ಮೈಸೂರು-ಬೆಳಗಾವಿ ರೈಲ್ವೆ ಪ್ರಯಾಣಿಕರ ಗಮನಕ್ಕೆ

ಮೈಸೂರು, ಜನವರಿ 07 : ವಿಶ್ವಮಾನವ ಎಕ್ಸ್‌ಪ್ರೆಸ್ ರೈಲು ಬೆಳಗಾವಿ-ಮೈಸೂರು ನಡುವೆ ಮಾತ್ರ ಸಂಚಾರ ನಡೆಸಲಿದೆ. ಮೈಸೂರು-ಹುಬ್ಬಳ್ಳಿ ನಡುವೆ ಸಂಚಾರ ನಡೆಸುತ್ತಿದ್ದ ರೈಲನ್ನು ನವೆಂಬರ್ 1ರಿಂದ ಬೆಳಗಾವಿ ತನಕ ವಿಸ್ತರಣೆ ಮಾಡಲಾಗಿತ್ತು.

ರೈಲು ನಂಬರ್ 17325/26 ವಿಶ್ವಮಾನ ಎಕ್ಸ್‌ಪ್ರೆಸ್ ರೈಲು ಅಶೋಕಪುರಂ- ಬೆಳಗಾವಿ ನಡುವೆ ಸಂಚಾರ ನಡೆಸುತ್ತಿತ್ತು. ಆದರೆ, ಜನವರಿ 13ರಿಂದ ರೈಲು ಮೈಸೂರು-ಬೆಳಗಾವಿ ನಡುವೆ ಮಾತ್ರ ಸಂಚರಿಸಲಿದೆ ಎಂದು ಪ್ರಕಟಣೆ ಹೇಳಿದೆ.

Vishwamanava Express Train Will Not Run From Ashokapuram

ಕಾರಣಾಂತರಗಳಿಂದಾಗಿ ಅಶೋಕಪುರಂನಿಂದ ರೈಲು ಸಂಚಾರ ನಡೆಸುವುದಿಲ್ಲ ಎಂದು ನೈಋತ್ಯ ರೈಲ್ವೆ ಹೇಳಿದೆ. ಉಳಿದಂತೆ ರೈಲಿನ ವೇಳಾಪಟ್ಟಿ, ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪ್ರಕಟಣೆ ಸ್ಪಷ್ಟಪಡಿಸಿದೆ.

ವೇಳಾಪಟ್ಟಿ : ಬೆಳಗ್ಗೆ 5.15ಕ್ಕೆ ಮೈಸೂರಿನಿಂದ ಹೊರಡುವ ರೈಲು ಸಂಜೆ 6.53ಕ್ಕೆ ಹುಬ್ಬಳ್ಳಿಗೆ ತಲುಪಲಿದೆ. ರಾತ್ರಿ 7.32ಕ್ಕೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 11.15ಕ್ಕೆ ಬೆಳಗಾವಿಗೆ ತಲುಪಲಿದೆ.

ಬೆಳಗಾವಿಯಿಂದ ಬೆಳಗ್ಗೆ 5ಕ್ಕೆ ಹೊರಡುವ ರೈಲು 8.25ಕ್ಕೆ ಹುಬ್ಬಳ್ಳಿ ತಲುಪಲಿದೆ. 8.45ಕ್ಕೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 9.15ಕ್ಕೆ ಮೈಸೂರು ತಲುಪಲಿದೆ.

ವಿಶ್ವಮಾನವ ಎಕ್ಸ್‌ಪ್ರೆಸ್ ರೈಲು ಮೈಸೂರು-ಹುಬ್ಬಳ್ಳಿ ನಡುವೆ ಸಂಚಾರ ನಡೆಸುತ್ತಿತ್ತು. 2019ರ ನವೆಂಬರ್ 1ರಿಂದ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲಾಗಿತ್ತು.

ಬೆಳಗಾವಿ ಜನರ ಬೇಡಿಕೆ ಹಿನ್ನಲೆಯಲ್ಲಿ ರೈಲು ಸೇವೆಯನ್ನು ವಿಸ್ತರಣೆ ಮಾಡಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಹೇಳಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+