚುನಾವಣೆ ತನಕ ಕಾಯಲೇ ಬೇಕಾಗಿದೆ.
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications