ಮೈಸೂರು: ಊರ ದೈವ ಬಸವನ ಚೇತರಿಕೆಗೆ ದೇವರ ಮೊರೆ
ಮೈಸೂರು, ಮೇ 14: ಮೈಸೂರು ಸಮೀಪದ ಕೆ.ಆರ್ ನಗರ ತಾಲ್ಲೂಕಿನ ಕಾಳಮ್ಮನಕೊಪ್ಪಲು ಗ್ರಾಮದ ಬಸವನ ಉಳಿವಿಗಾಗಿ ಗ್ರಾಮಸ್ಥರು ದೇವರ ಮೊರೆ ಹೋಗಿದ್ದಾರೆ. ಕಳೆದ 15 ದಿನಗಳಿಂದ ಅನಾರೋಗ್ಯದಿಂದ ನರಳುತ್ತಿರುವ ಬಸವ ಬೇಗ ಚೇತರಿಸಿಕೊಳ್ಳಲಿ ಎಂದು ನಿತ್ಯ ಪೂಜೆ, ಪುನಸ್ಕಾರಗಳಲ್ಲಿ ಗ್ರಾಮಸ್ಥರು ತೊಡಗಿದ್ದಾರೆ.
Recommended Video
ಗ್ರೀನ್ ಝೋನ್ ನಲ್ಲಿರುವ ರಾಮನಗರದಲ್ಲಿ ಆತಂಕ! ಈ ಟೈಮ್ ನಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಬೇಕಿತ್ತಾ! | Ramanagara
ಕಾಳಮ್ಮನಕೊಪ್ಪಲು ಗ್ರಾಮಸ್ಥರಿಗೆ ಊರ ದೈವವೇ ಆಗಿದ್ದ ಬಸವ ಅನಾರೋಗ್ಯಕ್ಕೆ ತುತ್ತಾಗಿದೆ. ಈ ಹಿಂದೆ ಚಿತ್ರನಟ ದರ್ಶನ್ ಈ ಬಸವನನ್ನು ಭೇಟಿ ಮಾಡಿದ್ದರು. ಗ್ರಾಮಸ್ಥರೆಲ್ಲರೂ ದರ್ಶನ್ ಅವರು ಪುನಃ ಬಂದು ಭೇಟಿ ಮಾಡಿದರೆ ಬಸವ ಉಳಿಯುತ್ತಾನೆ ಎಂದು ಹೇಳುತ್ತಿದ್ದು, ದರ್ಶನ್ ಭೇಟಿಗೂ ಮನವಿ ಮಾಡಿದ್ದಾರೆ. ಅದರೆ ನಟ ದರ್ಶನ್ ಅವರು ಬಂದಿಲ್ಲ.

ಚಿತ್ರನಟ ದರ್ಶನ್ ಅವರ ಪರವಾಗಿ ಅವರ ಸ್ನೇಹಿತರು ಬಸವನಿಗೆ ಔಷಧಿಗಳನ್ನು ತರಿಸಿ ಕೊಟ್ಟಿದ್ದಾರೆ. ಬಸವನ ರಕ್ತವನ್ನು ಪರೀಕ್ಷಿಸಲು ಮೈಸೂರಿನ ಲ್ಯಾಬ್ ಗೆ ಕಳುಹಿಸಲಾಗಿದೆ ಎಂದು ಬಸವನಿಗೆ ಚಿಕಿತ್ಸೆ ನೀಡುತ್ತಿರುವ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸುರೇಂದ್ರ ತಿಳಿಸಿದರು.












Click it and Unblock the Notifications