ಬೆಂಗಳೂರಿನಿಂದ ಮೈಸೂರಿಗೆ ಬರುವವರಿಗೆ ಇನ್ಮುಂದೆ ನಿರ್ಬಂಧ?

ಮೈಸೂರು, ಜುಲೈ 6: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಬರುವ ಪ್ರವಾಸಿಗರ ನಿರ್ಬಂಧಕ್ಕೆ ಚಿಂತನೆ ನಡೆಸಲಾಗುತ್ತಿದೆ.

Recommended Video

      Bubonic Plague Says Hello China:ಚೀನಾದಲ್ಲಿ 'ಬುಬೊನಿಕ್ ಪ್ಲೇಗ್' ಮಾರಣಾಂತಿಕ ರೋಗ ಪತ್ತೆ| Oneindia Kannada

      ಈ ಕುರಿತು ಮಾಧ್ಯಮಗಳಿಗೆ ಇಂದು ಪ್ರತಿಕ್ರಿಯಿಸಿರುವ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್, ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಜಾಸ್ತಿ ಆಗುತ್ತಿದೆ. ಹೀಗಾಗಿ ಬೆಂಗಳೂರಿನಿಂದ ಬರುವ ಪ್ರವಾಸಿಗರ ನಿರ್ಬಂಧಕ್ಕೆ ಒತ್ತಾಯ ಇದೆ. ಬೆಂಗಳೂರಿನಿಂದ ಬರುವವರ ತಪಾಸಣೆ, ನಿಷೇಧ ಕಷ್ಟ ಸಾಧ್ಯ ಇದೆ. ಈ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

       ರೆಸಾರ್ಟ್ ಗಳಿಗೆ ಬರುವವರಿಗೆ ನಿಷೇಧದ ಚರ್ಚೆ

      ರೆಸಾರ್ಟ್ ಗಳಿಗೆ ಬರುವವರಿಗೆ ನಿಷೇಧದ ಚರ್ಚೆ

      ಈಗ ತೆಗೆಯುತ್ತಿರುವ ಸ್ಯಾಂಪಲ್ ನಲ್ಲಿ ಹೆಚ್ಚು ಪಾಸಿಟಿವ್ ಬರುತ್ತಿವೆ. ಮರಣ ಪ್ರಮಾಣ ಕೂಡ ಜಾಸ್ತಿ ಆಗುತ್ತಿವೆ. ರೆಸಾರ್ಟ್ ಗಳಿಗೆ ಬರುತ್ತಿರುವ ಪ್ರವಾಸಿಗರ ನಿಷೇಧದ ಬಗ್ಗೆ ಗಂಭೀರವಾಗಿ ಚರ್ಚೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಸರ್ಕಾರಿ ಅಧಿಕಾರಿಗಳಿಗೆ ಕೊರೊನಾ ಸೋಂಕು ಹೆಚ್ಚುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರಿ ಅಧಿಕಾರಿಗಳಿಗೆ ಕೊರೊನಾ ಸೋಂಕು ಹೆಚ್ಚುತ್ತಿದೆ. ಅಂತಹ ಕಚೇರಿಗಳನ್ನು ಬಂದ್ ಮಾಡಲು ಆಗಲ್ಲ. ಈಗ ಎಲ್ಲಾ ಕಡೆ ರೈತರು ತಮ್ಮ ಕೆಲಸ ಕಾರ್ಯಗಳಿಗೆ ಬರುವ ಸಮಯ. ನಾವು ಅವರನ್ನು ಬರಬೇಡಿ ಅಂತ ಹೇಳಲು ಆಗಲ್ಲ. ಆದರೆ ಅನವಶ್ಯಕವಾಗಿ ಎಲ್ಲಿಗೂ ಹೋಗಬೇಡಿ. ಸುಖಾಸುಮ್ಮನೆ ಕಚೇರಿಗಳಿಗೆ ಅಲೆದಾಡಬೇಡಿ. ಇದರಿಂದ ಎಲ್ಲರಿಗೂ ತೊಂದರೆ ಆಗುತ್ತದೆ. ಸಾಧ್ಯವಾದಷ್ಟು ಎಲ್ಲರಿಗೂ ಹೆಚ್ಚು ಓಡಾಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದರು.

       ಇಂದು ಅರ್ಧ ಶತಕ ದಾಟಲಿದೆಯೇ ಪಾಸಿಟಿವ್ ಸಂಖ್ಯೆ?

