ಸದ್ಯದಲ್ಲೇ ಮೈಸೂರಿನಲ್ಲಿ ಡಾ.ವಿಷ್ಣು ಸ್ಮಾರಕ ಕಾಮಗಾರಿ ಆರಂಭ
ಮೈಸೂರು, ಜೂನ್ 19: ಚಿತ್ರರಂಗದ ಧ್ರುವತಾರೆ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕಾಮಗಾರಿ ಸದ್ಯದಲ್ಲೇ ಆರಂಭವಾಗಲಿದೆ.
ನಗರದ ಹೊರವಲಯದ ಜಯಪುರ ಹೋಬಳಿಯ ಹಾಲಾಳು ಗ್ರಾಮದ ಸರ್ವೆ ನಂಬರ್ 8ರಲ್ಲಿ 34.5 ಗುಂಟೆ ಜಾಗದಲ್ಲಿ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಲು ಸರ್ಕಾರ ಭೂಮಿ ಕಾಯ್ದಿರಿಸಿತ್ತು. ಈ ನಿವೇಶನದಲ್ಲಿ ವ್ಯವಸಾಯ ಮಾಡುತ್ತಿದ್ದವರು ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದರು. ಆದರೆ ತಡೆಯಾಜ್ಞೆ ತಂದವರು ವಿಚಾರಣೆ ವೇಳೆ ನಾಲ್ಕು ಬಾರಿ ಗೈರು ಹಾಜರಾದ ಕಾರಣ ನ್ಯಾಯಾಲಯ ತಡೆಯಾಜ್ಞೆಯನ್ನು ತೆರವುಗೊಳಿಸಿ ಸ್ಮಾರಕ ನಿರ್ಮಾಣಕ್ಕೆ ಆದೇಶಿಸಿದೆ.

ಅತಿ ಶೀಘ್ರದಲ್ಲಿ ವಿಷ್ಣು ಸ್ಮಾರಕ ನಿರ್ಮಾಣವನ್ನು ಆರಂಭಿಸಲು ಕ್ರಮ ಜರುಗಿಸಿದ್ದಾರೆ. ಕಳೆದ ವಾರಕ್ಕೂ ಮುಂಚೆ ಸರ್ಕಾರ ಹಾಲಾಳು ಗ್ರಾಮದಲ್ಲಿ ವಿಷ್ಣು ಸ್ಮಾರಕ ಗುರುತಿಸಿರುವ ಸ್ಥಳವನ್ನು ಸ್ವಚ್ಛಗೊಳಿಸಲು ಗುತ್ತಿಗೆದಾರರನ್ನು ಕಳುಹಿಸಿದಾಗ ರೈತರು ತಡೆ ಮಾಡಿದ್ದರಂತೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗೆ ಅವಕಾಶ ನೀಡದಂತೆ ಸರ್ಕಾರ ಎಚ್ಚರ ವಹಿಸಿ ಕಾನೂನು ಚೌಕಟ್ಟಿನಲ್ಲಿ ಕ್ರಮ ಜರುಗಿಸಲಿದೆ. ಇನ್ನೊಂದು ವಾರದೊಳಗೆ ಕಾಮಗಾರಿ ಆರಂಭಿಸಲು ಪ್ರಧಾನ ಕಾರ್ಯದರ್ಶಿ, ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರಿಗೆ ಆದೇಶ ಕಳುಹಿಸಿದ್ದಾರೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ












Click it and Unblock the Notifications