      ಇಂದು ಅರ್ಧ ಶತಕ ದಾಟಲಿದೆಯೇ ಪಾಸಿಟಿವ್ ಸಂಖ್ಯೆ?

      ಇಂದು ಒಂದೇ ದಿನ 59ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ಬರುವ ಸಾಧ್ಯತೆಯಿದೆ. ತಿ.ನರಸೀಪುರ ತಾಲ್ಲೂಕಿನಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ತಿ.ನರಸೀಪುರ ಪಟ್ಟಣ 1, ಬೆನಕನಹಳ್ಳಿ 2, ಮುತ್ತತ್ತಿ ಗ್ರಾಮದಲ್ಲಿ 1 ಪಾಸಿಟಿವ್ ದೃಢವಾಗಿದೆ. ಜೊತೆಗೆ ಗ್ರಾಮೀಣ ಭಾಗದಲ್ಲಿ ಸೋಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

       ಸೆಲ್ಫ್‌ ಕ್ವಾರಂಟೈನ್ ನಲ್ಲಿ ಸಾರಾ ಮಹೇಶ್

      ಸೆಲ್ಫ್‌ ಕ್ವಾರಂಟೈನ್ ನಲ್ಲಿ ಸಾರಾ ಮಹೇಶ್

      ಇಂದು ಕೆ.ಆರ್. ನಗರದ ತಹಶೀಲ್ದಾರ್ ಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಶಾಸಕ ಸಾ.ರಾ.ಮಹೇಶ್‌ ಹೋಂ ಕ್ವಾರಂಟೈನ್ ವಿಧಿಸಲಾಇಗೆ. ಎರಡು ದಿನಗಳ ಹಿಂದೆ ತಹಶೀಲ್ದಾರ್ ಜತೆ ಕಂಟೈನ್ ‌ಮೆಂಟ್ ಝೋನ್‌ಗೆ ಸಾ.ರಾ. ಮಹೇಶ್ ಭೇಟಿ ನೀಡಿದ್ದರು. ಸಾಲಿಗ್ರಾಮದ ಸೀಲ್ ‌ಡೌನ್ ಪ್ರದೇಶಕ್ಕೆ ಭೇಟಿ ನೀಡಿ ಜನರಿಗೆ ಆತ್ಮಸ್ಥೈರ್ಯ ತುಂಬಿದ್ದರು. ಜೊತೆಗೆ ಬ್ರಾಹ್ಮಣರ ಬೀದಿ ಮತ್ತು ಕೋಟೆ ಬೀದಿಗಳಲ್ಲಿನ 150ಕ್ಕೂ ಹೆಚ್ಚು ಕುಟುಂಬದವರಿಗೆ ಅಗತ್ಯ ವಸ್ತುಗಳು ವಿತರಿಸಿದ್ದರು. ಇದೀಗ ತಹಶೀಲ್ದಾರ್ ‌ಗೆ ಸೋಂಕು ಹಿನ್ನೆಲೆಯಲ್ಲಿ ಸೆಲ್ಫ್‌ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

       ಪ್ರತ್ಯೇಕವಾಗಿ ಮನೆಯಲ್ಲೇ ಚಿಕಿತ್ಸೆ ಪಡೆಯುವ ಬಗ್ಗೆ ಮಾರ್ಗಸೂಚಿ

      ಪ್ರತ್ಯೇಕವಾಗಿ ಮನೆಯಲ್ಲೇ ಚಿಕಿತ್ಸೆ ಪಡೆಯುವ ಬಗ್ಗೆ ಮಾರ್ಗಸೂಚಿ

      ಇತರೆ ಕಾಯಿಲೆಗಳಿಲ್ಲದ ವ್ಯಕ್ತಿಗಳಿಗೆ ಕೊರೊನಾ ಸೋಂಕು ಕಂಡುಬಂದರೆ ಮನೆಯಲ್ಲೇ ಚಿಕಿತ್ಸೆ ನೀಡಲು ಸರ್ಕಾರ ಮುಂದಾಗಿದೆ. ಕೊರೊನಾ ಗುಣಲಕ್ಷಣಗಳಿಲ್ಲದ ಸೋಂಕಿತ ವ್ಯಕ್ತಿಗಳಿಗೆ ಹೋಂ ಐಸೊಲೇಷನ್ ಸೂಚಿಸಲಾಗುತ್ತದೆ. ವೃದ್ಧರಿಗೆ ಹಾಗೂ ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದ. ಉಳಿದವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದಕ್ಕೆ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+